25.8 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಜಿಲ್ಲಾ ಅಲ್ಪಸಂಖ್ಯಾತ ಘಟಕದ ಮುಸ್ಲಿಮ್ ಮುಖಂಡರಿಂದ ಶಾಹುಲ್ ಹಮೀದ್ ಕೆ.ಕೆ. ನೇತೃತ್ವದಲ್ಲಿ ಸಚಿವ ಝಮೀರ್ ಅಹ್ಮದ್ ಭೇಟಿ

ಬೆಳ್ತಂಗಡಿ :ಬೆಂಗಳೂರಿನಲ್ಲಿ ಸಚಿವರಾದ ಝಮೀರ್ ಅಹ್ಮದ್ ಖಾನ್,ವಿಧಾನ ಪರಿಷತ್ ಸದಸ್ಯರೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಾದ ನಸೀರ್ ಅಹ್ಮದ್, ವಿಧಾನ ಪರಿಷತ್ ಸದಸ್ಯ,ಕೆ.ಪಿ.ಸಿ.ಸಿ ರಾಜ್ಯ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಬ್ದುಲ್ ಜಬ್ಬಾರ್ ರವರನ್ನು ದ.ಕ ಜಿಲ್ಲೆಯ ಅಲ್ಪಸಂಖ್ಯಾತ ಘಟಕದ ಮುಸ್ಲಿಮ್ ಮುಖಂಡರು ಶಾಹುಲ್ ಹಮೀದ್ ಕೆ.ಕೆ. ನೇತೃತ್ವದಲ್ಲಿ ಭೇಟಿ ಮಾಡಿ ಹಲವು ಬೇಡಿಕೆ ಸಲ್ಲಿಸಿ ಮಾತುಕತೆ ನಡೆಸಿದರು.

ಶಾಸಕ ಯಾಸಿರ್ ಪಠಾಣ್ ವಿದಾನ ಪರಿಷತ್ ಸದಸ್ಯೆ ಬಲ್ಕೀಶ್ ಬಾನು ಉಪಸ್ಥಿತರಿದ್ದರು. ಜಿಲ್ಲೆಯಲ್ಲಿ ಕಳೆದ ಕೆಲವು ತಿಂಗಳಿನಿಂದ ನಡೆದ ಘಟನೆಗಳ ಬಗ್ಗೆ ಸಚಿವರಿಗೆ ಮಾಹಿತಿ ನೀಡಿದರು.
ಇತ್ತೀಚೆಗೆ ಕೋಮು ವೈಷಮ್ಯದಿಂದ ಕೊಲೆಯಾದ ಅಮಾಯಕ ಕೊಳತ್ತಮಜಲು ಅಬ್ದುಲ್ ರಹಿಮಾನ್ ಕುಟುಂಬಕ್ಕೆ ಮತ್ತು ಅಶ್ರಫ್ ಕುಟುಂಬಕ್ಕೆ ಸರಕಾರದಿಂದ ಸೂಕ್ತ ಪರಿಹಾರ ದೊರಕಿಸಿಕೊಡುವಂತೆ ಮನವಿ ಸಲ್ಲಿಸಿದರು.ಹಾಗೂ ಈ ಕೊಲೆಯ ಹಿಂದಿರುವ ನೈಜ ಆರೋಪಿಗಳನ್ನು UAPA ಕಾನೂನಿನಡಿ ಬಂಧಿಸಬೇಕು.
ದಕ್ಷಿಣ ಕನ್ನಡ ಜಿಲ್ಲೆಗೆ ಬೇಟಿ ನೀಡಿ ಕೊಳತ್ತಮಜಲು ಅಬ್ದುಲ್ ರಹಿಮಾನ್ ಮನೆಗೆ ಬೇಟಿ ಮಾಡಬೇಕು.ಹಾಗೂ ಜಿಲ್ಲೆಯಲ್ಲಿ ಅಲ್ಪಸಂಖ್ಯಾತರಿಗೆ ದೈರ್ಯ ತುಂಬಲು ಮತ್ತು ಶಾಂತಿ ನೆಲೆಸಲು ಶಾಂತಿ ಸಭೆ ನಡೆಸಬೇಕೆಂದು ಮನವಿ ಸಲ್ಲಿಸಿದರು. ಜಿಲ್ಲೆಯ ಧಾರ್ಮಿಕ ಕೇಂದ್ರಗಳಿಗೆ ಮತ್ತು ಅಲ್ಪಸಂಖ್ಯಾತರ ಮೂಲಭೂತ ಸೌಕರ್ಯಗಳಿಗೆ ಸೂಕ್ತ ಅನುದಾನ ನೀಡುವಂತೆ ಬೇಡಿಕೆ ಸಲ್ಲಿಸಿದರು.

