25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಕುದುರೆಮುಖ: ಟ್ರೆಕ್ಕಿಂಗ್ ಗೈಡ್ ತರಬೇತಿ

ಬೆಳ್ತಂಗಡಿ: ಕಾರ್ಕಳದ ಕುದುರೆಮುಖ ವನ್ಯಜೀವಿ ವಿಭಾಗದಿಂದ ಟ್ರೆಕ್ಕಿಂಗ್ ಗೈಡ್ ತರಬೇತಿ ಕಾರ್ಯಕ್ರಮ ಜೂ.17 ಮತ್ತು 18 ರಂದು ಕುದುರೆಮುಖ ಪದ್ಮಾವತಿ ದೇವಸ್ಥಾನದ ಹಾಲ್ ನಲ್ಲಿ ನಡೆಯಿತು.

ಗೈಡ್ ಗಳ ಸಂವಹನ ಕೌಶಲ್ಯ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸುವುದು ತರಬೇತಿಯು ಮುಖ್ಯ ಉದ್ದೇಶವಾಗಿತ್ತು. ತರಬೇತಿಯಲ್ಲಿ ಕುದುರೆಮುಖದ ಇತಿಹಾಸ ಮತ್ತು ಪ್ರಾಮುಖ್ಯತೆಯನ್ನು ವಿವರಿಸುವ ಕೌಶಲ್ಯ ಅಭಿವೃದ್ಧಿ ಪಡಿಸಲಾಯಿತು. ತರಬೇತಿ ಕಾರ್ಯಾಗಾರಕ್ಕೆ ಹಾಜರಾದ ಗೈಡ್ ಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು.

ಬಂಡೀಪುರದ ಸಂಪನ್ಮೂಲ ವ್ಯಕ್ತಿಯಾಗಿ ರೋನಿತ್ ನಂಜಪ್ಪ ಮಾಹಿತಿ ನೀಡಿದರು. ಟ್ರೆಕ್ಕಿಂಗ್ ಗೈಡ್ ಗಳ ಸಂವಹನ ಕೌಶಲ್ಯ ಹಾಗೂ ರಾಷ್ಟ್ರೀಯ ಉದ್ಯಮನದ ಕುದುರೆಮುಖದ ಪ್ರಾಮುಖ್ಯತೆಯನ್ನು ತಿಳಿಸಲಾಯಿತು. ಬಳಿಕ ಪ್ರಮಾಣ ಪತ್ರ ನೀಡಲಾಯಿತು. ಜೂ. 24 25 ರಂದು ಟ್ರೆಕ್ಕಿಂಗ್ ಗೈಡ್ ಗಳ ತರಬೇತಿ ಕಾರ್ಯ ನಡೆಯಲಿದೆ.

ಈ ಸಂದರ್ಭದಲ್ಲಿ ಅರಣ್ಯ ಉಪ ಸಂರಕ್ಷಣಾಧಿಕಾರಿ ಶಿವರಾಂ ಬಾಬು , ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸತೀಶ್ ಎನ್., , ಬೆಳ್ತಂಗಡಿ ವನ್ಯಜೀವಿ ವಲಯದ ವಲಯ ಅರಣ್ಯಾಧಿಕಾರಿ ವಿ. ಶರ್ಮಿಷ್ಮಾ, ಕುದುರೆಮುಖ ವನ್ಯಜೀವಿ ವಲಯದ ವಲಯ ಅರಣ್ಯಾಧಿಕಾರಿ ಚೇತನ್ ಕುಮಾರ್ ಮತ್ತು ಕಾರ್ಕಳ ವನ್ಯಜೀವಿ ವಲಯದ ವಲಯ ಅರಣ್ಯಾಧಿಕಾರಿ ಶಶಿಧರ್ ಪಾಟೀಲ್ ಉಪಸ್ಥಿತರಿದ್ದರು.

Related posts

ಎಡೆಬಿಡದೆ ಸುರಿಯುತ್ತಿರುವ ಭಾರಿ ಮಳೆಗೆ ಸುಲ್ಕೇರಿಯಲ್ಲಿ ಮನೆಯ ಮೇಲ್ಚಾವಣಿ ಕುಸಿತ: ಶಾಸಕ ಹರೀಶ್ ಪೂಂಜ ಹಾಗೂ ಅಧಿಕಾರಿಗಳ ಭೇಟಿ, ಶೀಘ್ರ ಕ್ರಮಕ್ಕೆ ಸೂಚನೆ

Suddi Udaya

ಬೆಳ್ತಂಗಡಿ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಉಪನ್ಯಾಸಮಾಲೆ-5 ಕಾರ್ಯಕ್ರಮ

Suddi Udaya

ಮಂಗಳೂರು ಮಾಂಡೋವಿ ಮೋಟಾರ್ಸ್ ಉದ್ಯೋಗಿ, ಬೆಳ್ತಂಗಡಿ ತಾಲೂಕಿನ ಮುಂಡೂರು ನಿವಾಸಿ ಬೈಕ್ ಅಪಘಾತದಲ್ಲಿ ಮೃತ್ಯು

Suddi Udaya

ಮಾ.7: ಡಿಪಿ ಸ್ಫೋರ್ಟ್ಸ್ ಕ್ಲಬ್‌ ಬೆಳಾಲು ಇದರ ಆಶ್ರಯದಲ್ಲಿ ತಾಲೂಕು ಮಟ್ಟದ ಹೊನಲು ಬೆಳಕಿನ ಪುರುಷರ ವಲಯ ಮಟ್ಟದ ಹಾಗೂ ಲೀಗ್‌ ಮಾದರಿಯ ವಾಲಿಬಾಲ್ ಪಂದ್ಯಾಟ

Suddi Udaya

ಮುಗೇರಡ್ಕ ದೈವಗಳ ಸೇವಾ ಸಮಿತಿಯಿಂದ ಮೊಗ್ರು ಶಾಲೆಗೆ ವಿದ್ಯುತ್ ಚಾಲಿತ ನೀರು ಶುದ್ದಿಕರಣ ಯಂತ್ರ ಕೊಡುಗೆ

Suddi Udaya

ಧರ್ಮಸ್ಥಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೇತೃತ್ವದಲ್ಲಿ ಹಾಗೂ ಸಂಘದ ಸದಸ್ಯರ ಸಹಕಾರದಿಂದ ಪುದುವೆಟ್ಟು ಬಾಯಿತ್ತ್ಯಾರು ಎಂಬಲ್ಲಿ ನಿರ್ಮಿಸಿದ ನೂತನ ಗೃಹ ‘ಉನ್ನತಿ ನಿಲಯ ’ ಇದರ ಹಸ್ತಾಂತರ ಕಾರ್ಯಕ್ರಮ

Suddi Udaya
error: Content is protected !!