ಅಳದಂಗಡಿ: ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಗಳಿಸಿದ ಬಡಗಕಾರಂದೂರು ನಿವಾಸಿ ಸುಜನ್ ಸಿ. ಭಂಡಾರಿ ರವರಿಗೆ ಅಳದಂಗಡಿ ಶಾಖಾ ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಶಾಖಾ ವ್ಯವಸ್ಥಾಪಕರಾದ ಚಂದ್ರಹಾಸ ಕೇದೆ, ಸಿಬ್ಬಂದಿಗಳಾದ ಸಂಧ್ಯಾ ಹೆಚ್ ಡಿ, ನಿಖಿಲ್ ಕುಮಾರ್, ಸಾದಿಕ್ ಎಂ, ಹೊನ್ನಮ್ಮ, ಪಿಗ್ಮಿ ಸಂಗ್ರಹಕರಾದ ದಿವಾಕರ್ ಭಟ್, ಸರೋಜ, ರಮೇಶ್ ಶಿರ್ಲಾಲು, ನವೋದಯ ಪ್ರೇರಕರಾದ ಸದಾನಂದ ಕುದ್ಯಾಡಿ, ಚಂದ್ರಶೇಖರ ಭಂಡಾರಿ ಉಪಸ್ಥಿತರಿದ್ದರು.