ನಿಯೋಗದಲ್ಲಿ ದ.ಕ ಜಿಲ್ಲಾ ಕಾಂಗ್ರೆಸ್ ಅಲ್ಪ ಸಂಖ್ಯಾತ ಘಟಕದ ಕೋಶಾಧಿಕಾರಿಯಾದ ಮೊಹಮ್ಮದ್ ಬಪ್ಪಳಿಗೆ, ದಕ್ಷಿಣ ಕನ್ನಡ ಮುಸ್ಲಿಮ್ ಜನಪ್ರತಿನಿಧಿಗಳ ಒಕ್ಕೂಟದ ಅಧ್ಯಕ್ಷ ಸಿರಾಜ್ ಬಜ್ಪೆ, ಮೂಡಾ ಸದಸ್ಯರಾದ ಜಲೀಲ್,ಕೆ.ಪಿ ಸಿ.ಸಿ ಅಲ್ಪಸಂಖ್ಯಾತ ಘಟಕದ ಕಾರ್ಯದರ್ಶಿ ಶಮೀರ್ ಕಾಟಿಪಳ್ಳ, ಮುಸ್ಲಿಮ್ ಐಕ್ಯತಾ ವೇದಿಕೆಯ ಅಧ್ಯಕ್ಷ ಅಶ್ರಫ್ ಬದ್ರಿಯಾ, ದ.ಕ.ಜಿಲ್ಲಾ ಅಲ್ಪಸಂಖ್ಯಾತ ಘಟಕದ ಉಪಾದ್ಯಕ್ಷ ಅಬೂಬಕ್ಕರ್ ಐಡಿಯಲ್, ಸಂಘಟನಾ ಕಾರ್ಯದರ್ಶಿ ಇಬ್ರಾಹಿಂ ಶಾಯಿರ್ ಅಬ್ಬಾಸ್, ದ.ಕ.ಜಿಲ್ಲಾಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿಯ ನಾಮನಿರ್ದೇಶಿತ ಸದಸ್ಯರಾದ ಅಬ್ದುಲ್ ಕರೀಮ್ ಗೇರುಕಟ್ಟೆ,ದ.ಕ ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರದಾನ ಕಾರ್ಯದರ್ಶಿ ಹಬೀಬ್ ಕನ್ನೂರು, ಬೆಳ್ತಂಗಡಿ ತಾಲೂಕು ಅಕ್ರಮ ಸಕ್ರಮ ಸಮಿತಿಯ ಸದಸ್ಯ ಅಯ್ಯೂಬ್ ಡಿ.ಕೆ.ಕರಾಯ, ದ ಕ ಜಿಲ್ಲಾ ವಕ್ಫ್ ಸಲಹಾ ಸಮಿತಿ ಸದಸ್ಯರಾದ ಅಬೂಬಕ್ಕರ್ ಸಿದ್ದೀಕ್ ಜೆ. ಎಚ್.,ಜಲೀಲ್ ಕೃಷ್ಣಾಪುರ, ಕೆ.ಪಿ. ಉಸ್ಮಾನ್ ಕಾಜೂರು, ಸುಲೈಮಾನ್ ಕರಾಯ ನಿಯೋಗದಲ್ಲಿದ್ದರು.

Related posts

ನೈನಾಡಿನಲ್ಲಿ ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮ

Suddi Udaya

ಬೆಳ್ತಂಗಡಿ : ರಸ್ತೆಯಲ್ಲಿ ಧೂಳೋ ಧೂಳ್ ಪ್ರಯಾಣಿಕರಿಗೆ ಸಂಕಟ

Suddi Udaya

ಡಾ| ಡಿ.ವೀರೇಂದ್ರ ಹೆಗ್ಗಡೆಯವರಿಗೆ ಕೊಕ್ಕಡ ನಗರ ಭಜನಾ ಸಪ್ತಾಹದ ಅಂಗವಾಗಿ ಪಿಲಿ ನಲಿಕೆ -2025 ರ ಆಮಂತ್ರಣ ಪತ್ರಿಕೆ ನೀಡಿ, ಆಹ್ವಾನ

Suddi Udaya

ಸುಪ್ರೀಂ ಕೋರ್ಟ್ ಹಿರಿಯ ವಕೀಲರಾಗಿ ಶೇಖರ್ ಗೌಡ ದೇವಸ ಸವಣಾಲು ನೇಮಕ

Suddi Udaya

ವೇಣೂರು: ಸುದೇರ್ದು ನಿವಾಸಿ ಸುರೇಶ ಮೂಲ್ಯ ನಿಧನ

Suddi Udaya

ಹೊಸ್ತೋಟ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆ

Suddi Udaya
error: Content is protected !!