September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಕಕ್ಯಪದವು ಎಲ್.ಸಿ.ಆರ್ ವಿದ್ಯಾಸಂಸ್ಥೆಯಲ್ಲಿ ಪ.ಪೂ. ವಿಭಾಗದ ವಿದ್ಯಾರ್ಥಿ‌‌ ಸಂಘದ ಉದ್ಘಾಟನೆ ಹಾಗೂ ಸ್ವಾಗತ ಕಾರ್ಯಕ್ರಮ

ಕಕ್ಯಪದವು: ಎಲ್.ಸಿ.ಆರ್ ವಿದ್ಯಾಸಂಸ್ಥೆ ಕಕ್ಯಪದವು ಇಲ್ಲಿನ ಪದವಿ ಪೂರ್ವ ವಿಭಾಗದ 2025-26ನೇ ಶೈಕ್ಷಣಿಕ ಸಾಲಿನ ವಿದ್ಯಾರ್ಥಿ ಸಂಘದ ಉದ್ಘಾಟನೆಯೊಂದಿಗೆ ಶೈಕ್ಷಣಿಕ ಕಾರ್ಯಚಟುವಟಿಕೆಗಳಿಗೆ ಚಾಲನೆ ನೀಡುವುದರೊಂದಿಗೆ ಪ್ರಥಮ ಪದವಿ ಪೂರ್ವ ವಿಭಾಗದ ವಿದ್ಯಾರ್ಥಿಗಳಿಗೆ “ಆಗಮನ 2K25″ಎಂಬ ಸ್ವಾಗತ ಕಾರ್ಯಕ್ರಮವನ್ನು ಜೂ.11 ರಂದು ಹಮ್ಮಿಕೊಳ್ಳಲಾಯಿತು.


ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ವಿಂದ್ಯಾಶ್ರೀ ಎ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಿಗೆ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.
ಸಂಸ್ಥೆಯ ಸಂಯೋಜಕರಾದ ಯಶವಂತ್ ಜಿ. ನಾಯಕ್ ಮಾತಾನಾಡಿ, ವಿದ್ಯಾಥಿ೯ಗಳು ಧನಾತ್ಮಕ ಚಿಂತನೆಯೊಂದಿಗೆ ಅವಿರತ ಶ್ರಮವಹಿಸಿ ಪ್ರಾಮಾಣಿಕ ಪ್ರಯತ್ನವನ್ನು ಮಾಡಿದರೆ ಮಾತ್ರ ಇಂದಿನ ದಿನಗಳಲ್ಲಿ ಗುರಿಮುಟ್ಟಲು ಸಾಧ್ಯ ಎಂಬ ಪ್ರೇರಣಾತ್ಮಕ ಮಾತುಗಳನ್ನು ಹೇಳಿದರು.


ಪದವಿ ಪೂರ್ವ ವಿಭಾಗದ ಮುಖ್ಯಸ್ಥರಾದ ಸೌಮ್ಯ ಎನ್ ಮಾತನಾಡಿ, ವಿದ್ಯಾಥಿ೯ಗಳು ಅವಕಾಶಗಳನ್ನು ಸದ್ಬಳಕೆ ಮಾಡಿಕೊಂಡು, ಜ್ಞಾನವನ್ನು ಸಂಪಾದಿಸಿಕೊಂಡು ಹೆತ್ತವರ ಕಷ್ಟವನ್ನು ಅರಿತು ಅವರ ಕನಸನ್ನು ಈಡೇರಿಸಿಕೊ‍ಂಡು ಅತ್ಯುತ್ತಮವಾದ ಭವಿಷ್ಯವನ್ನು ರೂಪಿಸಿಕೊಳ್ಳಲು ಪದವಿಪೂವ೯ ಹಂತದಲ್ಲಿಯೇ ತಯಾರಿ ನಡೆಸಬೇಕು ಎಂದು ಕಿವಿಮಾತುಗಳನ್ನಾಡಿದರು.
ವಿದ್ಯಾಸಂಸ್ಥೆಯ ಪ್ರಾಂಶುಪಾಲರಾದ ಜೋಸ್ಟನ್ ಲೋಬೊ ಕಾರ್ಯಕ್ರಮವನ್ನು ಉದ್ಘಾಟಿಸಿ , ಅಧ್ಯಕ್ಷತೆಯನ್ನು ವಹಿಸಿ ಪ್ರತಿಯೊಂದು ಸಂಸ್ಥೆಯು ಯಶಸ್ವಿಯಾಗಿ ಮುನ್ನಡೆಯುವಲ್ಲಿ ನಾಯಕತ್ವ, ಶೈಕ್ಷಣಿಕ ವಾತಾವರಣ ಬಹಳ ಮುಖ್ಯ ಎಂದು ಪ್ರೇರಣಾತ್ಮಕ ಮಾತುಗಳಿಂದ ವಿದ್ಯಾರ್ಥಿಗಳಿಗೆ ಶುಭಹಾರೈಸಿದರು.

ದ್ವಿತೀಯ ಪದವಿ ಪೂರ್ವ ವಿಭಾಗದ ವಿದ್ಯಾರ್ಥಿ ಅನನ್ಯ ಸ್ವಾಗತಿಸಿ , ಯಕ್ಷಿತ್ ವಂದಿಸಿ , ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ತಸ್ಮಿಯಾ ಹಾಗೂ ಸಹನಾ, ಕಾರ್ಯಕ್ರಮ ನಿರೂಪಿಸಿದರು.

Related posts

ಇಂದಬೆಟ್ಟು: ದೇವನಾರಿ ನಿವಾಸಿ ರಝಾಕ್ ನಿಧನ

Suddi Udaya

ಮುಂಡಾಜೆ : ನಿಡಿಗಲ್ ನಿವಾಸಿ, ಗಣೇಶ ಪ್ರಭು ಹೃದಯಾಘಾತದಿಂದ ನಿಧನ

Suddi Udaya

ನಿವೃತ ಡಿಸಿಪಿ ಡಿ. ಧರ್ಮಯ್ಯ ಹೃದಯಾಘಾತದಿಂದ ನಿಧನ

Suddi Udaya

ರಾಜ್ಯಕ್ಕೆ ಹಿರಿಮೆ ತಂದ ಎಕ್ಸೆಲ್ ಗುರುವಾಯನಕೆರೆಯ ನೀಟ್ ಫಲಿತಾಂಶ

Suddi Udaya

ಪುಂಜಾಲಕಟ್ಟೆ ಕರ್ನಾಟಕ ಪಬ್ಲಿಕ್ ಸ್ಕೂಲ್ ನ ಪ್ರೌಢಶಾಲಾ ವಿಭಾಗದ ಶಿಕ್ಷಕರಿಗೆ ಸ್ವಾಗತ-ವಿದಾಯ

Suddi Udaya

ವಿ.ಹಿ.ಪ ಬಜರಂಗದಳ ಚಾರ್ಮಾಡಿ ಘಟಕದ ವತಿಯಿಂದ ದತ್ತಮಾಲಧಾರಣೆಗೆ ಚಾಲನೆ

Suddi Udaya
error: Content is protected !!