23.5 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಉಜಿರೆ ಗ್ರಾ.ಪಂ. ಪ್ರೇರಣ ಮಹಿಳಾ ಸಂಜೀವಿನಿ ಒಕ್ಕೂಟದ ನೇತೃತ್ವದಲ್ಲಿ “ಅಕ್ಕ ಕೆಫೆ ” ಶುಭಾರಂಭ

ಉಜಿರೆ: ಕರ್ನಾಟಕ ಸರಕಾರದ ಕೌಶಲ್ಯ ಅಭಿವೃದ್ಧಿ ಜೀವನೋಪಾಯ ಮತ್ತು ಉದ್ಯಮಶೀಲತೆ ಇಲಾಖೆ ಸಂಜೀವಿನಿ ಅಡಿ ಗ್ರಾಮೀಣ ಮಹಿಳೆಯರ ಜೀವನೋಪಾಯಕ್ಕಾಗಿ ಕರ್ನಾಟಕ ಸರಕಾರದ ಕಾರ್ಯಕ್ರಮ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಪ್ರಥಮವಾಗಿ “ಅಕ್ಕ ಕೆಫೆ “ಉಜಿರೆ ಗ್ರಾಮ ಪಂಚಾಯತ್ ಪ್ರೇರಣ ಮಹಿಳಾ ಸಂಜೀವಿನಿ ಒಕ್ಕೂಟದ ಆದಿಪರಾಶಕ್ತಿ ಮಹಿಳಾ ಸಂಜೀವಿನಿ ಒಕ್ಕೂಟದ ನೇತೃತ್ವದಲ್ಲಿ ಉಜಿರೆಯಲ್ಲಿ ಶುಭಾರಂಭಗೊಂಡಿತು.

ಅಕ್ಕ ಕೆಫೆಯನ್ನು ಉಜಿರೆ ಗ್ರಾಮ ಪಂಚಾಯತ್ ನ ಅಧ್ಯಕ್ಷೆ ಶ್ರೀಮತಿ ಉಷಾ ಕಿರಣ ಕಾರಂತ್ ಉದ್ಘಾಟಿಸಿ ಕೆಫೆಯ ಯಶಸ್ಸಿಗೆ ಶುಭ ಹಾರೈಸಿದರು. ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ಅನುವಂಶೀಯ ಆಡಳಿತ ಮೊಕ್ತೇಶರಾದ ಶರತ್ ಕೃಷ್ಣ ಪಡುವೆಟ್ನಾಯ ದೀಪ ಪ್ರಜ್ವಲನಗೊಳಿಸಿ ರಾಜ್ಯದಲ್ಲಿಯೇ ಶುಚಿ ರುಚಿಗೆ ಹೆಸರುಗಳಿಸಿ ಸರಕಾರ ದ ಯೋಜನೆ ಸಾಫಲ್ಯಗೊಂಡು ಪ್ರಖ್ಯಾತವಾಗಲಿ ಎಂದು ಶುಭ ಹಾರೈಸಿದರು.

ಉಜಿರೆ ಗ್ರಾಮ ಪಂಚಾಯತ್ ನ ಸದಸ್ಯರುಗಳು ಬೆಳ್ತಂಗಡಿ ತಾಲೂಕಿನ ಕಾರ್ಯನಿರ್ವಾಹಣಾಧಿಕಾರಿ ಭವಾನಿ ಶಂಕರ್, ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕರಾದ ಹರಿಪ್ರಸಾದ್ ಬಳೆಂಜ, ಜಿಲ್ಲಾ ವ್ಯವಸ್ಥಾಪಕರಾದ ಶಕುಂತಲಾ, ಅಕ್ಕ ಕೆಫೆ ರಾಷ್ಟ್ರೀಯ ಸಂಪನ್ಮೂಲ ಕುಡುಮ ಸಂಸ್ಥೆಯ ಫಜಲ್, ಬೆಳ್ತಂಗಡಿ ತಾಲೂಕು ಮಟ್ಟದ ನೇತ್ರಾವತಿ ಒಕ್ಕೂಟದ ಅಧ್ಯಕ್ಷರಾದ ಮಧುರ, ಕೋಶಾಧಿಕಾರಿ ಗಿರಿಜಾ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕರಾದ ಪ್ರತಿಮಾ ಹಾಗೂ ವೀಣಾ, ಬ್ಲಾಕ್ ಮೆನೇಜರ್ ನಿತೇಶ್, ತಾಲೂಕಿನ ಮೇಲ್ವಿಚಾರಕರಾದ ಜಯಾನಂದ ಹಾಗೂ ಸ್ವಸ್ತಿಕ್, ತಾಲೂಕು ಸಂಜೀವಿನಿ ಅಭಿಯಾನ ನಿರ್ವಹಣಾ ಘಟಕದ ಸಿಬ್ಬಂದಿಗಳು ಉಪಸ್ಥಿತರಿದ್ದರು.


