September 6, 2026
ಆಯ್ಕೆಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಪುಂಜಾಲಕಟ್ಟೆ : 3ನೇ ವರ್ಷದ ಶ್ರೀ ಗೌರಿ ಗಣೇಶೋತ್ಸವ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ

ಪುಂಜಾಲಕಟ್ಟೆ: ಪುಂಜಾಲಕಟ್ಟೆಯ ಮೂರನೇ ವರ್ಷದ ಶ್ರೀ ಗೌರಿ ಗಣೇಶೋತ್ಸವ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆಯು ಬಂಗ್ಲೆ ಮೈದಾನದಲ್ಲಿ ಸದಸ್ಯರ ಸಮ್ಮುಖದಲ್ಲಿ ಜೂ. 8ರಂದು ನಡೆಯಿತು.

ಅಧ್ಯಕ್ಷರಾಗಿ ಕೌಶಿಕ್ ಶೆಟ್ಟಿ ಕಾಡಿಮಾರ್, ಪ್ರಧಾನ ಕಾರ್ಯದರ್ಶಿಯಾಗಿ ಹರೀಶ್ ಪೂಜಾರಿ ಅನಿಲಡೆ, ಕೋಶಾಧಿಕಾರಿಯಾಗಿ ಗಿರೀಶ್ ಮೂಲ್ಯ ಅನಿಲಡೆ, ಆಯ್ಕೆಯಾದರು.

ಸಮಿತಿಯ ಗೌರವಾಧ್ಯಕ್ಷರಾದ ಮಾಜಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಎಮ್. ತುಂಗಪ್ಪ ಬಂಗೇರ ಮಾತನಾಡಿ, 2 ವರ್ಷದಲ್ಲಿ ಗಣೇಶ ಚತುರ್ಥಿ ಯಶಸ್ವಿಯಾಗಿ ನಡೆಯಲು ನಮಗೆ ಅದೆಷ್ಟೋ ದಾನಿಗಳು, ಸೇವಾರೂಪದಲ್ಲಿ ಸಹಕರಿಸಿದ್ದಾರೆ ಇಂಥವರ ಸೇವಾ ಮನೋಭಾವನೆಯಿಂದಲೇ ಸಾರ್ವಜನಿಕ ಗಣೇಶೋತ್ಸವ ಯಶಸ್ವಿಯಾಗಿ ನಡೆದಿದೆ ಹಾಗೂ ಮುಂದೆಯೂ ಸೇವಕರ್ತರ, ಹಾಗೂ ಆನ್ನದಾನಿಗಳ ಸಹಕಾರ ಇರಲಿ ಎಂದು ಮಾತನಾಡಿ ನೂತನ ಸಮಿತಿಗೆ ಶುಭ ಹಾರೈಸಿದರು.

