ಗೇರುಕಟ್ಟೆ :ಸುಂದರ ಭಾರತ ಪ್ರತಿಷ್ಠಾನ ಬೆಂಗಳೂರು ಇವರ ವತಿಯಿಂದ ಸರಕಾರಿ ಶಾಲೆಗಳಿಗೆ ನೀಡಲಾಗುವ ಉಚಿತ ನೋಟ್ ಪುಸ್ತಕ ಗಳ ವಿತರಣಾ ಕಾರ್ಯಕ್ರಮವು ಜೂ 17.ರಂದು ಸರಕಾರಿ ಪ್ರೌಢಶಾಲೆ ಗೇರುಕಟ್ಟೆ ನಡೆಯಿತು

. ಕಳಿಯ ಗ್ರಾಮ ಪಂಚಾಯತಿನ ಉಪಾಧ್ಯಕ್ಷರಾದ ಶ್ರೀಮತಿ ಇಂದಿರಾ ಬಿ. ಶೆಟ್ಟಿ ಹಾಗೂ ಎಸ್ಡಿಎಂಸಿ ಉಪಾಧ್ಯಕ್ಷರಾದ ಶ್ರೀ ಗೋಪಾಲಗೌಡ ಮುದ್ದುಂಜ ಇವರ ನೇತೃತ್ವದಲ್ಲಿ 8,9,10ನೇ ತರಗತಿ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು. , ಕಳಿಯ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಇಂದಿರಾ ಮಾತನಾಡಿ ವಿದ್ಯೆಯ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಿ, ನೀಡಿರುವಂತಹ ಉಚಿತ ನೋಟ್ ಪುಸ್ತಕಗಳು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯಲ್ಲಿ ಪರಿಣಾಮಕಾರಿಯಾಗಲಿ ಎಂದು ಹಾರೈಸಿದರು. ಎಸ್. ಡಿ.ಎಂ. ಸಿ. ಉಪಾಧ್ಯಕ್ಷರಾದ ಶ್ರೀ ಗೋಪಾಲಗೌಡ ಇವರು ವಿದ್ಯಾರ್ಥಿಗಳಿಗೆ ಶುಭ ಹಾರೈಸಿ ಸುಂದರ ಭಾರತ ಪ್ರತಿಷ್ಠಾನದವರಿಗೆ ಅಭಿನಂದನೆಯನ್ನು ಸಲ್ಲಿಸಿದರು. ಶಾಲಾ ಮುಖ್ಯ ಶಿಕ್ಷಕರಾದ ಈಶ್ವರಿ ಕೆ. ಇವರು ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುವುದನ್ನು ತಪ್ಪಿಸಲು ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಸಂಘ ಸಂಸ್ಥೆಗಳವರು ನೀಡುವ ಇಂತಹ ಕೊಡುಗೆಗಳು ವಿದ್ಯಾರ್ಥಿಗಳ ಭವಿಷ್ಯಕ್ಕೆ ಪೂರಕವಾಗಲಿವೆ. ಇನ್ನೂ ಹೆಚ್ಚಿನ ಸಹಕಾರ ಸಂಘ-ಸಂಸ್ಥೆಗಳಿಂದ, ಊರ ದಾನಿಗಳಿಂದ, ಹಿರಿಯ ವಿದ್ಯಾರ್ಥಿಗಳಿಂದ ದೊರೆಯಲಿ ಎಂದು ಹಾರೈಸಿ, ಸುಂದರ ಭಾರತ ಪ್ರತಿಷ್ಠಾನ ಪದಾಧಿಕಾರಿಗಳಿಗೆ ಅಭಿನಂದನೆಗಳನ್ನು ಸಲ್ಲಿಸಿದರು. ಶಾಲಾ ಶಿಕ್ಷಕರು ಪ್ರತಿಷ್ಠಾನದವರಿಗೆ ಕೃತಜ್ಞತೆಗಳನ್ನು ತಿಳಿಸುತ್ತಾ ಪುಸ್ತಕ ವಿತರಣೆಗೆ ಸಹಕರಿಸಿದರು.











