23.5 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಜೆಸಿಐ ವಲಯ 15ರ ಮಧ್ಯಂತರ ಸಮ್ಮೇಳನ ಜೆಸಿಐ ಬೆಳ್ತಂಗಡಿಗೆ ಅತ್ಯುತ್ತಮ ಘಟಕ ವಿನ್ನರ್ ಪ್ರಶಸ್ತಿ, ಘಟಕಾಧ್ಯಕ್ಷೆ ಆಶಾಲತಾ ಪ್ರಶಾಂತ್ ರವರಿಗೆ ಅತ್ಯುತ್ತಮ ಅಧ್ಯಕ್ಷೆ ರನ್ನರ್ ಪ್ರಶಸ್ತಿ

ಬೆಳ್ತಂಗಡಿ: ಜೆಸಿಐ ಭಾರತದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳನ್ನೊಳಗೊಂಡ ವಲಯ 15ರ ಮಧ್ಯಂತರ ಸಮ್ಮೇಳನ ಕಾರ್ಕಳ ನಿಟ್ಟೆ ಸಮೀಪ ಸನ್ಮಾನ್ ರಿಜೆನ್ಸಿ ಸಭಾಂಗಣದಲ್ಲಿ ನಡೆಯಿತು.

ಸಮ್ಮೇಳನದ ಪ್ರಾಂತ್ಯವಾರು ಪ್ರಶಸ್ತಿಗಳಲ್ಲಿ ಪ್ರಾಂತ್ಯ ‘ಡಿ’ ಯಲ್ಲಿ ಜೆಸಿಐ ಬೆಳ್ತಂಗಡಿ ಘಟಕವು ಅತ್ಯುತ್ತಮ ಘಟಕ ವಿನ್ನರ್ ಪ್ರಶಸ್ತಿ ಪಡೆಯಿತು. ಜೆಸಿಐ ಬೆಳ್ತಂಗಡಿಯ ಘಟಕಾಧ್ಯಕ್ಷೆ ಜೆಸಿ ಆಶಾಲತಾ ಪ್ರಶಾಂತ್ ಅತ್ಯುತ್ತಮ ಅಧ್ಯಕ್ಷೆ ರನ್ನರ್ ಪ್ರಶಸ್ತಿ ಪಡೆದಿರುತ್ತಾರೆ. ಅದೇ ರೀತಿ ವಲಯ ಆಡಳಿತ ವಿಭಾಗದಿಂದ ಡೈಮಂಡ್ ಘಟಕ ಎಂಬ ಮನ್ನಣೆಗೆ ಜೆಸಿಐ ಬೆಳ್ತಂಗಡಿ ಪಾತ್ರವಾಯಿತು.
ಘಟಕದಲ್ಲಿ ಈ ವರ್ಷ ನಡೆದ ರಾಷ್ಟ್ರೀಯ ತರಬೇತಿ ದಿನ, ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ, ಘಟಕದ ಸದಸ್ಯರಿಗೆ ವಿವಿಧ ತರಬೇತಿ ಕಾರ್ಯಕ್ರಮಗಳು, ಸಾರ್ವಜನಿಕ ವಲಯದಲ್ಲಿ ನಡೆದ ತರಬೇತಿ ಕಾರ್ಯಕ್ರಮಗಳು, ಶಾಶ್ವತ ಯೋಜನೆಗಳು, ವಲಯ ಕಾರ್ಯಕ್ರಮದ ಆತಿಥ್ಯ ಹಾಗೂ ಅಭಿವೃದ್ಧಿ ಮತ್ತು ಬೆಳವಣಿಗೆ ವಿಭಾಗದ ಕೊಡುಗೆಗಳನ್ನು ಪರಿಗಣಿಸಿ ಈ ಪ್ರಶಸ್ತಿಗಳು ಅರ್ಹವಾಗಿ ಜೆಸಿಐ ಬೆಳ್ತಂಗಡಿಗೆ ಲಭಿಸಿರುತ್ತದೆ. ವಲಯ 15ರ ವಲಯ ಅಧ್ಯಕ್ಷ ಜೆಸಿಐ ಸೆನೆಟರ್ ಅಭಿಲಾಶ್ ಬಿಎ ಇವರು ಈ ಪ್ರಶಸ್ತಿಗಳನ್ನು ನೀಡಿ ಗೌರವಿಸಿದರು. ಪ್ರಶಸ್ತಿ ಹಾಗೂ ಮನ್ನಣೆ ಸಭೆಯ ಸಭಾಧ್ಯಕ್ಷ ವಲಯ ಉಪಾಧ್ಯಕ್ಷ ಜೆಎಫ್ಎಮ್ ರಂಜಿತ್ ಎಚ್‌ಡಿ, ವಲಯ ಆಡಳಿತ ಮಂಡಳಿಯ ನಿರ್ದೇಶಕ ಅಜಿತ್ ಕುಮಾರ್ ರೈ ಹಾಗೂ ಇತರ ಪ್ರಾಂತ್ಯದ ಉಪಾಧ್ಯಕ್ಷರುಗಳು ಮುಖ್ಯ ಅತಿಥಿಗಳ ಸಮ್ಮುಖದಲ್ಲಿ ಈ ಪ್ರಶಸ್ತಿ ಪ್ರಧಾನ ಮಾಡಲಾಯಿತು.

