July 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ರೂ.2.25 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ಸುಸಜ್ಜಿತ ಪ್ರೌಢಶಾಲಾ ಕಟ್ಟಡ ಸಿಂಧೂರ: ಜೂ. 20 ರಂದು ಲೋಕಾರ್ಪಣೆಗೊಳ್ಳಲಿದೆಪತ್ರಿಕಾಗೋಷ್ಠಿಯಲ್ಲಿ ಅನಂತ ಭಟ್ ಮಚ್ಚಿಮಲೆ ಹೇಳಿಕೆ

ಮುಂಡಾಜೆ: ರೋಟರಿ ಕ್ಲಬ್ ಬೆಳ್ತಂಗಡಿಯ ಸಾರಥ್ಯದಲ್ಲಿ ರೋಟರಿ ಕ್ಲಬ್ ಬೆಂಗಳೂರು ಇಂದಿರಾನಗರ, ಕ್ಯಾನ್ ಫಿನ್ ಹೋಮ್ಸ್ ಲಿ. ಬೆಂಗಳೂರು, ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು, ಮತ್ತಿತರ ದಾನಿಗಳ ನೆರವಿನಿಂದ 18000 ಚದರ ಅಡಿಯಲ್ಲಿ ತರಗತಿ ಕೊಠಡಿ ಕಚೇರಿ ಕೊಠಡಿ, ಸಿಬ್ಬಂದಿ ಕೊಠಡಿ, ಕಂಪ್ಯೂಟರ್ ಲ್ಯಾಬ್ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಶೌಚಾಲಯ ಹೀಗೆ ಸುಮಾರು ರೂ 2.25 ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಾಣಗೊಂಡ ಸುಸಜ್ಜಿತ ಪ್ರೌಢಶಾಲಾ ಕಟ್ಟಡ “ಸಿಂಧೂರ” ಜೂ.20 ರಂದು ಲೋಕಾರ್ಪಣೆಗೊಳ್ಳಲಿದೆ ಎಂದು ಬೆಳ್ತಂಗಡಿ ರೋಟರಿ ಕ್ಲಬ್ ನಿಕಟಪೂರ್ವ ಅಧ್ಯಕ್ಷ ಅನಂತ ಭಟ್ ಮಚ್ಚಿಮಲೆ ಹೇಳಿದರು.

ಅವರು ಜೂ.16 ರಂದು ಮುಂಡಾಜೆ ಅನುದಾನಿತ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು,

