38.6 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಉಜಿರೆ: ಮಲೆಬೆಟ್ಟುನಲ್ಲಿ ರೈತರಿಗೆ ಹೊರ ಆವರಣ ಕೃಷಿ ತರಬೇತಿ

ಬೆಳ್ತಂಗಡಿ : ಕೃಷಿ ಇಲಾಖೆ, ಜಿಲ್ಲಾ ಕೃಷಿ ತರಬೇತಿ ಕೇಂದ್ರ ಬೆಳ್ತಂಗಡಿ ಮತ್ತು ಉಜಿರೆ ಗ್ರಾಮ ಪಂಚಾಯತ್ ಮಟ್ಟದ ಪ್ರೇರಣ ಮಹಿಳಾ ಸಂಜೀವಿನಿ ಒಕ್ಕೂಟದ ಸಹಭಾಗಿತ್ವದಲ್ಲಿ ಮಲೆಬೆಟ್ಟು ಶ್ರೀ ಮಹಾಗಣಪತಿ ದೇವಸ್ಥಾನದ ವಠಾರದಲ್ಲಿ ರೈತರ ಒಂದು ದಿನದ ಹೊರ ಆವರಣ ಕೃಷಿ ತರಬೇತಿಯು ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ಎನ್ನುತ್ತಾ ರಜತ್ ಗೌಡ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.

ಕೃಷಿ ಅಧಿಕಾರಿ ಗಣೇಶ್ ಇವರು ಇಲಾಖಾ ಸೌಲಭ್ಯದಡಿ ಸಿಗುವ ಸವಲತ್ತುಗಳಿಗೆ ಉಂಟಾಗುವ ತಾಂತ್ರಿಕ ತೊಂದರೆಗಳನ್ನು ಸ್ಥಳದಲ್ಲಿಯೇ ಪರಿಹರಿಸಿ ಇಲಾಖಾ ಮಾಹಿತಿ ನೀಡಿದರು. ಜಿಲ್ಲಾ ತರಬೇತಿ ಕೇಂದ್ರದ ಸಂಪನ್ಮೂಲ ವ್ಯಕ್ತಿ ಹಾಗೂ ಪ್ರಗತಿಪರ ಕೃಷಿಕ ಪ್ರಭಾಕರ ಮಯ್ಯ ಇವರು ತೆಂಗು ಬೆಳೆ ನಿರ್ವಹಣೆ ಮತ್ತು ಅಡಿಕೆ ಕೊಳೆ ರೋಗ ಪರಿಹಾರ ಬಗ್ಗೆ ಪ್ರಾತ್ಯಕ್ಷಿಕ ಮೂಲಕ ರೈತರಿಗೆ ನೀಡಿದರು. ಒಕ್ಕೂಟದ ಕೃಷಿಸಖಿ ಭಾಗಿರಥಿ ನ್ಯಾಚುರಲ್ ಫಾರ್ಮಿಂಗ್ ಅರ್ಜಿಯ ಬಗ್ಗೆ, ಕಿಸಾನ್ ಸಮ್ಮಾನ್ ಯೋಜನೆ ಬಗ್ಗೆ, ಬೆಳೆ ಸಮೀಕ್ಷೆ ಬಗ್ಗೆ ಮಾಹಿತಿ ನೀಡಿದರು. ಮಲೆಬೆಟ್ಟಿನ ಆಸುಪಾಸಿನ ರೈತರು ಆಸಕ್ತಿಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತರಬೇತಿಯ ಪ್ರಯೋಜನ ಪಡೆದುಕೊಂಡಿರುತ್ತಾರೆ.

ಕಾರ್ಯಕ್ರಮದಲ್ಲಿ ಉಜಿರೆ ಗ್ರಾಮ ಪಂಚಾಯಿತಿನ ಸದಸ್ಯರಾದ ಅನಿಲ್ ಡಿಸೋಜ, ಪ್ರೇರಣ ಮಹಿಳಾ ಸಂಜೀವಿನಿ ಒಕ್ಕೂಟದ ಕಾರ್ಯದರ್ಶಿ ದೀಪ ಜಗದೀಶ್, ಒಕ್ಕೂಟದ ಸಿಬ್ಬಂದಿಗಳಾದ ಎಮ್.ಬಿ.ಕೆ ಸುಜಾತ, ಎಲ್.ಸಿ.ಆರ್.ಪಿ ಸಚಿತ, ಪಶುಸಖಿ ಏಕಲತಾ ಉಪಸ್ಥಿತರಿದ್ದರು. ಒಕ್ಕೂಟದ ಅಧ್ಯಕ್ಷೆ ವಿನುತಾ ರಜತ್ ಗೌಡ ಸ್ವಾಗತಿಸಿ, ಕೃಷಿಕರಾದ ಗೋಪಾಲಗೌಡ ಬಾಜಿಮಾರು ವಂದಿಸಿದರು.

Related posts

ಮಲವಂತಿಗೆ: ಪಾಮಾಜಿ -ಕೊಲ್ಲಿ ರಸ್ತೆಗೆ ಶಾಸಕ ಹರೀಶ್ ಪೂಂಜರಿಂದ ಶಿಲಾನ್ಯಾಸ

Suddi Udaya

ಸೆ.28: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಚಂಡಿಕಾಯಾಗ-ಸತ್ಯದರ್ಶನ

Suddi Udaya

ಜನಜಾಗೃತಿ ವೇದಿಕೆ ಮಾಜಿ ಅಧ್ಯಕ್ಷ ಡಿ.ಎ ರಹಿಮಾನ್ ಅವರಿಗೆ ಪತ್ನಿ‌ ವಿಯೋಗ

Suddi Udaya

ನಾರಾವಿ ಅಂತರ್ ಕಾಲೇಜು ವಾಣಿಜ್ಯ ಮತ್ತು ಸಾಂಸ್ಕೃತಿಕ ಸ್ಪರ್ಧೆ :ಪ್ರಸನ್ನ ಪಿಯು ಕಾಲೇಜಿಗೆ ಸಮಗ್ರ ಪ್ರಶಸ್ತಿ

Suddi Udaya

ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ: ಪಡಂಗಡಿಯಲ್ಲಿ ಎನ್.ಐ.ಎ ಅಧಿಕಾರಿಗಳ ಕಾರ್ಯಾಚರಣೆ: ನೌಷದ್ ತಂಗಿ, ತಾಯಿ ವಶಕ್ಕೆ ಪಡೆದು ವಿಚಾರಣೆ ನಡೆಸಿದ ಚೈನೈನಿಂದ ಬಂದ ಡಿವೈಎಸ್ಪಿ ವಿಘ್ನೇಶ್ ನೇತೃತ್ವದ ತಂಡ

Suddi Udaya

ಉಜಿರೆ: ಎಸ್. ಡಿ.ಎಂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸಂಸ್ಕೃತೋತ್ಸವ ಕಾರ್ಯಕ್ರಮ

Suddi Udaya
error: Content is protected !!