Uncategorized

ಉಜಿರೆ ಶ್ರೀ ಧ.ಮಂ. ಪಪೂ ಕಾಲೇಜಿನಲ್ಲಿ ವೀರ ರಾಣಿ ಅಬ್ಬಕ್ಕಳ 500ನೇ ಜನ್ಮ ಜಯಂತಿ ಆಚರಣೆ

ಉಜಿರೆ: ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕರ ಸಂಘ ಮಂಗಳೂರು ವಿಭಾಗ ಹಾಗೂ ಶ್ರೀ ಧ.ಮಂ. ಪದವಿ ಪೂರ್ವ ಕಾಲೇಜಿನ ಜಂಟಿ ಆಶ್ರಯದಲ್ಲಿ ಅಪ್ಪಟ ದೇಶಪ್ರೇಮಿ ಭಾರತದ  ಪ್ರಥಮ ಸ್ವಾತಂತ್ರ್ಯ ಹೋರಾಟಗಾರ್ತಿ ಎಂದೇ ಖ್ಯಾತಿ ಪಡೆದ ಉಳ್ಳಾಲದ ವೀರ ರಾಣಿ ಅಬ್ಬಕ್ಕನ 500ನೇ ಜನ್ಮ ಜಯಂತಿ ಪ್ರಯುಕ್ತ ಹಮ್ಮಿಕೊಳ್ಳಲಾದ 100 ಉಪನ್ಯಾಸಗಳ ಸರಣಿ ಕಾರ್ಯಕ್ರಮದ ಪ್ರಯುಕ್ತ  12ನೆಯ ಸರಣಿಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು,ಬೆಳ್ತಂಗಡಿ ಯ ಸ್ನಾತಕೋತ್ತರ  ವಾಣಿಜ್ಯ ವಿಭಾಗದ ಸಂಯೋಜಕರಾದ ಡಾ.ರವಿ ಎಂ ಎನ್ ಮಾತನಾಡಿ ನಮ್ಮ ನೆಲದ ವೀರರನ್ನು , ಅವರ ತ್ಯಾಗ ಬಲಿದಾನಗಳನ್ನು ನೆನಪಿಸಿಕೊಂಡು ಮುಂದಿನ ಪೀಳಿಗೆಗೂ ಪರಿಚಯಿಸುವುದು ನಮ್ಮ ಕರ್ತವ್ಯ. ಆ ಮೂಲಕ ಯುವಜನತೆಯಲ್ಲಿ ದೇಶಪ್ರೇಮದ ಭಾವನೆಯನ್ನು ಮೂಡಿಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಅರ್ಥಪೂರ್ಣವೆನಿಸಲಿವೆ ಎಂದರು.

