32.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಸುಬ್ರಹ್ಮಣ್ಯ ಸೀನಿಯರ್ ಚೇಂಬರ್ ಹಾಗೂ ಡಾ. ರವಿ ಕಕ್ಕೆಪದವು ಸಮಾಜ ಸೇವಾ ಟ್ರಸ್ಟ್‌ ಸಹಯೋಗದಲ್ಲಿ ಕುಮಾರಧಾರದ ಪರಿಸರದಲ್ಲಿ ಸ್ವಚ್ಛತಾ ಕಾರ್ಯ

ಸುಬ್ರಹ್ಮಣ್ಯ : ಸುಬ್ರಹ್ಮಣ್ಯ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಲಿಜನ್ ಹಾಗೂ ಡಾ. ರವಿ ಕಕ್ಕೆಪದವು ಸಮಾಜ ಸೇವಾ ಟ್ರಸ್ಟ್‌ ಇದರ ಸಹಯೋಗದಲ್ಲಿ ಜೂ. 8 ರಂದು ಸುಬ್ರಹ್ಮಣ್ಯ ಶ್ರೀ ಕ್ಷೇತ್ರದ ಪವಿತ್ರ ಕುಮಾರಧಾರ ನದಿ ಪರಿಸರ ಹಾಗೂ ಕುಲಕುಂದದವರೆಗೆ ಹಾದುಹೋಗುವ ರಸ್ತೆಯ ಬದಿಗಳಲ್ಲಿ ವಿಶಾಲ ಸ್ವಚ್ಛತಾ ಅಭಿಯಾನ ನಡೆಯಿತು.

ಅಭಿಯಾನದ ವೇಳೆ ನದಿ ತಟ ಮತ್ತು ರಸ್ತೆಯ ಬದಿಯಲ್ಲಿ ಸಂಗ್ರಹವಾಗಿದ್ದ ಪ್ಲಾಸ್ಟಿಕ್ ಬಾಟಲಿಗಳು, ಚೀಲಗಳು, ಕಸದ ಕಡ್ಡಿಗಳು ಮತ್ತು ಇತರೆ ತ್ಯಾಜ್ಯ ವಸ್ತುಗಳನ್ನು ಚೀಲಗಳಲ್ಲಿ ತುಂಬಿ ಸಮೀಪದ ತ್ಯಾಜ್ಯ ಸಂಗ್ರಹಣಾ ಘಟಕಕ್ಕೆ ಸುರಕ್ಷಿತವಾಗಿ ಸಾಗಿಸಲಾಯಿತು. ಪರಿಸರದ ಶುದ್ಧತೆ ಹಾಗೂ ಕ್ಷೇತ್ರದ ಸ್ವಚ್ಛತೆಗೆ ಒತ್ತು ನೀಡುವ ಈ ಅಭಿಯಾನ ಜನಮನ್ನಣೆಗೆ ಪಾತ್ರವಾಯಿತು.

ಈ ಸಂದರ್ಭಕ್ಕೆ ವಿಶೇಷ ಅತಿಥಿಯಾಗಿ ಆಗಮಿಸಿದ್ದ ವೈನಾಡ್ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್‌ನ ಪೂರ್ವ ಅಧ್ಯಕ್ಷ ಹಾಗೂ ರಾಷ್ಟ್ರೀಯ ನಿರ್ದೇಶಕರಾದ ಸೀ. ವಿಜಯಕುಮಾರ್ ಅವರು ಮಾತನಾಡಿ, “ಸುಬ್ರಹ್ಮಣ್ಯದಲ್ಲಿ ಪ್ರತೀ ರವಿವಾರ ನಡೆಯುತ್ತಿರುವ ಈ ಸ್ವಚ್ಛತಾ ಕಾರ್ಯ ಶ್ಲಾಘನೀಯವಾಗಿದೆ. ಸಾವಿರಾರು ಭಕ್ತರು ಆಗಮಿಸುವ ಈ ಕ್ಷೇತ್ರದಲ್ಲಿ ಅವರ ಆರೋಗ್ಯದ ಹಿತ ದೃಷ್ಟಿಯಿಂದ ಹಾಗೂ ಸಾರ್ವಜನಿಕ ಸ್ಥಳಗಳ ಸ್ವಚ್ಛತೆಗೆ ಇದೊಂದು ಉತ್ತಮ ಮಾದರಿ ಕಾರ್ಯವಾಗಿದೆ,” ಎಂದು ಹೇಳಿದರು. ಅವರು ಮುಂದಿನ ದಿನಗಳಲ್ಲಿ ಈ ಸೇವಾ ಚಟುವಟಿಕೆ ನಿರಂತರವಾಗಿ ನಡೆಯಲೆಂದು ಶುಭ ಹಾರೈಸಿದರು.

