23.3 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಶ್ರೀ ಧ.ಮಂ. ಆಂಗ್ಲ ಮಾಧ್ಯಮ ಶಾಲೆಯಲ್ಲಿ ಯೋಗ ಸಪ್ತಾಹ ಉದ್ಘಾಟನೆ

ಧರ್ಮಸ್ಥಳ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ಧರ್ಮಸ್ಥಳದಲ್ಲಿ ಯೋಗ ಸಪ್ತಾಹ ಉದ್ಘಾಟನಾ ಸಮಾರಂಭವು ಶಾಲೆಯ ಕ್ರೀಡಾ ಸಂಘ, ಭಾರತ್ ಸ್ಕೌಟ್ಸ್ ಹಾಗೂ ಗೈಡ್ಸ್ ಮತ್ತು ಕಬ್ ಮತ್ತು ಬುಲ್ ಬುಲ್ ಸಂಘಗಳ ಜಂಟಿ ಆಶ್ರಯದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸಾ ಕಾಲೇಜಿನ ವಿದ್ಯಾರ್ಥಿಗಳಾದ ಕುಮಾರಿ ಸಾನಿಧ್ಯ ಹಾಗೂ ಕುಮಾರಿ ಅನನ್ಯ ಇವರು ಯೋಗ ತರಬೇತುದಾರರಾಗಿ ಆಗಮಿಸಿ ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಕುಮಾರಿ ಅನನ್ಯ ಯೋಗದ ಮಹತ್ವ ಯೋಗದ ಅವಶ್ಯಕತೆ ವಿದ್ಯಾರ್ಥಿಗಳಿಗೆ ಯೋಗದಿಂದ ಆಗುವ ಉಪಯೋಗ ಇತ್ಯಾದಿಗಳನ್ನು ಕೂಲಂಕುಶವಾಗಿ ವಿವರಿಸಿದರು. ಶಾಲಾ ಮುಖ್ಯೋಪಾಧ್ಯಾಯನ ಶ್ರೀಮತಿ ಪರಿಮಳ ಎಂ ವಿ ಯೋಗದಿಂದ ಹೇಗೆ ಮಾನಸಿಕ ಆರೋಗ್ಯ ಮತ್ತು ನೆಮ್ಮದಿಯನ್ನು ಕಂಡುಕೊಳ್ಳಬಹುದು. ಪ್ರಸ್ತುತ ದಿನದಲ್ಲಿ ಯೋಗದ ಅವಶ್ಯಕತೆ ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಅಂಶಗಳ ಕುರಿತು ವಿಸ್ತಾರವಾಗಿ ವಿವರಿಸಿದರು. ಬಳಿಕ ಆಗಮಿಸಿದ್ದ ತರಬೇತುದಾರರು ವಿದ್ಯಾರ್ಥಿಗಳಿಗೆ ಪ್ರಾಣಾಯಾಮ ಹಾಗೂ ಇನ್ನಿತರ ಯೋಗಾಸನಾದ ಆಸನಗಳನ್ನು ತಿಳಿಸಿಕೊಟ್ಟರು.

ಕಾರ್ಯಕ್ರಮವನ್ನು ಶಾಲಾ ವಿದ್ಯಾರ್ಥಿನಿ ಕುಮಾರಿ ಅನುಜ್ಞ ನಿರ್ವಹಿಸಿದರು.

Related posts

ಕುತ್ರೋಟ್ಟು ನಿವಾಸಿ ಫಯಾಜ್ ಸ್ಥಳೀಯ ಮಹಿಳೆ ಜೊತೆ ನಾಪತ್ತೆ ಶಂಕೆ: ಫಯಾಜ್ ನ ಪತ್ನಿಯಿಂದ ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು -ಪ್ರಕರಣ ದಾಖಲು

Suddi Udaya

ಡಿ.2: ಎಕ್ಸೆಲ್ ವಿದ್ಯಾಸಂಸ್ಥೆಯಲ್ಲಿ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ

Suddi Udaya

ಸ್ಕೂಟರ್-ಟಿಪ್ಪರ್ ನಡುವೆ ಅಪಘಾತ: ಕೂಟದಕಲ್ಲು ನಿವಾಸಿ ಸುಧಾಕರ್ ರವರಿಗೆ ಗಾಯ

Suddi Udaya

ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಮತ ಎಣಿಕೆ : ಹದಿನಾಲ್ಕನೇ ಸುತ್ತಿನಲ್ಲಿ 13611 ಮತಗಳ ಮೂಲಕ ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜ ಮುನ್ನಡೆ

Suddi Udaya

ನಿಡಿಗಲ್ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆ

Suddi Udaya

ಯುವವಾಹಿನಿ ಬೆಳ್ತಂಗಡಿ ಘಟಕದಿಂದ ಉದಯ್ ಪೂಜಾರಿಯವರಿಗೆ ಸಾಂತ್ವಾನ ನಿಧಿ ಹಸ್ತಾಂತರ

Suddi Udaya
error: Content is protected !!