ಉದ್ಘಾಟನ ಸಮಾರಂಭದ ಅಧ್ಯಕ್ಷತೆಯನ್ನು ಡಾ. ಪ್ರಭಾಕರ ಭಟ್ ಕಲ್ಲಡ್ಕ ವಹಿಸಲಿದ್ದಾರೆ. ಸಿಂಧೂರ ಕಟ್ಟಡದ ಉದ್ಘಾಟನೆಯನ್ನು ರೊ. ವಿಕ್ರಂ ದತ್ತ, ಜಿಲ್ಲಾ ಗವರ್ನರ್, ರೋಟರಿ ಜಿಲ್ಲೆ-3181 ನೆರವೇರಿಸಲಿದ್ದಾರೆ.ಮುಖ್ಯ ಅತಿಥಿಗಳಾಗಿ ಮಂಗಳೂರು, ಲೋಕಸಭಾ ಸದಸ್ಯರಾದ, ಕ್ಯಾಪ್ಟನ್ ಬ್ರಿಜೇಶ್ ಚೌಟ, ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಶಾಸಕ ಹರೀಶ್ ಪೂಂಜ,ವಿಧಾನ ಪರಿಷತ್ ಸದಸ್ಯರಾದ, ಕೆ. ಪ್ರತಾಪಸಿಂಹ ನಾಯಕ್, ಮುಂಡಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಗಣೇಶ ಬಂಗೇರ,ಪ್ರಶಾಂತ್ ಜೋಶಿ, ಕ್ಯಾನ್ ಫಿನ್ ಹೋಮ್ಸ್ ಲಿ., ಬೆಂಗಳೂರು ಆಗಮಿಸಲಿದ್ದಾರೆ.
ವಿಶೇಷ ಅತಿಥಿಗಳಾಗಿ ಶಶಿಧರ ಶೆಟ್ಟಿ, ಬರೋಡ, ಉದ್ಯಮಿಗಳು, ನವಶಕ್ತಿ ಗುರುವಾಯನಕೆರೆ.ಶ್ರೀ ಕೆ ಮೋಹನ್ ಕುಮಾರ್, ಲಕ್ಷ್ಮಿ ಇಂಡಸ್ಟ್ರೀಸ್ ಉಜಿರೆ, ಶ್ರೀಧರ ಜಿ.ಭಿಡೆ ಅಧ್ಯಕ್ಷರು ಶತಾಬಿ ವಿದ್ಯಾಲಯ ಸಮಿತಿ ಮುಂಡಾಜೆ, ಶ್ರೀ ವೆಂಕಟೇಶ ತುಳುವುಳೆ ಕ್ಷೇತ್ರ ಶಿಕ್ಷಣಾಧಿಕಾರಿ ಬೆಳ್ತಂಗಡಿ, ರೊ. ಹೆಚ್.ಆರ್. ಕೇಶವ, ನಿಕಟಪೂರ್ವ ಜಿಲ್ಲಾ ಗವರ್ನರ್ ರೊ, ಸುಪ್ರಿಯ ಕಂದಾರಿ, ಅಧ್ಯಕ್ಷರು ಬೆಂಗಳೂರು ರೋಟರಿ ಕ್ಲಬ್, ರೊ.ಪೂರನ್ ವರ್ಮ, ಅಧ್ಯಕ್ಷರು ಬೆಳ್ತಂಗಡಿ ರೋಟರಿ ಕ್ಲಬ್ ಭಾಗವಹಿಸಲಿದ್ದಾರೆ ಎಂದು ಅನಂತ ಭಟ್ ಮಚ್ಚಿಮಲೆ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಪೂರಣ್ ವರ್ಮ,ಕಾರ್ಯದರ್ಶಿ ಸಂದೇಶ್ ರಾವ್, ಮುಂಡಾಜೆ ವಿವೇಕಾನಂದ ವಿದ್ಯಾಸಂಸ್ಥೆಯ ಅಧ್ಯಕ್ಷ ವಿನಯಚ್ಚಂದ್ರ,ರೋಟರಿ ಕ್ಲಬ್ ನಿಕಟಪೂರ್ವ ಕಾರ್ಯದರ್ಶಿ ವಿದ್ಯಾ ಕುಮಾರ್ ಕಾಂಚೋಡು,ಮುಂಡಾಜೆ ಅನುದಾನಿತ ಪ್ರೌಢಶಾಲಾ ಸಂಚಾಲಕ ನಾರಾಯಣ ಫಡ್ಕೆ,ನಾರಾಯಣ ಗೌಡ ಪಂಚಶ್ರೀ, ಮುಂಡಾಜೆ ಅನುದಾನಿತ ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ಜಯಂತಿ ಉಪಸ್ಥಿತರಿದ್ದರು.

Related posts

ಮಹಿಳಾ ಹೆಡ್ ಕಾನ್ ಸ್ಟೇಬಲ್ ಹುದ್ದೆಗೆ ಮುಂಭಡ್ತಿಗೊಂಡ ವೇಣೂರು ಪೊಲೀಸ್ ಠಾಣೆಯ ಜಯಶ್ರೀ

Suddi Udaya

ಸೆ.22-ಅ.1: ಶ್ರೀ ಕ್ಷೇತ್ರ ಮೊಂಟೆತಡ್ಕ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ

Suddi Udaya

ಶ್ರೀ ಧ.ಮಂ. ಪ್ರಕೃತಿ ಮತ್ತು ಯೋಗ ಕಾಲೇಜು: ಯಶಸ್ವಿ ಚಿಣ್ಣರ ಯೋಗ ತರಬೇತಿ ಶಿಬಿರದ ಸಮಾರೋಪ

Suddi Udaya

ಕೊಕ್ಕಡ ಬಾರ್ ನಲ್ಲಿ ಇಬ್ಬರ ಮೇಲೆ ಹಲ್ಲೆ: ಪ್ರಕರಣ ದಾಖಲು

Suddi Udaya

ಪ್ರಧಾನಿ ನರೇಂದ್ರ ಮೋದಿಜಿಯವರ ಮನ್ ಕೀ ಬಾತ್ ಕಾರ್ಯಕ್ರಮ ವೀಕ್ಷಣೆಯಲ್ಲಿ ಬಿಜೆಪಿ ಬೆಳ್ತಂಗಡಿ ಮಂಡಲ ಎರಡನೇ ಭಾರಿಗೆ ರಾಜ್ಯದಲ್ಲಿ ಪ್ರಥಮ ಸ್ಥಾನ

Suddi Udaya

ಕಲ್ಮಂಜ ಬ್ರಹ್ಮಶ್ರೀ ಯುವ ಬಿಲ್ಲವ ವೇದಿಕೆಯ ಮಾಸಿಕ ಸಭೆ

Suddi Udaya
error: Content is protected !!