ಸಮ್ಮೇಳನದ ವಿವಿಧ ಸ್ಪರ್ಧೆಗಳಲ್ಲಿ ಘಟಕಕ್ಕೆ ಹಲವಾರು ಬಹುಮಾನ

ಸಮ್ಮೇಳನದಲ್ಲಿ ನಡೆದ ಫೋಟೋ ಡಿಸ್ಪ್ಲೇ ಸ್ಪರ್ಧೆಯಲ್ಲಿ ಜೆಸಿಐ ಬೆಳ್ತಂಗಡಿ ಘಟಕವು ಪ್ರಥಮ ಸ್ಥಾನ ಪಡೆಯಿತು. ಜೂನಿಯರ್ ಜೇಸಿ ಭಾಷಣ ಸ್ಪರ್ಧೆಯಲ್ಲಿ ನೆವಿಲ್ ಮೊರಸ್ ಇವರು ಪ್ರಥಮ ಸ್ಥಾನಿಯಾಗಿ ಮೂಡಿ ಬಂದರು. ಹಾಗೂ ಜೇಸಿಗಳಿಗೆ ನಡೆದ ಭಾಷಣ ಸ್ಪರ್ಧೆಯಲ್ಲಿ ರಕ್ಷಿತ್ ಅಂಡಿಂಜೆ ತೃತೀಯ ಸ್ಥಾನ ಪಡೆದರು. ರಂಗೋಲಿ ಸ್ಪರ್ಧೆಯಲ್ಲಿ ಆಶಾಲತಾ ಪ್ರಶಾಂತ್ ರವರು ವಲಯ ಅಧ್ಯಕ್ಷರ ಭಾವಚಿತ್ರ ರಚಿಸಿದ್ದು ಎಲ್ಲರ ಗಮನ ಸೆಳೆಯಿತು. ಈ ರಂಗೋಲಿಗೆ ವಲಯಾಧ್ಯಕ್ಷರ ವಿಶೇಷ ಮನ್ನಣೆ ಲಭಿಸಿರುತ್ತದೆ.

