23.3 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿಬೆಳ್ತಂಗಡಿವರದಿ

ಗುರುವಾಯನಕೆರೆ: ಎಸ್.ಎಂ.ಎ ವತಿಯಿಂದ ನೂತನ ಮದರಸ ಕಟ್ಟಡ ಉದ್ಘಾಟನೆ

ಬೆಳ್ತಂಗಡಿ: ಸುನ್ನೀ ಮ್ಯಾನೇಜ್ ಮೆಂಟ್ ಅಸೋಸಿಯೇಷನ್ ಕರ್ನಾಟಕ ರಾಜ್ಯ ಸಮಿತಿಯ ಮದರಸ ನಿರ್ಮಾಣ ಯೋಜನೆಯಡಿಯಲ್ಲಿ ಗುರುವಾಯನಕೆರೆ ಸಮೀಪದ ಪೆರಳ್ದರಕಟ್ಟೆಯ ಕಾಂತಿಜಾಲ್ ಎಂಬಲ್ಲಿ ನಿರ್ಮಾಣಗೊಂಡ ಎಸ್ ಎಂ ಎ 3ನೇ ಮದರಸದ ಉದ್ಘಾಟನೆ ನಡೆಯಿತು.


ಎಸ್ ಎಂ ಎ ರಾಜ್ಯ ಸಮಿತಿಯ ಅಧ್ಯಕ್ಷ ಸೆಯ್ಯಿದ್ ಇಸ್ಮಾಯಿಲ್ ತಂಙಳ್ ಉಜಿರೆ ನೂತನ ಮದರಸ ಕಟ್ಟಡವನ್ನು ಉದ್ಘಾಟಿಸಿದರು.


ಬಳಿಕ ನಡೆದ ಸಭಾ ಕಾರ್ಯಕ್ರಮವನ್ನು ರಾಜ್ಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಹ್ಮಾನ್ ಮದನಿ ಜೆಪ್ಪು ಉದ್ಘಾಟಿಸಿದರು. ರಾಜ್ಯ ಉಪಾಧ್ಯಕ್ಷರಾದ ಅಬ್ದುಲ್ ಹಮೀದ್ ಹಾಜಿ ಕೊಡುಂಗಾಯಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್ ಜೆ ಎಂ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆಕೆ ಮುಹಿಯುದ್ದೀನ್ ಕಾಮಿಲ್ ಸಖಾಫಿ, ಎಸ್ ಎಂ ಎ ದಕ್ಷಿಣ ಕನ್ನಡ ಈಸ್ಟ್ ಜಿಲ್ಲಾ ಸಮಿತಿ ಅಧ್ಯಕ್ಷ ಅಬ್ಬಾಸ್ ಬಟ್ಲಡ್ಕ, ವೆಸ್ಟ್ ಜಿಲ್ಲಾ ಸಮಿತಿ ಅಧ್ಯಕ್ಷ ಬಶೀರ್ ಕೂಳೂರು ಶುಭಾಶಯ ಕೋರಿ ಮಾತನಾಡಿದರು.ರಾಜ್ಯಾಧ್ಯಕ್ಷ ಸೆಯ್ಯಿದ್ ಇಸ್ಮಾಯಿಲ್ ತಂಙಳ್ ಉಜಿರೆ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಸಮಿತಿ ಪದಾಧಿಕಾರಿಗಳಾದ ಎಂಬಿ ಮುಹಮ್ಮದ್ ಸಾಧಿಕ್, ಇಸ್ಮಾಯಿಲ್ ಸಅದಿ ಉರುಮಣೆ, ಪಿಎಂ ಇಬ್ರಾಹಿಂ ನಈಮಿ, ರಾಜ್ಯ ಸಮಿತಿಯ ಸದಸ್ಯರಾದ ಹಾಫೀಳ್ ಹನೀಫ್ ಮಿಸ್ಬಾಹಿ, ಇಬ್ರಾಹಿಂ ಸಖಾಫಿ ಪುಂಡೂರು, ಹನೀಫ್ ಸಅದಿ ,ಅಬ್ದುಲ್ ರಝಾಕ್ ಹಾಜಿ ಮುಕ್ಕ, ದಕ್ಷಿಣ ಕನ್ನಡ ಜಿಲ್ಲಾ ವಕ್ಫ್ ಸಲಹಾ ಸಮಿತಿ ಸದಸ್ಯರಾದ ಜೆಎಚ್ ಸಿದ್ದೀಕ್ ಕಾಜೂರು, ಎಸ್ ಎಂ ಎ ಜಿಲ್ಲಾ ಸಮಿತಿಯ ಸಿರಾಜುದ್ದೀನ್ ಸಖಾಫಿ ಪಿಚಲಾರು, ಝಾಕಿರ್ ಕಣಿಯೂರು ಮೊದಲಾದವರು ಉಪಸ್ಥಿತರಿದ್ದರು.

