25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿ

ಯಕ್ಷಧ್ರುವ ಯಕ್ಷ ಶಿಕ್ಷಣ ನಾಟ್ಯಾಭ್ಯಾಸ

ನಿಡ್ಲೆ:ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ.) ಮಂಗಳೂರು ವತಿಯಿಂದ ನಡೆಯುವ 2025-26 ನೇ ಸಾಲಿನl
ಯಕ್ಷಧ್ರುವ ಯಕ್ಷ ಶಿಕ್ಷಣ ನಾಟ್ಯಾಭ್ಯಾಸ* ಕಾರ್ಯಕ್ರಮವು ಸರ್ಕಾರಿ ಪ್ರೌಢಶಾಲೆ ನಿಡ್ಲೆಯಲ್ಲಿ ಜೂ. 20ರಂದು
ಉದ್ಘಾಟನೆಗೊಂಡಿತು.


ಕಾರ್ಯಕ್ರಮವನ್ನು ಫೌಂಡೇಶನ್ ನ ಕೇಂದ್ರ ಸಮಿತಿಯ ಟ್ರಸ್ಟಿಗಳೂ ಆಗಿರುವ ಸಂಘಟಕರಾದ ಶ್ರೀ ಭುಜಬಲಿ ಬಿ. ಧರ್ಮಸ್ಥಳ ಇವರು ಉದ್ಘಾಟಿಸಿದರು. ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಶ್ರೀಯುತರು ಉತ್ತಮ ಕಲಾವಿದರಾದ ಈಶ್ವರ ಪ್ರಸಾದ್ ಅವರು ಗುರುಗಳಾಗಿ ಸಿಗುತ್ತಿರುವುದು ನಿಮ್ಮ ಭಾಗ್ಯ. ವಿದ್ಯಾಭ್ಯಾಸದ ಜೊತೆಗೆ ಯಕ್ಷಗಾನವನ್ನು ಕಲಿಯಿರಿ ಇದು ನಿಮ್ಮ ಭವಿಷ್ಯಕ್ಕೆ ಪೂರಕ ಎಂದು ಕಿವಿ ಮಾತು ಹೇಳಿದರು. ಪಟ್ಲ ಫೌಂಡೇಶನ್ ಟ್ರಸ್ಟ್ ನ ಕಾರ್ಯ ಚಟುವಟಿಕೆಗಳನ್ನು ತಿಳಿಸಿದರು. ಪಟ್ಲ ಶ್ರೀ ಸತೀಶ್ ಶೆಟ್ಟಿ ಇವರ ಕಾರ್ಯವೈಖರಿಯನ್ನು ಪ್ರಶಂಶಿಸಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಟ್ರಸ್ಟ್ ನ ಬೆಳ್ತಂಗಡಿ ಘಟಕದ ಅಧ್ಯಕ್ಷರಾದ ಶ್ರೀ ಸುರೇಶ್ ಶೆಟ್ಟಿ ಅವರು ಕಳೆದ ಮೂರು ವರ್ಷಗಳಿಂದ ವಿವಿಧ ಶಾಲೆಗಳಲ್ಲಿ ನಡೆಯುತ್ತಿರುವ ಯಕ್ಷನಾಟ್ಯ ಅಭಿಯಾನ ಕಾರ್ಯಕ್ರಮದ ಬಗ್ಗೆ ತಿಳಿಸುತ್ತಾ ಪ್ರಸ್ತುತ ಸಾಲಿನಲ್ಲಿ ನಡೆಯುವ ನಾಟ್ಯ ಅಭಿಯಾನ ಕಾರ್ಯಕ್ರಮದ ಬಗ್ಗೆ ಮತ್ತು ಪಟ್ಲ ಫೌಂಡೇಶನ್ ಟ್ರಸ್ಟ್ ಕಾರ್ಯ ಚಟುವಟಿಕೆಗಳನ್ನು ತಿಳಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಶಾಲಾ ಹಳೆ ವಿದ್ಯಾರ್ಥಿ ಸಂಘದ ಟ್ರಸ್ಟಿಗಳಲ್ಲಿ ಓರ್ವರಾಗಿರುವ ಊರಿನ ಹಿರಿಯರಾದ
ಶ್ರೀ ಮಧುಕರ್ ರಾವ್ ಮಚ್ಚಳೆ ಅವರು ಪಟ್ಲ ಫೌಂಡೇಶನ್ ಟ್ರಸ್ಟ್ ನ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ ಸೂಚಿಸುತ್ತ ಶುಭ ಕೋರಿದರು.. ಯಕ್ಷ ನಾಟ್ಯ ಗುರುಗಳಾದ ಶ್ರೀ ಈಶ್ವರ ಪ್ರಸಾದ್ ಪಿ.ವಿ ಇವರು ಯಕ್ಷಗಾನ ಕಲಿಕೆಯ ಪ್ರಾಮುಖ್ಯತೆಯನ್ನು ವಿದ್ಯಾರ್ಥಿಗಳಿಗೆ ತಿಳಿಸಿ ಕಲಿತ ವಿಷಯಗಳನ್ನು ಅಭ್ಯಾಸ ಮಾಡುತ್ತಾ ಮುಂದುವರೆದರೆ ಭವಿಷ್ಯವಿದೆ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಖ್ಯ ಶಿಕ್ಷಕರಾದ ಶ್ರೀಮತಿ ಶಾಂತ ಶೆಟ್ಟಿ ಇವರು ವಹಿಸಿದ್ದರು. ಶಿಕ್ಷಕಿ ಶ್ರೀಮತಿ ಶೋಲಿ ಮೇಡಂ ನಿರೂಪಿಸಿ ಶಿಕ್ಷಕರಾದ ಶರತ್ ಕುಮಾರ್ ತುಳುಪುಳೆ ವಂದಿಸಿದರು.. ಕಾರ್ಯಕ್ರಮದಲ್ಲಿ ಯಕ್ಷದ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಬೆಳ್ತಂಗಡಿ ಘಟಕದ ಪದಾಧಿಕಾರಿಗಳು ಶಾಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Related posts

