25.8 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಇಸ್ರೇಲ್ -ಇರಾನ್ ಯುದ್ಧದ ಹಿನ್ನಲೆಯಲ್ಲಿ ತೀವ್ರ ಕಳವಳ ವ್ಯಕ್ತಪಡಿಸಿದ ಬೆಳ್ತಂಗಡಿ ಧರ್ಮಪ್ರಾಂತ್ಯ

ಬೆಳ್ತಂಗಡಿ : ಇಸ್ರೇಲ್ -ಇರಾನ್ ಯುದ್ಧದ ಹಿನ್ನಲೆಯಲ್ಲಿ ಧರ್ಮಪ್ರಾಂತ್ಯದ ಎಲ್ಲಾ ಧರ್ಮಗುರುಗಳೊಂದಿಗೆ ವಿಶೇಷ ಪೂಜೆ ಪ್ರಾರ್ಥನೆಗಳನ್ನು ಸಲ್ಲಿಸಿದ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತಿ ವಂದನೀಯ ಲಾರೆನ್ಸ್ ಮುಕ್ಕುಯಿ ತೀವ್ರ ಕಳವಳ ವ್ಯಕ್ತಪಡಿಸಿದರು.

ದ.ಕ. ಬೆಳ್ತಂಗಡಿ ಪ್ರದೇಶದಿಂದ ಬಹಳಷ್ಟು ಸಹೋದರ -ಸಹೋದರಿಯರು ಇಸ್ರೇಲಿನಲ್ಲಿ ಉದ್ಯೋಗದಲ್ಲಿರುವುದು ಹಾಗೂ ಇರಾನ್ ನಲ್ಲಿರುವ ಭಾರತೀಯ ವಿದ್ಯಾರ್ಥಿಗಳ ಕುರಿತು ವಿಶೇಷ ಕಾಳಜಿ ವ್ಯಕ್ತಪಡಿಸಿದ ಧರ್ಮಾಧ್ಯಕ್ಷರು “ಶಾಂತಿಗಾಗಿ ಎಲ್ಲರು ಪ್ರಾರ್ಥಿಸಬೇಕು, ಯುದ್ಧದ ಭೀತಿ ಅಗಲಿಹೋಗಲಿ. ಈ ಸಂಕಟದ ಸಂದರ್ಭದಲ್ಲಿ ನಾವು ಎರಡೂ ರಾಷ್ಟ್ರಗಳ ಜನತೆಗೆ ಮಾನವೀಯ ಸಹಾಯ ನೀಡುವಂತೆ ಜಾಗತಿಕ ಸಮುದಾಯವನ್ನು ವಿನಂತಿಸುತ್ತೇವೆ.’ ಹೇಳಿದರು.