ಕಾಂತಿಜಾಲ್ ಮದರಸ ಸಮಿತಿಯ ಹಂಝ ಮದನಿ, ನಝೀರ್, ಅಬ್ದುಲ್ಲಾ ಮದನಿ ಮೊದಲಾದವರು ಕಾರ್ಯಕ್ರಮವನ್ನು ಸಂಘಟಿಸಿದರು. ರಾಜ್ಯ ಕಾರ್ಯದರ್ಶಿ ಅಶ್ರಫ್ ಸಖಾಫಿ ಮೂಡಡ್ಕ ಸ್ವಾಗತಿಸಿ, ಈಸ್ಟ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಸಖಾಫಿ ಕಬಕ ಧನ್ಯವಾದಗೈದರು.

Related posts

ಚಂದ್ರಯಾನ-3 ಯಶಸ್ವಿಯಾದ ಹಿನ್ನಲೆ: ವಿ.ಹಿಂ.ಪ. ಮತ್ತು ಭಜರಂಗದಳ ಕಾರ್ಯಕರ್ತರಿಂದ ಗುರುವಾಯನಕೆರೆಯಲ್ಲಿ ಸಂಭ್ರಮಾಚರಣೆ

Suddi Udaya

ಪುದುವೆಟ್ಟು: ಯುವಕ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ತಿರುವು: ಲೋನ್ ಆಪ್ ನಿಂದ ಸಾಲ ಪಡೆದುಕೊಂಡ ವದಂತಿ: ಕಂಪೆನಿಯ ಬೆದರಿಕೆಗೆ ಹೆದರಿ ಆತ್ಮಹತ್ಯೆ ಶಂಕೆ

Suddi Udaya

ಅಳದಂಗಡಿ ಸೊಸೈಟಿಯಿಂದ ಸಂಘ ಸಂಸ್ಥೆಗಳಿಗೆ ದೇಣಿಗೆ ಹಸ್ತಾಂತರ

Suddi Udaya

ಪುರಿಯ ಹಾಲಿನ ಸೊಸೈಟಿ ನೂತನ ಕಟ್ಟಡದ ಅನುದಾನಕ್ಕಾಗಿ ಶಾಸಕ ಹರೀಶ್ ಪೂಂಜರಿಗೆ ಮನವಿ

Suddi Udaya

ಎಸ್‌.ಡಿ.ಎಂ ಆಂಗ್ಲ ಮಾಧ್ಯಮ ಶಾಲೆಯ ಕಿಂಡರ್‌ಗಾರ್ಟನ್ ವಿಭಾಗದಲ್ಲಿ “ಜಂಗಲ್ ಜಂಬೂರಿ” ಕಾರ್ಯಕ್ರಮ

Suddi Udaya

ಸುನ್ನೀ ವಿದ್ಯಾಬ್ಯಾಸ ಬೋರ್ಡ್ ಫಲಿತಾಂಶ: ಕೊಯ್ಯೂರು ಉಣ್ಣಾಲು ಮದರಸದ ಮುಹಮ್ಮದ್ ರಾಝಿ, ಫಾತಿಮತ್ ನುಝೈರಾ ರೇಂಜ್ ಗೆ ಪ್ರಥಮ

Suddi Udaya
error: Content is protected !!