ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಮುಂಡಾಜೆ ಸಿ ಎ ಬ್ಯಾಂಕ್ ನಿಂದ ಎನ್ ಎಸ್ ಗೋಖಲೆ ಸ್ಮರಣಾರ್ಥ ವಿದ್ಯಾನಿಧಿ ವಿತರಣೆ

ಮುಂಡಾಜೆ  : ಮುಂಡಾಜೆ  ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವತಿಯಿಂದ ಸದಸ್ಯರ ಮಕ್ಕಳಿಗೆ ಎನ್.ಎಸ್.ಗೋಖಲೆ ಸಂಸ್ಮರಣ ವಿದ್ಯಾನಿಧಿ ವಿತರಣೆ ಕಾರ್ಯಕ್ರಮ ಜೂ 14 ರಂದು  ಸಂಘದ ಕೇಂದ್ರ ಕಚೇರಿಯ ಸಭಾಂಗಣದಲ್ಲಿ ಜರಗಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಕೆನರಾ ಬ್ಯಾಂಕ್ ನ ನಿವೃತ್ತ ಅಧಿಕಾರಿ ವಾಸುದೇವ ಗೋಖಲೆ ಮಾತನಾಡಿ ನಾವು ಎಲ್ಲೇ ಇದ್ದರೂ ನಮ್ಮ ಊರಿಗೆ ನಮ್ಮಿಂದಾದ ಸೇವೆಯನ್ನು ಪ್ರೀತಿ, ವಿಶ್ವಾಸದಿಂದ ನೀಡಬೇಕು. ವಿದ್ಯಾರ್ಥಿಗಳಲ್ಲಿ ಬ್ಯಾಂಕಿಂಗ್ ವ್ಯವಹಾರದ ಜ್ಞಾನ ಹೆಚ್ಚಾಗಬೇಕಿದೆ. ಪ್ರತಿ ವಿದ್ಯಾರ್ಥಿಯು ಬ್ಯಾಂಕ್ ಅಥವಾ ಸಹಕಾರಿ ಸಂಘಗಳಲ್ಲಿ ಖಾತೆಗಳನ್ನು ತೆರೆದು ಎಳವೆಯಿಂದಲೇ ಉಳಿತಾಯದ ಮಹತ್ವವನ್ನು ತಿಳಿಯಬೇಕು.ಸ್ನೇಹದಿಂದ ಜೀವಿಸಬೇಕೇ ಹೊರತು ಸಂಶಯ ಚಿತ್ತರಾಗಬಾರದು ಎಂದು ಹೇಳಿದರು

ಸಂಘದ ಅಧ್ಯಕ್ಷ ಪ್ರಕಾಶನಾರಾಯಣ ರಾವ್ ಮಾತನಾಡಿ ಆರ್ಥಿಕ ಸಂಕಷ್ಟದಿಂದ ಯಾರೂ ಕೂಡ ಶಿಕ್ಷಣದಿಂದ  ವಂಚಿತರಾಗಬಾರದು ಎಂಬ ಉದ್ದೇಶದಿಂದ ಸಂಘವು ರಿಯಾಯಿತಿ ಬಡ್ಡಿ ದರದಲ್ಲಿ ಸಂಘದ ಸದಸ್ಯರ ಮಕ್ಕಳಿಗೆ ಉನ್ನತ ವ್ಯಾಸಂಗಕ್ಕೆ ವಿದ್ಯಾಭ್ಯಾಸ ಸಾಲ ನೀಡುವ ಹೊಸ ಯೋಜನೆ ರೂಪಿಸಿದೆ. ಸಂಘದ ಸದಸ್ಯರಿಗೆ ಮೈಲುತುತ್ತು ರಿಯಾಯಿತಿ ದರದಲ್ಲಿ ನೀಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಇದನ್ನು ರಸಗೊಬ್ಬರಗಳಿಗೂ ವಿಸ್ತರಿಸುವ ಕುರಿತು ಯೋಜನೆ ರೂಪಿಸಲಾಗಿದೆ ಎಂದರು. ಸಂಘದ ವೃತ್ತಿಪರ ನಿರ್ದೇಶಕ, ಹಿರಿಯ ಸಹಕಾರಿ ನಾರಾಯಣ ಫಡಕೆ ಮಾತನಾಡಿ ಅವಿಭಜಿತ ದ ಕ ಜಿಲ್ಲೆಯಲ್ಲಿ ಎನ್.ಎಸ್. ಗೋಖಲೆ ಅವರು ಸಹಕಾರಿ ಕ್ಷೇತ್ರದ ಮಹಾನ್ ಚೇತನರಾಗಿದ್ದರು .ಅವರು ಮತ್ತು ನಮ್ಮೂರ ಹಿರಿಯರು ಹಾಕಿ ಕೊಟ್ಟ ಭದ್ರಬುನಾದಿಯಿಂದ ಸಂಘವು ಅಭಿವೃದ್ಧಿ ಪಥದಲ್ಲಿ ನಡೆಯುತ್ತಿದೆ ಎಂದರು.ನಿರ್ದೇಶಕ ಕಜೆ ವೆಂಕಟೇಶ್ವರ ಭಟ್ ವಿದ್ಯಾಭ್ಯಾಸ ಸಾಲದ ಮಾಹಿತಿ ನೀಡಿದರು.

