September 6, 2026
Uncategorized

ಕನ್ಯಾಡಿ ಸರ್ಕಾರಿ ಶಾಲೆಯಲ್ಲಿ ವಿಶ್ವ ಯೋಗ ದಿನ ಆಚರಣೆ

ಧರ್ಮಸ್ಥಳ : ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಕನ್ಯಾಡಿ 2,ಶಾಲೆಯಲ್ಲಿ 11ನೇ ವರ್ಷದ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ” ಒಂದು ಭೂಮಿ,ಒಂದು ಆರೋಗ್ಯ ” ಎಂಬ ಘೋಷವಾಕ್ಯದೊಂದಿಗೆ ಆಚರಿಸಲಾಯಿತು.

ಈ ಕಾರ್ಯಕ್ರಮವನ್ನು ಎಸ್ ಡಿ ಎಂ ಸಿ ಅಧ್ಯಕ್ಷರಾದ ಶ್ರೀಯುತ ಕೆ ನಂದ ಇವರು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು. ಎಸ್ ಡಿ ಎಂ ಪ್ರಕೃತಿ ಚಿಕಿತ್ಸಾಲಯ ಮತ್ತು ಯೋಗ ವಿಜ್ಞಾನ ಮಹಾವಿದ್ಯಾಲಯ ಉಜಿರೆ ಇಲ್ಲಿಯ ಎರಡನೇ ವರ್ಷದ ಬಿ ಎನ್ ವೈ ಎಸ್ (BNYS)ವಿದ್ಯಾರ್ಥಿಗಳಾದ ಕುಮಾರಿ ಪ್ರಾಚ್ಯ ಕೀರ್ತಿ ಮತ್ತು ಕುಮಾರಿ ಸ್ಪೂರ್ತಿ ಕೆ ಎಸ್ ಇವರು ಶಾಲಾ ವಿದ್ಯಾರ್ಥಿಗಳಿಗೆ ಯೋಗವನ್ನು ಹೇಳಿಕೊಡುವ ಮೂಲಕ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಡೆಸಿಕೊಟ್ಟರು.

ಈ ಕಾರ್ಯಕ್ರಮದಲ್ಲಿ ಧರ್ಮಸ್ಥಳ ಗ್ರಾಮ ಪಂಚಾಯತ್ ನ ಅರಿವು ಕೇಂದ್ರದ ಮೇಲ್ವಿಚಾರಕಿ ಶ್ರೀಮತಿ ಮಂಜುಳಾ,ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ಶ್ರೀಮತಿ ಪುಷ್ಪಾ ಎನ್, ಶಾಲಾ ಹಿರಿಯ ವಿದ್ಯಾರ್ಥಿ ಶ್ರೀಯುತ ಸುದರ್ಶನ್ ಕೆ ವಿ,ಶಾಲಾ ಶಿಕ್ಷಕ ವೃಂದದವರು, ಶಾಲೆಯ ಮಕ್ಕಳು ಉಪಸ್ಥಿತರಿದ್ದರು. ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಪುಷ್ಪಾ ಎನ್ ಸ್ವಾಗತಿಸಿ, ವಂದಿಸಿ, ಕಾರ್ಯಕ್ರಮವನ್ನು ನಿರೂಪಿಸಿದರು.ಶಾಲೆಯಲ್ಲಿ ಒಂದು ವಾರ ಆಸಕ್ತ ಮಕ್ಕಳಿಗೆ ಕುಮಾರಿ ಪ್ರಾಚ್ಯ ಕೀರ್ತಿ ಮತ್ತು ಕುಮಾರಿ ಸ್ಪೂರ್ತಿ ಕೆ ಎಸ್ ಇವರು ಯೋಗ ಶಿಬಿರ ನಡೆಸಿಕೊಟ್ಟಿದ್ದರು.

Related posts

ಅ.13-19 : ವಾಣಿ ಪ.ಪೂ. ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವಾರ್ಷಿಕ ವಿಶೇಷ ಶಿಬಿರ

Suddi Udaya

ಬೆಳಾಲು ಶ್ರೀ ಧ.ಮಂ. ಪ್ರೌಢಶಾಲೆಯಲ್ಲಿ ಪರಿಸರ ಕಾಳಜಿಯ ಯಶಸ್ವೀ ಪ್ರಯೋಗಗಳು

Suddi Udaya

ವಿಪರೀತ ಮಳೆಯಿಂದಾಗಿ ಕುಂಟಿನಿ ಹಮ್ಮಬ್ಬ ರವರ ಹೊಟೇಲ್ ನ ಮೇಲ್ಛಾವಣಿ ಕುಸಿತ : ಸೂಕ್ತ ಪರಿಹಾರಕ್ಕಾಗಿ ಎಸ್.ಡಿ.ಪಿಐ ಒತ್ತಾಯ

Suddi Udaya

ಸರ್ಕಾರದ ನಡೆ ಕಾರ್ಯಕರ್ತರ ಕಡೆ ಸಮಾವೇಶ: ಕುಕ್ಕೇಡಿ ನಿಟ್ಟಡೆ ಗ್ರಾಮದ ಕಾರ್ಯಕರ್ತರ ಪೂರ್ವಭಾವಿ ಸಭೆ

Suddi Udaya

ಕಂಚಿಮಾರ್ ಟೈಗರ್ಸ್ ಧರ್ಮಸ್ಥಳ ನೇತೃತ್ವದಲ್ಲಿ ಹುಲಿವೇಷ

Suddi Udaya

ಬೆಳ್ತಂಗಡಿ ಪವರ್ ಆನ್ ಸಂಸ್ಥೆಯಲ್ಲಿ ಶ್ರೀ ಲಕ್ಷ್ಮಿ ಪೂಜೆ ಕೂಪನ್ ಬಿಡುಗಡೆ ಹಬ್ಬದ ಪ್ರಯುಕ್ತ ವಿಶೇಷ ರಿಯಾಯಿತಿ

Suddi Udaya
error: Content is protected !!