ಕುವೆಟ್ಟು ಸ.ಉ.ಹಿ.ಪ್ರಾ. ಶಾಲೆಯ ಬಾಲಕ ಬಾಲಕಿಯರ ನೂತನ ಶೌಚಾಲಯದ ಹಸ್ತಾಂತರ

Suddi Udaya

ತಾಲೂಕು ಮಟ್ಟದ ಕರಾಟೆ ಸ್ಪರ್ಧೆ: ಸೇಕ್ರೆಡ್ ಹಾರ್ಟ್ ಆಂ.ಮಾ. ಶಾಲೆಯ ವಿದ್ಯಾರ್ಥಿನಿ ಜಿಲ್ಲಾ ಮಟ್ಟಕ್ಕೆ ಆಯ್ಕೆ

Suddi Udaya

ಧರ್ಮಸ್ಥಳ ಪ್ರಕರಣ ಎಸ್.ಐ.ಟಿ ತನಿಖೆ ಪೂರ್ಣಗೊಂಡಿಲ್ಲ: ಪ್ರಣವ್ ಮೊಹಂತಿ

Suddi Udaya

ಓಡಿಲ್ನಾಳ : ವ್ಯಕ್ತಿ ನೇಣುಬಿಗಿದು ಆತ್ಮಹತ್ಯೆ

Suddi Udaya

ರೆಖ್ಯ : ಮಳೆಯಿಂದ ಹಾನಿಗೊಳಗಾದ ಸ್ಥಳಕ್ಕೆ ಬಿಜೆಪಿ ಬೆಳ್ತಂಗಡಿ ಮಂಡಲದ ವತಿಯಿಂದ ಭೇಟಿ

Suddi Udaya

ಬೆಳ್ತಂಗಡಿ: ಕುತ್ಯಾರು ರಸ್ತೆಯಲ್ಲಿ ಗಾಳಿ ಮಳೆಗೆ ವಿದ್ಯುತ್ ತಂತಿ ಮೇಲೆ ಬಿದ್ದ ಮರ

Suddi Udaya
error: Content is protected !!