ನೂತನ ಸಮಿತಿಯ ಪದಾಧಿಕಾರಿಗಳ ಗೌರವಾಧ್ಯಕ್ಷರಾಗಿ ಎಮ್. ತುಂಗಪ್ಪ ಬಂಗೇರ ಮೂರ್ಜೆ, ಪ್ರಕಾಶ್ ಪೂಜಾರಿ ಅನಿಲಡೆ ಉಪಾಧ್ಯಕ್ಷರಾಗಿ ಯಶೋಧರ ಶೆಟ್ಟಿ ದಂಡೆ, ಹರೀಶ್ ಪ್ರಭು ಮಾಡ, ಜೊತೆ ಕೋಶಾಧಿಕಾರಿಯಾಗಿ ಸೀತಾರಾಮ ಶೆಟ್ಟಿಗಾರ್ ನಾಕುನಾಡು, ಕಾರ್ಯದರ್ಶಿಯಾಗಿ ಪ್ರವೀಣ್ ಗೌಡ ನರ್ಸಿಕುಮೇರ್, ಮತ್ತು ಯೋಗೀಶ್ ಆಚಾರ್ಯ ನಿನ್ಯಾರು, ಸಂಘಟನಾ ಕಾರ್ಯದರ್ಶೀಯಾಗಿ ಯೋಗೀಶ್ ಪೂಜಾರಿ ಕುಕ್ಕಳ, ಮತ್ತು ಸುಧಾಕರ ನಾಕುನಾಡು, ಲೆಕ್ಕ ಪರಿಶೋಧಕರಾಗಿ ಮಂಜಪ್ಪ ಮೂಲ್ಯ ಅತ್ತಾಜೆ, ಉದಯ ಕುಮಾರ್ ಶೆಟ್ಟಿ ಮೆಲ್ಮನೆ, ಅನಂತ ಕೃಷ್ಣ ಆಚಾರ್ಯ ಬಾರ್ದೋಟ್ಟು, ಕಿಶೋರ್ ಕುಮಾರ್ ಮೂರ್ಜೆ, ಕಾರ್ಯಕ್ರಮ ಸoಯೋಜಕರಾಗಿ ಕಿಶೋರ್ ಹೆಚ್. ಪೂಜಾರಿ ಹಟ್ಟತೋಡಿ ಮತ್ತು ತಾರಾನಾಥ್ ಕಜೆಕಾರ್ ಹಾಗೂ ಗೌರವ ಸಲಹೆಗಾರರಾಗಿ ಪುನೀತ್ ಕುಮಾರ್ ಮಡಂತ್ಯಾರು, ರಮಾನಂದ ಪೂಜಾರಿ ಮೂರ್ಜೆ, ಚಂದ್ರಶೇಖರ ಶೆಟ್ಟಿಗಾರ್ ಅತ್ತಾಜೆ, ಹರೀಶ್ಚಂದ್ರ ಶೆಟ್ಟಿಗಾರ್ ನಾಕುನಾಡು, ಪ್ರವೀಣ್ ಶೆಟ್ಟಿ ಕುರ್ಡುಮೆ, ಸ್ವಸ್ತಿಕ್ ಗೌಡ ಹಟ್ಟತೋಡಿ ಮತ್ತು ಶ್ರೀ ಗೌರಿ ಮಹಿಳಾ ಸಮಿತಿಯ ಸಂಚಾಲಕರಾಗಿ ಶಶಿಕಲಾ .G.ಪೂಜಾರಿ ಪುಂಜಾಲಕಟ್ಟೆ, ಸಹಸಂಚಾಲಕರಾಗಿ ವಿಜಯ ನಾಕುನಾಡು ಇವರನ್ನು ಸಮಿತಿಯ ಸದಸ್ಯರ ಮತ್ತು ಗ್ರಾಮಸ್ಥರ ಉಪಸ್ಥಿತಿಯಲ್ಲಿ ಆಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ಸ್ಥಾಪಕ ಅಧ್ಯಕ್ಷ ಚಿದಾನಂದ ಮಣಿಂಜ, ಅರ್ಚಕರಾದ ಗೋವಿಂದ ಭಟ್, ಸಂತೋಷ ಭಟ್ ಹಾಗೂ ಊರ ಪ್ರಮುಖರು ಉಪಸ್ಥಿತರಿದ್ದರು. ಈ ಸಭೆಯಲ್ಲಿ ಹರೀಶ್ ಪ್ರಭು ಸ್ವಾಗತಿಸಿದರು. ತಾರಾನಾಥ್ ಕಜೆಕಾರ್ ವಂದಿಸಿದರು.

Related posts

ಜ.12: ಬಳಂಜ ಬದಿನಡೆಯಲ್ಲಿ ಅಯ್ಯಪ್ಪ ಪೂಜೆ, ಇರುಮುಡಿ ಕಟ್ಟುವ ಕಾರ್ಯಕ್ರಮ

Suddi Udaya

ನಡ್ವಾಲ್ ಸಿರಿ ಜಾತ್ರೋತ್ಸವ ಪ್ರಯುಕ್ತ ಶ್ರೀ ಕ್ಷೇ. ಧ.ಗ್ರಾ. ಯೋಜನೆ ಗುರಿಪಳ್ಳ ಒಕ್ಕೂಟದ ವತಿಯಿಂದ ಶ್ರಮದಾನ ಕಾರ್ಯ

Suddi Udaya

ಬೆಳ್ತಂಗಡಿ: ಹಳೆಕೋಟೆ ಡಿಸ್ಕೌಂಟ್ ಸೇಲ್ ಬಟ್ಟೆ ಮತ್ತು ಚಪ್ಪಲಿ ಅಂಗಡಿಯವರಿಂದ ವಯನಾಡ್ ನೆರೆ ಸಂತ್ರಸ್ತರಿಗೆ ದಿ‌ನಬಳಕೆ ವಸ್ತುಗಳ ಸಹಾಯಹಸ್ತ

Suddi Udaya

ಪಡಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಾಧನೆಗೆ ಸಾಧನಾ ಪ್ರಶಸ್ತಿ

Suddi Udaya

ಉಜಿರೆ ರುಡ್ ಸೆಟ್ ಸಂಸ್ಥೆಯಲ್ಲಿ ಕಂಪ್ಯೂಟರ್‌ ಅಕೌಂಟಿಂಗ್‌ ತರಬೇತಿಯ ಸಮಾರೋಪ ಸಮಾರಂಭ

Suddi Udaya

ಬಂಗ್ಲೆಗುಡ್ಡೆಯಲ್ಲಿ ಸಿಕ್ಕ ಏಳು ಅಸ್ಥಿಪಂಜರ ಎಫ್ಎಸ್ಎಲ್ ಗೆ ರವಾನೆ

Suddi Udaya
error: Content is protected !!