24.8 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಜೂ.15: ಮಡಂತ್ಯಾರ್‌ನಲ್ಲಿ ಆಲ್ಕೋಹಾಲಿಕ್ಸ್ ಅನೋನಿಮಸ್ (ಎ.ಎ) ಗ್ರೂಪ್‌ನ ಆರಂಭ: ಫಾ. ಸ್ಟಾನಿ ಗೋವಿಯಸ್

ಮಡಂತ್ಯಾರು: ಸಮಾಜದಲ್ಲಿ ಅದೆಷ್ಟೋ ಜನರು ಮದ್ಯಪಾನಾದಿ ದುಶ್ಚಟಗಳಿಗೆ ಬಲಿಬಿದ್ದು ತಮ್ಮ ಬದುಕನ್ನು ಸರ್ವನಾಶ ಮಾಡುತ್ತಿರುವುದನ್ನು ನಾವೆಲ್ಲ ಗಮನಿಸುತ್ತಿದ್ದೇವೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಮದ್ಯಪಾನದ ಚಟವೆಂಬುದೊಂದು ಮಾನಸಿಕ, ದೈಹಿಕ, ಕೌಟುಂಬಿಕ ರೋಗವಾಗಿದೆ. ಈ ವ್ಯಸನದಿಂದ ಹೊರಬರಲು ಸ್ವತ: ವ್ಯಸನಿಗಾಗಲಿ, ಕುಟುಂಬದವರಿಗಾಗಲಿ ಕಷ್ಟಸಾಧ್ಯವೆನ್ನುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಇಂತಹ ಮದ್ಯಪಾನದ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಅದರಿಂದ ಪರಿಹಾರ ಪಡೆಯಲು ಸಹಾಯಕವಾಗುವ ಜಗತ್ತಿನಾದ್ಯಂತ 194 ರಾಷ್ಟ್ರಗಳಲ್ಲಿ ಒಂದು ಲಕ್ಷಕ್ಕೂ ಮಿಕ್ಕಿದ ಆಲ್ಕೋಹಾಲಿಕ್ಸ್ ಅನೋನಿಮಸ್ ಕೂಟಗಳ ಮೂಲಕ 21 ಕೋಟಿಗೂ ಮಿಕ್ಕಿದ ವ್ಯಸನಿಗಳಿಗೆ ಪರಿಹಾರ ಒದಗಿಸಿದ ಆಲ್ಕೋಹಾಲಿಕ್ಸ್ ಅನೋನಿಮಸ್ ಕೂಟವನ್ನು ಪ್ರಾರಂಭಿಸಲು ಜೂ.15 ರಂದು ಸಂಜೆ ಗಂಟೆ 4 ರಿಂದ 5ರ ತನಕ ಮಡಂತ್ಯಾರು ಸೇಕ್ರೆಡ್ ಹಾರ್ಟ್ ಕಾಲೇಜಿನ ವಠಾರದಲ್ಲಿ ಬೃಹತ್ ಸಂವಾದ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಈ ಪ್ರಯುಕ್ತ ಅಮಲು ಸೇವನೆಯಿಂದ ಮುಕ್ತಿ ಬಯಸುವ ವ್ಯಸನಿ ಮತ್ತು ಕುಟುಂಬದ ಸದಸ್ಯರು, ಈಗಾಗಲೇ ವ್ಯಸನದಿಂದ ದೂರ ನಿಂತು ಉತ್ತಮ ಜೀವನ ನಡೆಸುತ್ತಿರುವ ಎ.ಎ. ನವಜೀವನ ಬಂಧುಗಳು ಹಾಗೂ ಈ ನಿಟ್ಟಿನಲ್ಲಿ ಜನಸೇವೆ ಮಾಡುವ ಬಂಧು ಮಿತ್ರರು, ಹಿತೈಷಿಗಳು, ಸಮಾನ ಮನಸ್ಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾಹಿತಿ ಮತ್ತು ಪರಿಹಾರ ಪಡೆಯುವಂತೆ ಈ ಮೂಲಕ ಕೋರಲಾಗಿದೆ.