ಇಸ್ರೇಲ್ ಮತ್ತು ಇರಾನ್ ನಡುವಿನ ತೀವ್ರತೆಯಿಂದ ಉಂಟಾಗಿರುವ ಯುದ್ಧ ಪರಿಸ್ಥಿತಿಯ ಬಗ್ಗೆ ಬೆಳ್ತಂಗಡಿ ಧರ್ಮಪ್ರಾಂತ್ಯದ ಶಾಂತಿ ಮತ್ತು ಮಾನವ ಹಕ್ಕುಗಳ ವೇದಿಕೆ ತನ್ನ ಗಂಭೀರ ಚಿಂತೆಗಳನ್ನು ವ್ಯಕ್ತಪಡಿಸುತ್ತಿದೆ. ಈ ಯುದ್ಧದಿಂದ ಮಾತ್ರ ಆ ಪ್ರದೇಶದಲ್ಲಿ ಮಾತ್ರವಲ್ಲದೆ, ಜಾಗತಿಕವಾಗಿ ಶಾಂತಿ, ಭದ್ರತೆ ಮತ್ತು ಆರ್ಥಿಕ ಸ್ಥಿರತೆಗೂ ಅಪಾಯ ಉಂಟಾಗಿದೆ.
ಯುದ್ಧದಲ್ಲಿ ಶೇಕಡಾವಾರು ಜನರು ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ ಮತ್ತು ಸಾವಿರಾರು ಜನರು ನಿರಾಶ್ರಿತರಾಗಿ ಪರದಾಡುತ್ತಿದ್ದಾರೆ. ಹಾಸ್ಪಿಟಲ್, ಶಾಲೆಗಳು ಮತ್ತು ನಾಗರಿಕ ಸೌಲಭ್ಯಗಳು ಧ್ವಂಸವಾಗುತ್ತಿವೆ. ಇಂತಹ ಹಿಂಸಾತ್ಮಕ ಕೃತ್ಯಗಳು ಯಾವ ಕಾರಣಕ್ಕೂ ಸಮರ್ಥನೀಯವಲ್ಲ.ಯುದ್ಧವು ಯಾವುದೇ ಸಮಸ್ಯೆಗೆ ಶಾಶ್ವತ ಪರಿಹಾರವಲ್ಲ. ಮಾತುಕತೆ, ಸಂವಾದ ಮತ್ತು ಪರಸ್ಪರ ಗೌರವವೇ ಶಾಶ್ವತ ಶಾಂತಿಯ ಮಾರ್ಗವಾಗಿದೆ. ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ಫಾ. ಸುನಿಲ್ ಐಸಾಕ್ ತಿಳಿಸಿದರು. ಈ ಸಂಕಟದ ಸಂದರ್ಭದಲ್ಲಿ ನಾವು ಎರಡೂ ರಾಷ್ಟ್ರಗಳ ಜನತೆಗೆ ಮಾನವೀಯ ಸಹಾಯ ನೀಡುವಂತೆ ಜಾಗತಿಕ ಸಮುದಾಯವನ್ನು ವಿನಂತಿಸುತ್ತೇವೆ.

Related posts

ಮಂಗಳೂರು-ಉಡುಪಿ ಲೋಕಾಯುಕ್ತ ಪೊಲೀಸ್ ಅಧೀಕ್ಷಕರಾಗಿ ಕುಮಾರಚಂದ್ರ ಬೆಳ್ತಂಗಡಿ ನಿಯೋಜನೆ

Suddi Udaya

ಮುಂಡಾಜೆ ಪ.ಪೂ. ಕಾಲೇಜಿನಲ್ಲಿ ಕಾನೂನು ಮಾಹಿತಿ ಕಾರ್ಯಾಗಾರ

Suddi Udaya

ಕೋಟ್ಯಾನ್ ಫ್ರೆಂಡ್ಸ್ ವಾಟ್ಸಾಪ್ ಗ್ರೂಪಿನಿಂದ ಎರಡನೇ ಸೇವಾ ಯೋಜನೆ ಹಸ್ತಾಂತರ

Suddi Udaya

ಬೆಳ್ತಂಗಡಿ ವಾಣಿ ಕಾಲೇಜಿನಲ್ಲಿ ಕಾನೂನು ಮಾಹಿತಿ ಶಿಬಿರ

Suddi Udaya

ರಾಜ್ಯಮಟ್ಟದ ಭಾಷಣ ಸ್ಪರ್ಧೆ : ಉಜಿರೆ ಎಸ್. ಡಿ. ಎಂ. ಬಿ.ಎಡ್. ಕಾಲೇಜಿನ ಬಿ.ಇಡಿ. ಪ್ರಶಿಕ್ಷಣಾರ್ಥಿ ವಿನಿತ್ ಲ್ಯಾನ್ಸ್‌ನ್ ಸಿಕ್ವೇರಾ ಪ್ರಥಮ ಸ್ಥಾನ

Suddi Udaya

ವಿಧಾನಪರಿಷತ್ತು ಉಪಚುನಾವಣೆ: ಬಿಜೆಪಿ ಅಭ್ಯರ್ಥಿಯಾಗಿ ಕಿಶೋರ್ ಕುಮಾರ್ ಪುತ್ತೂರು

Suddi Udaya
error: Content is protected !!