September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಉಜಿರೆ ಶ್ರೀ ಧ.ಮಂ. ಅನುದಾನಿತ ಸೆಕೆಂಡರಿ ಶಾಲೆಯಲ್ಲಿ ಯೋಗ ತರಬೇತಿ ಶಿಬಿರ ಉದ್ಘಾಟನೆ

ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅನುದಾನಿತ ಸೆಕೆಂಡರಿ ಶಾಲೆಯಲ್ಲಿ ಹತ್ತು ದಿನಗಳ ಯೋಗ ತರಬೇತಿ ಶಿಬಿರ ಜೂ.11ರಂದು ಉದ್ಘಾಟನೆಗೊಂಡಿತು.

ಉಜಿರೆಯ ಶ್ರೀ ಧ.ಮಂ. ನ್ಯಾಚುರೋಪತಿ ಕಾಲೇಜಿನ ಉಪಪ್ರಾಂಶುಪಾಲೆ ಸುಜಾತ ಉದ್ಘಾಟಿಸಿ ಮಾತನಾಡಿ, ಯೋಗವು ಈ ಕ್ಷಣದ ಬದುಕನ್ನು ಮತ್ತು ವರ್ತಮಾನವನ್ನು ಪ್ರತ್ಯಕ್ಷವಾಗಿ ತೋರಿಸಲು ಅತ್ಯುತ್ತಮ ಸಾಧನ ಎಂದರು.

ಶಾಲಾ ಮುಖ್ಯೋಪಾಧ್ಯಾಯ ಕೆ. ಸುರೇಶ್ ಮಾತನಾಡಿ, ಯೋಗ ಮಾನವನ ಬುದ್ಧಿಶಕ್ತಿಯನ್ನು ಹೆಚ್ಚಿಸುತ್ತದೆ. ದಿನನಿತ್ಯದ ಜೀವನ ಶೈಲಿಗೆ ಯೋಗ ಅತ್ಯಗತ್ಯ ಎಂದರು.

ಯೋಗ ತರಬೇತುದಾರರು, ಶ್ರೀ ಧ.ಮಂ. ನ್ಯಾಚುರೋಪತಿ ಕಾಲೇಜಿನ ವಿದ್ಯಾರ್ಥಿಗಳಾದ ಕ್ಷಮಾ ಮತ್ತು ಅಮೃತವರ್ಷಿಣಿ, ಶಾಲಾ ಶಿಕ್ಷಕರು, ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಶಿಕ್ಷಕರಾದ ಚಂದ್ರಶೇಖರ ಸ್ವಾಗತಿಸಿ, ಅರ್ಚನಾ ವಂದಿಸಿ, ರಶ್ಮಿತಾ ಕಾರ್ಯಕ್ರಮ ನಿರೂಪಿಸಿದರು.

Related posts

ಬೆಳ್ತಂಗಡಿ ಕ್ಯಾಂಪ್ಕೋ ಶಾಖೆಯಿಂದ ನಿವೃತ್ತಿ ಹೊಂದಿದ ಶ್ರೀಧರ ಕೆ. ರವರಿಗೆ ಬೀಳ್ಕೊಡುಗೆ ಸಮಾರಂಭ

Suddi Udaya

ರಾಜ್ಯದ ಅಡಿಕೆ ಲಾರಿಗಳು ಮಹಾರಾಷ್ಟ್ರದಲ್ಲಿ ಜಪ್ತಿ,ಕರಾವಳಿಯಲ್ಲಿ ಅಡಿಕೆ ಧಾರಣೆ ಕುಸಿತದ ಆತಂಕ

Suddi Udaya

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ ಬೆಳ್ತಂಗಡಿ ಘಟಕದ ನೂತನ ಪದಾಧಿಕಾರಿಗಳ ಪದಪ್ರದಾನ ಸಮಾರಂಭ: ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ, ಅಶಕ್ತ ಕುಟುಂಬಕ್ಕೆ ಆರ್ಥಿಕ ನೆರವು,ಮನೆ ಹಸ್ತಾಂತರ

Suddi Udaya

ಶ್ರೀ ಕ್ಷೇತ್ರ ಧ.ಗ್ರಾ.ಯೋಜನೆಯ ಮೇಲಂತಬೆಟ್ಟು ಕಾರ್ಯಕ್ಷೇತ್ರದ ವಾತ್ಸಲ್ಯ ಸದಸ್ಯೆಗೆ ಮಕ್ಕಳ ವಿದ್ಯಾಭ್ಯಾಸಕ್ಕೆ ಶಾಲಾ ಪುಸ್ತಕ, ಬ್ಯಾಗ್ ವಿತರಣೆ

Suddi Udaya

ಒಂದು ವಾರದ ಒಳಗೆ ಬೆಳೆ ವಿಮೆ ರೈತರ ಖಾತೆಗೆ ಜಮೆ ಮಾಡದೇ ಇದ್ದಲ್ಲಿ ಕಾನೂನು ಹೋರಾಟ : ರಕ್ಷಿತ್ ಪಣೆಕ್ಕರ

Suddi Udaya

ಬೆಳ್ತಂಗಡಿ : ವೃತ್ತ ನಿರೀಕ್ಷಕರಾಗಿ ರವಿ ಬಿ.ಎಸ್ ನೇಮಕ

Suddi Udaya
error: Content is protected !!