ಬೆಳ್ತಂಗಡಿ ಬೆಸ್ಟ್ ಫೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಮ್, ಉಜಿರೆಯ ವರ್ತಕರಾದ ರಾಮಚಂದ್ರ ಶೆಟ್ಟಿ, ಭರತ್ ಗೌಡ, ಬಾಲಕೃಷ್ಣ ಶೆಟ್ಟಿ, ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷರಾದ ಶ್ರೀಧರ್ ಪೂಜಾರಿ, ಮಾಜಿ ಅಧ್ಯಕ್ಷೆ ಪುಷ್ಪಾವತಿ ಆರ್ ಶೆಟ್ಟಿ ಅಕ್ಕ ಕೆಫೆಗೆ ಭೇಟಿ ನೀಡಿ ಶುಭ ಹಾರೈಸಿದರು.


ಪ್ರೇರಣಾ ಮಹಿಳಾ ಸಂಜೀವಿನಿ ಒಕ್ಕೂಟ ಉಜಿರೆ ಇದರ ಅಧ್ಯಕ್ಷೆ ವಿನುತಾ ರಜತ್ ಗೌಡ ಸ್ವಾಗತಿಸಿ, ಮೇಲ್ವಿಚಾರಕ ಜಯಾನಂದ ಕಾರ್ಯಕ್ರಮ ನಿರ್ವಹಿಸಿ ಅಕ್ಕ ಕೆಫೆಯ ನೇತೃತ್ವ ವಹಿಸಿದ ಶ್ರೀ ಆದಿ ಪರಾಶಕ್ತಿ ಸಂಜೀವಿನಿ ಸ್ವಸಾಯ ಸಂಘದ ಅಧ್ಯಕ್ಷರಾದ ಶ್ರೀಮತಿ ಶೀಲಾ ಧನ್ಯವಾದವಿತ್ತರು . ಉಜಿರೆ ಪ್ರೇರಣ ಮಹಿಳಾ ಸಂಜೀವಿನಿ ಸಿಬ್ಬಂದಿಗಳು ಸಹಕರಿಸಿದರು .

Related posts

ಇಳಂತಿಲ: ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದ ಎಸ್.ಎಸ್.ಎಲ್.ಸಿ ವಿದ್ಯಾರ್ಥಿನಿ ಚಿಕಿತ್ಸೆಗೆ ಸ್ಪಂದಿಸದೆ ಸಾವು

Suddi Udaya

ವಾಣಿ ಕಾಲೇಜಿನ ಉಪನ್ಯಾಸಕ ಶಂಕರ್ ರಾವ್ ಅವರಿಗೆ ಸನ್ಮಾನ

Suddi Udaya

ಬುರುಡೆ ಪ್ರಕರಣ: ತನಿಖೆ ಮಾಡಿ ಅಂತಿಮ ವರದಿ ಸಲ್ಲಿಸಲು ಸೂಚನೆ

Suddi Udaya

ವೇಣೂರು ಯಕ್ಷಗಾನ ಸಂಘದಿಂದ ತಾಳಮದ್ದಳೆ ಸೇವೆ

Suddi Udaya

ದ್ವಿತೀಯ ಪಿಯುಸಿ ಫಲಿತಾಂಶ: ಎಸ್‌ಡಿಎಂ ಪದವಿಪೂರ್ವ ಕಾಲೇಜಿಗೆ ಶೇ. 99.04% ಫಲಿತಾಂಶ

Suddi Udaya

ಕಲಾಕುಂಚ ಆರ್ಟ್ಸ್ ನಲ್ಲಿ ಬೀಳ್ಕೊಡುಗೆ ಸಮಾರಂಭ

Suddi Udaya
error: Content is protected !!