32.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ರಾಜ ಕೇಸರಿ ಸಂಘಟನೆಯ ಸಂಸ್ಥಾಪಕ ದೀಪಕ್ ಜಿ ಬೆಳ್ತಂಗಡಿ ರವರಿಗೆ ರಾಜ್ಯಮಟ್ಟದ “ರಾಷ್ಟ್ರಕವಿ ಕುವೆಂಪು ರತ್ನ” ಪ್ರಶಸ್ತಿ

ಬೆಳ್ತಂಗಡಿ: ಮೈತ್ರಿ ಕಲಾತಂಡ ಕನಕ ನಗರ ಜೆಪಿ ನಗರ ಬೆಂಗಳೂರು ಇಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಪ್ರಧಾನ ಸಮಾರಂಭ ಮತ್ತು ಸಾಂಸ್ಕೃತ ಕಾರ್ಯಕ್ರಮದಲ್ಲಿ ರಾಜ ಕೇಸರಿ ಸಂಘಟನೆಯ ಸಂಸ್ಥಾಪಕ ದೀಪಕ್ ಜಿ ಬೆಳ್ತಂಗಡಿ ರವರಿಗೆ ರಾಜ್ಯಮಟ್ಟದ “ರಾಷ್ಟ್ರಕವಿ ಕುವೆಂಪು ರತ್ನ” ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಈ ವೇಳೆ ಮೈತ್ರಿ ಕಲಾತಂಡದ ಅಧ್ಯಕ್ಷ ಮಹದೇವಣ್ಣ ಮಾತನಾಡಿ ಸದಾ ಧಾರ್ಮಿಕ, ಶೈಕ್ಷಣಿಕ, ಕ್ರೀಡೆ, ಶಿಕ್ಷಣ, ಆರೋಗ್ಯ ಪರಿಸರ ಸಂರಕ್ಷಣೆ ಸ್ವಚ್ಛಾಲಯ ಇಂತಹ ಕಾರ್ಯಕ್ರಮಗಳನ್ನು ಸಮಾಜದಿಂದ ಸಮಾಜಕ್ಕಾಗಿ ತನ್ನೆಲ್ಲ ಶ್ರೇಯಸ್ಸನ್ನು ಮುಡಿಪಾಗಿಟ್ಟು ಬಡವರ ಜೀವನಕ್ಕಾಗಿ ತನ್ನೆಲ್ಲ ದಿನಗಳನ್ನೇ ಮೀಸಲಿಡುವಂತಹ ರಾಜ ಕೇಸರಿ ಸಂಘಟನೆಯ ದೀಪಕ್ ಜಿ ಅಂತವರು ಈಗಿನ ಕಾಲದಲ್ಲಿ ಸಿಗುವವರು ತುಂಬಾ ವಿರಳ ಇಂತಹ ಸಂಘಟನೆಗಳು ಇನ್ನಷ್ಟು ಬೆಳೆದು ಬರಲಿ ಎಂದು ಇವರಿಗೆ ಇನ್ನಷ್ಟು ಪ್ರಶಸ್ತಿಗಳ ಬರಲಿ ಎಂದು ಶುಭಹಾರೈಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದಂತಹ ಸಂಸ್ಥಾಪಕರು ಕರ್ನಾಟಕ ಜನಸೇವಾ ಟ್ರಸ್ಟ್ ರಾಷ್ಟ್ರಧ್ಯಕ್ಷ ಭಾರತೀಯ ಜನಸೇವ ಪರಿಷತ್, ಕರ್ನಾಟಕ ಪ್ರಖ್ಯಾತ ನಿರಾಶ್ರಿತರ ಸೇವಕರಾದ ಪ್ರಶಾಂತ್ ಚಕ್ರವರ್ತಿ ಅವರು ಮಾತನಾಡಿ ರಾಜಕೇಸರಿ ಸಂಘಟನೆ ಯಾರು ಮಾಡದಂತಹ ವಿಶಿಷ್ಟ ಶೈಲಿಯಲ್ಲಿ ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದೆ ಇದು ನಮ್ಮ ರಾಜ್ಯಕ್ಕೆ ಹೆಮ್ಮೆ ಎಂದು ಸಂತಸ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಕಾರ್ಯಕ್ರಮಕ್ಕೆ ಬಂದಿದ್ದಂತಹ ರಾಜ ಕೇಸರಿ ಪದಾಧಿಕಾರಿಗಳಿಗೆ ಕೂಡ ಸ್ಮರಣಿಕೆ ನೀಡಿ ಗೌರವಿಸಿದರು.

Related posts

ಅಂತರ್ ಕಾಲೇಜು ಚರ್ಚಾ ಸ್ಪರ್ಧೆ: ಉಜಿರೆ ಎಸ್.ಡಿ.ಎಂ. ಬಿ.ಎಡ್. ಕಾಲೇಜಿನ ವಿದ್ಯಾರ್ಥಿ ಫಾತಿಮಾತ್ ರಾಫಿಯಾ ರಿಗೆ ದ್ವಿತೀಯ ಸ್ಥಾನ

Suddi Udaya

ಕುಪ್ಪೆಟ್ಟಿ ಸ.ಉ.ಹಿ.ಪ್ರಾ. ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಮತ್ತು ನೂತನ ಶೌಚಾಲಯದ ಉದ್ಘಾಟನೆ

Suddi Udaya

ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಕಾರಿ ಪೋಸ್ಟ್: ಆರೋಪಿ ಕಿಲ್ಲೂರು ನಿವಾಸಿ ಮೊಹಮ್ಮದ್ ಕೈಫ್ ತಮಿಳುನಾಡಿನಲ್ಲಿ ಬಂಧನ

Suddi Udaya

ಶಿಶಿಲ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆ ಮತ್ತು ಸಾಮಾಜಿಕ ಪರಿಶೋಧನಾ ಕುರಿತು ಐಇಸಿ ಚಟುವಟಿಕೆ

Suddi Udaya

ಹಾವುಗಳ ಸಂರಕ್ಷಕರಾದ ಸ್ನೇಕ್ ಅಶೋಕ್ ನಾಗರ ಹಾವು ಹಿಡಿಯುವ ವೇಳೆ ಹಾವು ಕಚ್ಚಿ ಮಂಗಳೂರು ಆಸ್ಪತ್ರೆಗೆ ದಾಖಲು

Suddi Udaya

ಬೆಳಾಲು ಗ್ರಾಮ ಪಂಚಾಯತ್ ಮಕ್ಕಳ ಗ್ರಾಮಸಭೆ

Suddi Udaya
error: Content is protected !!