25.5 C
ಪುತ್ತೂರು, ಬೆಳ್ತಂಗಡಿ
July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ನೂತನವಾಗಿ ನಿರ್ಮಾಣಗೊಂಡ ಸುಸಜ್ಜಿತ ಪ್ರೌಢಶಾಲಾ ಕಟ್ಟಡ “ಸಿಂದೂರ”ಲೋಕಾರ್ಪಣೆ

ಮುಂಡಾಜೆ: ರೋಟರಿ ಕ್ಲಬ್ ಬೆಳ್ತಂಗಡಿಯ ಸಾರಥ್ಯದಲ್ಲಿ ರೋಟರಿ ಕ್ಲಬ್ ಬೆಂಗಳೂರು ಇಂದಿರಾನಗರ, ಕ್ಯಾನ್‌ಫಿನ್ ಹೋಮ್ಸ್ ಲಿ. ಬೆಂಗಳೂರು, ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು, ಮತ್ತಿತರ ದಾನಿಗಳ ನೆರವಿನಿಂದ 1,8000 ಚದರ ಅಡಿಯಲ್ಲಿ ತರಗತಿ ಕೊಠಡಿ ಕಚೇರಿ ಕೊಠಡಿ, ಸಿಬ್ಬಂದಿ ಕೊಠಡಿ, ಕಂಪ್ಯೂಟರ್ ಲ್ಯಾಬ್ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಶೌಚಾಲಯ ಹೀಗೆ ಸುಮಾರು ರೂ 2.25 ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಾಣಗೊಂಡ ಸುಸಜ್ಜಿತ ಪ್ರೌಢಶಾಲಾ ಕಟ್ಟಡ “ಸಿಂದೂರ” ಜೂ.20 ರಂದು ಲೋಕಾರ್ಪಣೆಗೊಂಡಿತ್ತು.

ಸಮಾರಂಭದ ಅಧ್ಯಕ್ಷತೆಯನ್ನು ವಿವೇಕಾಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ ವಹಿಸಿದರು. ಸಿಂಧೂರ ಕಟ್ಟಡದ ಉದ್ಘಾಟನೆಯನ್ನು ರೋಟರಿ ಜಿಲ್ಲೆ ೩೧೮೧ರ ಜಿಲ್ಲಾ ಗವರ್ನರ್ ವಿಕ್ರಂ ದತ್ತ ನೆರವೇರಿಸಿ ಶುಭ ಕೋರಿದರು.