ಎ.ಎ.ಕೂಟವು ವ್ಯಸನಿಗಳಿಗೆ ಪ್ರಶಾಂತತೆಯ ಬದುಕು ನಡೆಸಲು ಸಹಾಯ ಮಾಡುತ್ತದೆ. ಯಾವುದೇ ಜಾತಿ, ಮತ, ಪಕ್ಷ ಬೇಧವಿಲ್ಲದೆ, ಲಿಂಗ ತಾರತಮ್ಯವಿಲ್ಲದೆ ನಡೆಯುವ ಈ ಸಭೆಯಲ್ಲಿ ಯಾವುದೇ ಶುಲ್ಕ ಇರುವುದಿಲ್ಲ. ಹಾಗೂ ಅನಾಮಿಕತೆಯನ್ನೂ ಕಾಪಾಡಲಾಗುತ್ತದೆ. ಯಾವುದೇ ಪ್ರಚಾರ ಬಯಸದೆ ಕೇವಲ ಸೇವಾ ಮನೋಭಾವನೆಯಿಂದ ಮಾನವೀಯತೆಯಿಂದ ಕೆಲಸ ಮಾಡುವ ಪ್ರತಿಯೊಬ್ಬರಿಗೂ ಸೇವೆಗೈಯಲು ಇದೊಂದು ಅಪೂರ್ವ ಅವಕಾಶವಾಗಿದೆ. ಈ ಸಂವಾದ ಕಾರ್ಯಕ್ರಮದ ನಂತರದಲ್ಲಿ ಪ್ರತೀ ಆದಿತ್ಯವಾರ ಸಂಜೆ 4 ರಿಂದ 5 ಗಂಟೆವರೆಗೆ ನಿರಂತರವಾಗಿ ಈ ಸಭೆಯನ್ನು ಮುಂದುವರಿಸಲಾಗುವುದು ಎಂದು ಕಾರ್ಯಕ್ರಮದ ಆಯೋಜಕರಾದ ವಂ. ಸ್ವಾಮಿ ಸ್ಟಾನಿ ಗೋವಿಯಸ್, ಪ್ರಧಾನ ಧರ್ಮಗುರುಗಳು, ಸೇಕ್ರೆಡ್ ಹಾರ್ಟ್ ಚರ್ಚ್ ಮಡಂತ್ಯಾರು, ಉಪಾಧ್ಯಕ್ಷ ಜೆರಾಲ್ಡ್ ಮೋರಸ್, ಕಾರ್ಯದರ್ಶಿ ನೆಲ್ಸನ್, ಸಂಯೋಜಕ ರಿಚರ್ಡ್‌ರವರು, ಸಂಘಟಕ ಬಾಲು ಹಾಸನ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Related posts

ಕರುಂ ಬಿತ್ತಿಲು ಸಂಗೀತ ಶಿಬಿರ ಸಮಾರೋಪ

Suddi Udaya

ತಾಲೂಕು ಎಸ್.ಸಿ ಮೋರ್ಚಾ ಅಧ್ಯಕ್ಷ ಈಶ್ವರ ಬೈರ ಮನೆಗೆ ಅಭ್ಯರ್ಥಿ ಬ್ರಿಜೇಶ್ ಚೌಟ ಹಾಗೂ ಶಾಸಕರಾದ ಹರೀಶ್ ಪೂಂಜ ಭೇಟಿ

Suddi Udaya

ಕರಾಟೆ ಪಂದ್ಯಾಟ: ವಾಣಿ ಆಂ.ಮಾ. ಶಾಲೆಯ ವಿದ್ಯಾರ್ಥಿನಿ ಕು. ಸಂಜ್ಞಾ ಜಿಲ್ಲಾ ಮಟ್ಟಕ್ಕೆ ಆಯ್ಕೆ

Suddi Udaya

ಹ್ಯಾಂಡ್ ಬಾಲ್ ಪಂದ್ಯಾಟ: ಸಂತ ತೆರೇಸಾ ಸಂಸ್ಥೆಯ ವಿದ್ಯಾರ್ಥಿಗಳ ಅದ್ಭುತ ಸಾಧನೆ, ಜಿಲ್ಲಾ ಮಟ್ಟಕ್ಕೆ ಆಯ್ಕೆ

Suddi Udaya

ಉಜಿರೆ: ಅನುಗ್ರಹ ಶಾಲೆಯಲ್ಲಿ ರಸ್ತೆ ಸಂಚಾರ ಮತ್ತು ಸುರಕ್ಷಾ ಕ್ರಮದ ಬಗ್ಗೆ ಮಾಹಿತಿ ಕಾರ್‍ಯಗಾರ

Suddi Udaya

ಉಪ್ಪಿನಂಗಡಿ: ಯುವತಿ ನಾಪತ್ತೆ: ಠಾಣೆಗೆ ದೂರು

Suddi Udaya
error: Content is protected !!