ಸಂಘದ ಕಕ್ಕಿಂಜೆ ಶಾಖೆಯ ರಾತ್ರಿ ಕಾವಲುಗಾರ ಮಾಂಕು, ನಿವೃತ್ತಿ ಹೊಂದಿದ್ದು ಅವರನ್ನು ಸಂಘದ ವತಿಯಿಂದ ಬೀಳ್ಕೊಡಲಾಯಿತು.ಈ ಬಾರಿಯ ದ್ವಿತೀಯ ಪಿಯುಸಿ ಹಾಗೂ ಎಸ್ಸೆಸ್ಸೆಲ್ಸಿಯಲ್ಲಿ ಶೇ. 90ಕ್ಕಿಂತ ಅಧಿಕ ಅಂಕಗಳಿಸಿದ ಸಂಘದ ವ್ಯಾಪ್ತಿಯ ಆರು ಗ್ರಾಮಗಳ ಸದಸ್ಯರ 50 ಮಕ್ಕಳಿಗೆ ಎನ್. ಎಸ್. ಗೋಖಲೆ ಸ್ಮರಣಾರ್ಥ ವಿದ್ಯಾನಿಧಿ ವಿತರಿಸಲಾಯಿತು.

ನಿರ್ದೇಶಕರಾದ  ಅಜಯ್ ಕಲ್ಲಿಕಾಟ್, ಅಶ್ವಿನಿ ಎ.ಹೆಬ್ಬಾರ್,ರವಿ ಪೂಜಾರಿ,ಮೋಹಿನಿ, ಶಿವಪ್ರಸಾದ್, ಶಶಿಧರ ಕಲ್ಮಂಜ, ರಾಘವ ಕಲ್ಮಂಜ, ಸುಮಾ ಗೋಖಲೆ,ವೃತ್ತಿಪರ ನಿರ್ದೇಶಕ ಬಾಬುಗೌಡ , ವೇಂಕಟೇಶ್ ಕಜೆ ಉಪಸ್ಥಿತರಿದ್ದರು.
ನಿರ್ದೇಶಕ ಚೆನ್ನಕೇಶವ ಅರಸಮಜಲು ಸ್ವಾಗತಿಸಿ, ಉಪಾಧ್ಯಕ್ಷ ರಾಘವ ಗೌಡ ಕುಡುಮಡ್ಕ ವಂದಿಸಿದರು. ಸಿಇಒ ಪ್ರಸನ್ನ ಪರಾಂಜಪೆ ಹಾಗೂ ಕಕ್ಕಿಂಜೆ ಶಾಖೆ ಮ್ಯಾನೇಜರ್ ಪುಷ್ಪಾವತಿ ಕಾರ್ಯಕ್ರಮ ನಿರೂಪಿಸಿದರು .

Related posts

ಲಾಯಿಲ ಶ್ರೀ ರಾಘವೇಂದ್ರ ಮಠದಲ್ಲಿ ಆರಾಧನಾ ಮಹೋತ್ಸವ

Suddi Udaya

ಮೂಡಬಿದ್ರಿ : ಕೋಟೆಬಾಗಿಲು ದ.ಕ ಜಿಲ್ಲಾ ಹೆಗ್ಗಡೆ ಸಮಾಜ ಸಂಘ ಮತ್ತು ಶ್ರೀ ವೀರ ಮಾರುತಿ ದೇವಸ್ಥಾನ ವತಿಯಿಂದ ಆಟಿದ ಕೂಟ

Suddi Udaya

ಸಿಯೋನ್ ಆಶ್ರಮದಲ್ಲಿ ಉಚಿತ ಶ್ರವಣದೋಷ ತಪಾಸಣಾ ಶಿಬಿರ

Suddi Udaya

ಧರ್ಮಸ್ಥಳ: ಮಂಜೂಷಾ ವಸ್ತುಸಂಗ್ರಹಾಲಯಕ್ಕೆ ಅಗ್ನಿಶಾಮಕ ವಾಹನ ಕೊಡುಗೆ

Suddi Udaya

ನೆರಿಯ: ಕಡವೆ ಬೇಟೆ, ಬಂದೂಕು ಸಹಿತ ಆರೋಪಿ ವಶಕ್ಕೆ

Suddi Udaya

ರಾಜ್ಯಮಟ್ಟದ ಬಾಲಕರ ಟೆಕ್ವಾಂಡೋ ಸ್ಪರ್ಧೆ: ಶ್ರೀ ಗುರುದೇವ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಕೀರ್ತೇಶ್ ತೃತೀಯ ಸ್ಥಾನ

Suddi Udaya
error: Content is protected !!