ಮುಖ್ಯ ಅತಿಥಿಗಳಾಗಿ ಮಂಗಳೂರು ಲೋಕಸಭಾ ಸದಸ್ಯರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಸದಸ್ಯ ಕೆ. ಪ್ರತಾಪಸಿಂಹ ನಾಯಕ್, ಮುಂಡಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಗಣೇಶ ಬಂಗೇರ, ಕ್ಯಾನ್‌ಫಿನ್ ಹೋಮ್ಸ್ ಬೆಂಗಳೂರಿನ ಡಿಜಿಎಂ ಪ್ರಶಾಂತ್ ಜೋಶಿ,ಕೆ ಮೋಹನ್ ಕುಮಾರ್, ಲಕ್ಷ್ಮೀ ಇಂಡಸ್ಟ್ರೀಸ್ ಉಜಿರೆ, ಶ್ರೀಧರ ಜಿ. ಭಿಡೆ ಅಧ್ಯಕ್ಷರು ಶತಾಬ್ದಿ ವಿದ್ಯಾಲಯ ಸಮಿತಿ ಮುಂಡಾಜೆ, ರೊ. ಹೆಚ್.ಆರ್. ಕೇಶವ,ಬೆಂಗಳೂರು ಯವ ಉದ್ಯಮಿ ಕಿರಣ್ ಚಂದ್ರ ಪುಷ್ಪಗಿರಿ,ಬೆಳ್ತಂಗಡಿ ರೋಟರಿ ಕ್ಲಬ್ ನಿಕಟಪೂರ್ವಾಧ್ಯಕ್ಷ ಅನಂತ್ ಭಟ್ ಮಚ್ಚಿಮಲೆ, ನಿಕಟಪೂರ್ವ ಜಿಲ್ಲಾ ಗವರ್ನರ್ ರೊ| ಸುಪ್ರಿಯ ಕಂದಾರಿ, ಅಧ್ಯಕ್ಷರು ಬೆಂಗಳೂರು ರೋಟರಿ ಕ್ಲಬ್, ರೊ. ಪೂರನ್ ವರ್ಮ, ಅಧ್ಯಕ್ಷರು ಬೆಳ್ತಂಗಡಿ ರೋಟರಿ ಕ್ಲಬ್,ಡಾ.ಕೃಷ್ಣ ಭಟ್ ಕೊಂಕೋಡಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಬೆಳ್ತಂಗಡಿ ರೋಟರಿ ಕ್ಲಬ್ ಕಾರ್ಯದರ್ಶಿ ಸಂದೇಶ್ ರಾವ್, ಮುಂಡಾಜೆ ವಿವೇಕಾನಂದ ವಿದ್ಯಾಸಂಸ್ಥೆಯ ಅಧ್ಯಕ್ಷ ವಿನಯಚಂದ್ರ, ರೋಟರಿ ಕ್ಲಬ್ ನಿಕಟಪೂರ್ವ ಕಾರ್ಯದರ್ಶಿ ವಿದ್ಯಾ ಕುಮಾರ್ ಕಾಂಚೋಡು,ಮುಂಡಾಜೆ ಅನುದಾನಿತ ಪ್ರೌಢಶಾಲಾ ಸಂಚಾಲಕ ನಾರಾಯಣ ಫಡ್ಕೆ, ನಾರಾಯಣ ಗೌಡ ಪಂಚಶ್ರೀ, ಮುಂಡಾಜೆ ಅನುದಾನಿತ ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ಜಯಂತಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ನೂತನವಾಗಿ ನಿರ್ಮಾಣಗೊಂಡ ಶಾಲೆಗೆ ವಿವಿಧ ರೀತಿಯಲ್ಲಿ ಸಹಕರಿಸಿದ ಮಹನೀಯರನ್ನು ಸನ್ಮಾನಿಸಲಾಯಿತು .

ಮುಂಡಾಜೆ ಅನುದಾನಿತ ಕನ್ನಡ ಮಾಧ್ಯಮ ಪ್ರೌಢಶಾಲಾ ವಿಧ್ಯಾರ್ಥಿಗಳಿಂದ ಸರಸ್ವತಿ ವಂದನೆ ಮಾಡಿದರು. ಬೆಳ್ತಂಗಡಿ ಹಿರಿಯ ನ್ಯಾಯವಾದಿ ಧನಂಜಯ್ ರಾವ್ ಕಾರ್ಯಕ್ರಮ ನಿರೂಪಿಸಿದರು.

Related posts

ವಿಟಿಯುಗೆ 9ನೇ ರ್‍ಯಾಂಕ್ ಗಳಿಸಿದ ಎಸ್‌ಡಿಎಂ ಪಾಲಿಟೆಕ್ನಿಕ್ ಕಾಲೇಜಿನ ಹಳೇ ವಿದ್ಯಾರ್ಥಿನಿಗೆ ಸನ್ಮಾನ

Suddi Udaya

ಬೆಳ್ತಂಗಡಿ: ಸಂತೆಕಟ್ಟೆಯಲ್ಲಿ ಆನ್ ಫಿಟ್ ಮಲ್ಟಿ ಜಿಮ್ ಶುಭಾರಂಭ

Suddi Udaya

ಬೆಳ್ತಂಗಡಿ: ವಾಣಿ ಶಿಕ್ಷಣ ಸಂಸ್ಥೆಯಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ

Suddi Udaya

ಬದನಾಜೆ ಶಾಲಾ ಅಮೃತಮಹೋತ್ಸವ, ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಮಲವಂತಿಗೆ: ಪಾಮಾಜಿ -ಕೊಲ್ಲಿ ರಸ್ತೆಗೆ ಶಾಸಕ ಹರೀಶ್ ಪೂಂಜರಿಂದ ಶಿಲಾನ್ಯಾಸ

Suddi Udaya

ಮುಂಡಾಜೆ ಪ.ಪೂ. ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಾರ್ಷಿಕ ವಿಶೇಷ ಶಿಬಿರ

Suddi Udaya
error: Content is protected !!