ಕಾರ್ಯಕ್ರಮದ ಪ್ರಧಾನ ಭಾಷಣಕಾರರಾದ ಎಸ್.ಡಿ. ಎಂ ಸ್ನಾತಕೋತ್ತರ  ಪದವಿ ಕಾಲೇಜಿನ ನಿಕಟ ಪೂರ್ವ ಪ್ರಾಚಾರ್ಯರಾದ ಡಾ. ಬಿ. ಎ.ಕುಮಾರ ಹೆಗ್ಡೆ ಮಾತನಾಡಿ ಸ್ವಾತಂತ್ರ್ಯದ ಮಹತ್ವವನ್ನು ಸ್ವಾತಂತ್ರ್ಯಕ್ಕಾಗಿ ಹಪಹಪಿಸಿದವರಲ್ಲಿ ತಿಳಿದುಕೊಂಡಾಗ ಅದರ ಪ್ರಾಮುಖ್ಯತೆಯ ಅರಿವು ನಮಗಾಗುತ್ತದೆ. ಸಮರಕಲೆಯಲ್ಲಿ ಪರಿಣತಿ ಪಡೆದು ದೇಶಕ್ಕಾಗಿ ಸರ್ವಸ್ವವನ್ನೂ ತ್ಯಾಗ ಮಾಡಿದ ಮಹಾನ್ ಹೋರಾಟಗಾರ್ತಿ ಉಳ್ಳಾಲದ ರಾಣಿ ಅಬ್ಬಕ್ಕ ಸ್ವಾತಂತ್ರ್ಯ ಹೋರಾಟಗಾರರಿಗೆ ಅಗ್ರಪಂಕ್ತಿಯನ್ನು ಹಾಕಿಕೊಟ್ಟಿದ್ದಾರೆ. ಅಪ್ಪಟ ದೇಶಪ್ರೇಮಿ ಈ ನಾಡಿನ ಸಾಹಸಿ ಹೆಣ್ಣುಮಗಳನ್ನು ಸ್ಮರಿಸುವಲ್ಲಿ  ಇಂತಹ ಕಾರ್ಯಕ್ರಮಗಳು  ಅರ್ಥಪೂರ್ಣ ಎನಿಸುತ್ತವೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಪ್ರಮೋದ್ ಕುಮಾರ್ ಬಿ.ಮಾತನಾಡಿ ಉಲ್ಲಾಲದಂತಹ ಒಂದು ಚಿಕ್ಕ ರಾಜ್ಯವನ್ನಾಳುತ್ತಿದ್ದ ಅಬ್ಬಕ್ಕನ ಖ್ಯಾತಿ ಪೋರ್ಚುಗಲ್ ನ ಇಡೀ ದೇಶದಲ್ಲಿ ಹಬ್ಬಿತ್ತು ಎಂಬುದು ಆಕೆಯ ಸಾಹಸ್ಗಾಥೆಯನ್ನು ಸಾರಿ ಹೇಳುತ್ತದೆ .ಆಕೆಯ ಸರಳತೆ ಹಾಗೂ ತಾಯ್ನಾಡಿನ ಬಗೆಗಿನ ಪ್ರೀತಿಯನ್ನು ಪೋರ್ಚುಗೀಸ್ ಇತಿಹಾಸಗಾರ ಪೆಟ್ರೋ ಡಲ್ಲಾ ವೆಲ್ಲಿ ದಾಖಲಿಸಿದ್ದಾನೆ ಎನ್ನುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಚಾರ ಎಂದರು.

ಕ ರಾ ಎಂ ಎಂ ಎಸ್ ಎಸ್ ನ ಸಂಯೋಜಕ ಡಾ.ಮಾಧವ ಎಂ ಕೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕಿ ದಿವ್ಯಾ ಕುಮಾರಿ ಸ್ವಾಗತಿಸಿ ಡಾ.  ಸಾಜಿದಾ ವಂದಿಸಿದರು.ಕ ರಾ ಎಂ ಎಂ ಎಸ್ ಎಸ್ ಕೋಶಾಧಿಕಾರಿ ಶೃತಿ ಎನ್ ಕಾರ್ಯಕ್ರಮ ನಿರ್ವಹಿಸಿದರು.

Related posts

ಅಳದಂಗಡಿ: ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಸಾಮೂಹಿಕ ವಿಷ್ಣು ಸಹಸ್ರನಾಮ ಪಠಣ

Suddi Udaya

ಬರೆಂಗಾಯ ಭೂತಳಗುಡ್ಡೆ ನಿವಾಸಿ ರವೀಂದ್ರ ರಾವ್ ನಿಧನ

Suddi Udaya

ಕಡಿರುದ್ಯಾವರ ಹೇಡ್ಯ, ಬೊಳ್ಳೂರು ಬೈಲು ಪರಿಸರಗಳಲ್ಲಿಕಾಡಾನೆ ಸಂಚಾರ

Suddi Udaya

ಎಪಿಎಂಸಿ ನಿವೃತ್ತ ಕಾರ್ಯದರ್ಶಿ ವೆಂಕಪ್ಪ ಗೌಡ ಕೈಯಾಡಿ ನಿಧನ

Suddi Udaya

ಬೆಳ್ತಂಗಡಿ ವಿಷ್ಣು ಸೇಲ್ಸ್ ನಲ್ಲಿ ದೀಪಾವಳಿ ಪ್ರಯುಕ್ತ ವಿಶೇಷ ಮಾರಾಟ

Suddi Udaya

ಉಡುಪಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿ ವತಿಯಿಂದ 36ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ

Suddi Udaya
error: Content is protected !!