ಈ ಕಾರ್ಯಕ್ರಮದಲ್ಲಿ ಸುಬ್ರಹ್ಮಣ್ಯ ಲಿಜನ್ ಅಧ್ಯಕ್ಷ ಡಾ. ರವಿ ಕಠ್ಯಪದವು, ಸಂಸ್ಥಾಪಕ ಅಧ್ಯಕ್ಷ ವಿಶ್ವನಾಥ ನಡುತೋಟ, ನಿಯೋಜಿತ ಅಧ್ಯಕ್ಷ ಎಚ್.ಎಲ್. ವೆಂಕಟೇಶ್, ಕಾರ್ಯದರ್ಶಿ ಗೋಪಾಲ ಎಣ್ಣೆ ಮಜ್ಜಲರ್, ಕಕ್ಕೆಪದವು ಸಮಾಜ ಸೇವಾ ಟ್ರಸ್ಟ್‌ನ ಪ್ರಮುಖರಾದ ರವಿ ಕುಮಾರಧಾರ, ಜನಾರ್ದನ ಗೌಡ ಹಾಗೂ ಇನ್ನಿತರ ಸದಸ್ಯರು ಸಕ್ರಿಯವಾಗಿ ಭಾಗವಹಿಸಿದ್ದರು.

Related posts

ಶ್ರೀ ಧರ್ಮಸ್ಥಳ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನೇಜಿ ನೆಡುವ ಕಾರ್ಯಕ್ರಮ

Suddi Udaya

ಪೊಸಂದೋಡಿ ಹರಿಕೃಪಾ ಪಿ. ದುಗ್ಗಪ್ಪ ಗೌಡ ಮತ್ತು ಶ್ರೀಮತಿ ಜಾಜೀವಿಯವರ ವೈವಾಹಿಕ ಜೀವನದ ‘ ಸುವರ್ಣ ಸಂಭ್ರಮ’: ಆದಿಚುಂಚನಗಿರಿ ಶಾಖಾ ಮಠಾ ಧೀಶರಾದ ಶ್ರೀ ಧರ್ಮಪಾಲನಾಥ ಸ್ವಾಮೀಜಿಯವರಿಂದ ಆಶೀರ್ವಚನ

Suddi Udaya

ಇಂದು ( ಫೆ. 19): ಬೆಳ್ತಂಗಡಿಯಲ್ಲಿ ಯುವ ನಾಯಕ ಸಂಪತ್ ಬಿ ಸುವರ್ಣರವರ ಮುಂದಾಳತ್ವದಲ್ಲಿ ಸಾಂಸ್ಕೃತಿಕ ವೈಭವ : ವಿವಿಧ ಕ್ಷೇತ್ರದ ಮೂವರು ಸಾಧಕರಿಗೆ ಸುವರ್ಣ ರಂಗ ಸಮ್ಮಾನ್ ಪ್ರಶಸ್ತಿ ಪ್ರದಾನ

Suddi Udaya

ಮಹಿಳೆಯರ ಬಗ್ಗೆ ಅರಣ್ಯಾಧಿಕಾರಿ ಸಂಜೀವ ಪೂಜಾರಿ ಅವಹೇಳನಕಾರಿ ಹೇಳಿಕೆ ಖಂಡನೀಯ : ಸುಧೀರ್ ಆರ್ ಸುವರ್ಣ

Suddi Udaya

ಧರ್ಮಸ್ಥಳ ಶ್ರೀ ಧ.ಮಂ. ಆಂಗ್ಲ ಮಾಧ್ಯಮ ಶಾಲೆಯಲ್ಲಿ ಯೋಗ ಶಿಬಿರ ಉದ್ಘಾಟನೆ

Suddi Udaya

ದ‌.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿಂದ ಕೊಯ್ಯೂರು ಸಿಎ ಬ್ಯಾಂಕಿಗೆ ಪ್ರೋತ್ಸಾಹಕ ಪ್ರಶಸ್ತಿ

Suddi Udaya
error: Content is protected !!