ಈ ಮಧ್ಯಂತರ ಸಮ್ಮೇಳನ ಕಾರ್ಯಕ್ರಮಕ್ಕೆ ಘಟಕದ ಪೂರ್ವ ಅಧ್ಯಕ್ಷ ಕಿರಣ್ ಕುಮಾರ್ ಶೆಟ್ಟಿ, ಪ್ರಶಾಂತ್ ಲಾೖಲ, ಅಭಿನಂದನ್ ಹರೀಶ್, ಪ್ರಸಾದ್ ಬಿ ಎಸ್, ಶಂಕರ್ ರಾವ್ ಬಿ, ಉಪಾಧ್ಯಕ್ಷ ಪ್ರೀತಮ್ ಶೆಟ್ಟಿ, ಶೀತಲ್ ಜೈನ್, ಸುದೀರ್ ಕೆಎನ್, ಜಿತೇಶ್ ಕುಮಾರ್ ಹಾಗೂ ಕಾರ್ಯದರ್ಶಿ ಪ್ರಮೋದ್ ಕೆ, ಕೋಶಾಧಿಕಾರಿ ರಕ್ಷಿತ್ ಅಂಡಿಂಜೆ, ಜೊತೆ ಕಾರ್ಯದರ್ಶಿ ರಾಮಕೃಷ್ಣ ಶರ್ಮಾ, ಸದಸ್ಯರಾದ ರಾಘವೇಂದ್ರ, ಶೈಲೇಶ್ ಕೆ, ಭವ್ಯಶ್ರೀ ಕೀರ್ತಿರಾಜ್, ಜೂನಿಯರ್ ಜೆಸಿ ಸದಸ್ಯರಾದ ನೇವಿಲ್ ಮೊರಾಸ್, ಕುಮಾರಿ ಶಿವಾನಿ ಹೆಗ್ಡೆ, ಕುಮಾರಿ ನಯನ ಭಾಗಿಯಾದರು.

Related posts

ಕನ್ಯಾಡಿ ಸ್ವಾಮೀಜಿಯವರಿಂದ ಡಾ. ಡಿ ವೀರೇಂದ್ರ ಹೆಗ್ಗಡೆಯವರ ಭೇಟಿ

Suddi Udaya

ಬೆಳಾಲು: ಅನಂತೇಶ್ವರ ಫ್ರೆಂಡ್ಸ್ ಅನಂತೋಡಿ ಆಶ್ರಯದಲ್ಲಿ ಕೆಸರುಗದ್ದೆ ಕ್ರೀಡಾಕೂಟ; ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಕುಕ್ಕೇಡಿ ಗ್ರಾಮ ಪಂಚಾಯತಿನಲ್ಲಿ ನಿವೃತ್ತ ಅಂಚೆ ಪಾಲಕರಾದ ವಿಶ್ವನಾಥ ಪೂಜಾರಿ ಹಾಗೂ ವಿಜಯ ರಾಜ್ ಜೈನ್ ರಿಗೆ ನಾಗರೀಕ ಸನ್ಮಾನ

Suddi Udaya

ಮರೋಡಿ: ಯುವಕನ ಧ್ವನಿ ಪೆಟ್ಟಿಗೆಯ ಶಸ್ತ್ರಚಿಕಿತ್ಸೆಗೆ ಯುವವಾಹಿನಿ ವೇಣೂರು ಘಟಕ ಹಾಗೂ ಯುವವಾಹಿನಿ ಮರೋಡಿ ಸಂಚಲನಾ ಸಮಿತಿ ಸದಸ್ಯರಿಂದ ಆರ್ಥಿಕ ನೆರವು

Suddi Udaya

ಎ.26: ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಚುನಾವಣೆ: 16 ನಿರ್ದೇಶಕ ಸ್ಥಾನಕ್ಕೆ 41 ಮಂದಿ ಅಭ್ಯರ್ಥಿಗಳ ನಡುವೆ ಸ್ಪರ್ಧೆ

Suddi Udaya

ಮಲವಂತಿಗೆ: ದಿಡುಪೆಯಲ್ಲಿ ಕೃಷಿ ತೋಟಗಳಿಗೆ ಕಾಡಾನೆಗಳ ದಾಳಿ : ಅಪಾರ ಕೃಷಿ ಹಾನಿ

Suddi Udaya
error: Content is protected !!