ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಬಾಯ೯ ಬಿಜೆಪಿ ಸ್ಪಂದನ ಸಮಿತಿಯಿಂದ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಸಹಾಯ ಹಸ್ತ

ಬಾಯ೯: ಇತೀಚೆಗೆ ಸುರಿದ ಭಾರಿಮಳೆಗೆ ಬಾರ್ಯಾ, ಪುತ್ತಿಲ ಗ್ರಾಮದ ಹಲವೆಡೆ ಗುಡ್ಡಕುಸಿದು ತುಂಬಾ ಮನೆಗಳಿಗೆ ಹಾನಿ ಸಂಭವಿಸಿದೆ.


ಕಡು ಬಡತನದಲ್ಲಿರುವ ಕೆಲವು ಕುಟುಂಬಗಳಿಗೆ ಎರಡು ಗ್ರಾಮದ ದಾನಿಗಳಿಂದ ದೇಣಿಗೆ ಸಂಗ್ರಹಿಸಿ ಮನೆಗೆ ಆದ ಹಾನಿ ಸರಿಪಡಿಸಲು ಮತ್ತು ಗುಡ್ಡ ಜರಿತದಿಂದ ಮನೆಗೆ ಬಿದ್ದ ಮಣ್ಣು ತೆರವು ಗೊಳಿಸಲು ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತರು ಒಟ್ಟುಸೇರಿ ಬಿಜೆಪಿ ಸ್ಪಂದನ ಸಮಿತಿ ರಚನೆ ಮಾಡಿ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಸಹಾಯ ಹಸ್ತ ನೀಡಲಾಯಿತು. ಬಾರ್ಯಾ ಕೃಷಿಪತ್ತಿನ ಸಹಕಾರಿ ಸಂಘದ ನಿಕಟ ಪೂರ್ವ ಅಧ್ಯಕ್ಷರಾದ ಪ್ರಸನ್ನ ಗೌಡ, ಬಾರ್ಯಾ ಗ್ರಾಮ ಪಂಚಾಯತ್ ಅಧ್ಯಕ್ಷರರಾದ ಪ್ರಶಾಂತ್ ಪೈ, ರಾಜೇಶ್ ರೈ, ಮೋನಪ್ಪ ಗೌಡ ಮನಿಲ,ಗೌತಮ್ ಗೌಡ, ಗ್ರಾಮ ಪಂಚಾಯತ್ ಸದಸ್ಯರು ಧರ್ಣಪ್ಪ ಗೌಡ, ಮೋಹನ್ ಅಜಿರ ಮತ್ತಿತರ ದಾನಿಗಳ ನೆರವಿನಿಂದ ಅಜಿರಕೋಂಕೇರಿ, ಪೆಲತ್ತಾಜೆ, ಪೆರಿಯೊಟ್ಟುಗಳಲ್ಲಿ ಯಂತ್ರದ ಮೂಲಕ ಮಣ್ಣು ತೆಗೆಸಲಾಯಿತು ಹಾಗೂ ಯಂತ್ರ ಹೋಗದ ಕಡೆಗಳಲ್ಲಿ ಕೂಲಿಯಾಳುಗಳ ಮೂಲಕ ತೆಗೆಸಲು ಸಹಾಯಧನ ನೀಡಲಾಯಿತು.


ಮೋಹನ ಗೌಡ ಅಜಿರ, ಪ್ರಸನ್ನ ಗೌಡ, ಪ್ರಶಾಂತ್ ಪೖ, ರಾಜೇಶ್ ರೈ, ಶಿವರಾಮ ಬಾರ್ಯ, ಹೇಮಾವತಿ, ಪ್ರವೀಣ್ ರೖ ಹಾಗೂ ಬಿಜೆಪಿ ಗ್ರಾಮ ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು.
ಅನಾರೋಗ್ಯದಿಂದ ಬಳಲುತ್ತಿರುವ ಅನಿತಾ ದರ್ಖಾಸು ಅವರಿಗೆ ರೂ.10,000 ಚೆಕ್ಕನ್ನು ನೀಡಲಾಯಿತು.

Related posts

ಕರಾಯ ವಿದ್ಯುತ್ ಫೀಡರುಗಳಲ್ಲಿ ನಾಳೆ (ಆ.8) ವಿದ್ಯುತ್ ನಿಲುಗಡೆ

Suddi Udaya

ಅರಸಿನಮಕ್ಕಿ ಗ್ರಾ.ಪಂ. ಪಿಡಿಒ ಆಗಿ ಜಯರಾಜ್ ಅಧಿಕಾರ ಸ್ವೀಕಾರ

Suddi Udaya

ಕೊಯ್ಯೂರು: ಕೋರಿಯಾರು ವಾತ್ಸಲ್ಯ ಮನೆಯ ಗೋಪಾಲಕೃಷ್ಣ ಶರ್ಮ ನಿಧನ

Suddi Udaya

ಜೈನ ಬಸದಿಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅರ್ಚಕರುಗಳಿಗೆ ಮಾಸಿಕ ಗೌರವ ಧನ ನೀಡಲು ಅನುದಾನ ಬಿಡುಗಡೆ

Suddi Udaya

ರಾಷ್ಟ್ರಮಟ್ಟದ ಪುರುಷರ ಯೋಗಾಸನ ಸ್ಪರ್ಧೆಗೆ ಉಜಿರೆಯ ಎಸ್‌ಡಿಎಂ ವಿದ್ಯಾರ್ಥಿಗಳ ಆಯ್ಕೆ

Suddi Udaya

ಮೇಲಂತಬೆಟ್ಟು ಶ್ರೀ ನಾಗಬ್ರಹ್ಮ ದೇವಸ್ಥಾನದ ಅರ್ಚಕ ಚಂದ್ರಶೇಖರ್ ಭಟ್ ನಿಧನ

Suddi Udaya
error: Content is protected !!