September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ದಿನಸಿ‌ ಅಂಗಡಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ, ವೇಣೂರು ಪೊಲೀಸರಿಂದ ದಾಳಿ: ಅಂಗಡಿ ಮಾಲೀಕ‌ನ ವಿರುದ್ದ ಕೇಸು ದಾಖಲು

ವೇಣೂರು:ಅಕ್ರಮವಾಗಿ ದಿನಸಿ ಅಂಗಡಿಯಲ್ಲಿ ಮದ್ಯ ದಾಸ್ತಾನು ಹಾಗೂ ಮಾರಾಟ ಮಾಡುತ್ತಿದ್ದ ಗುಂಡೂರಿ ಅಂಗಡಿ ಮಾಲೀಕನನ್ನು ವೇಣೂರು ಪೊಲೀಸರು ಬಂಧಿಸಿ ಕೇಸು ದಾಖಲಿಸಿಕೊಂಡ ಬಗ್ಗೆ ಜೂ. 20 ರಂದು ವರದಿಯಾಗಿದೆ.

ಪೋಲೀಸರು ಸಿಬ್ಬಂದಿಯವರೊಂದಿಗೆ ಇಲಾಖಾ ವಾಹನದಲ್ಲಿ ಬಜಿರೆ ಎಂಬಲ್ಲಿ ರೌಂಡ್ಸ್‌ ಕರ್ತವ್ಯದಲ್ಲಿರುವಾಗ ಬೆಳ್ತಂಗಡಿ ತಾಲೂಕು ಗುಂಡೂರಿ ಗ್ರಾಮದ ಗುಂಡೂರಿ ಬಳಿ ಇರುವ ದಿನಸಿ ಅಂಗಡಿಯಲ್ಲಿ ಹರೀಶ್‌ ಎಂಬಾತನು ಅಕ್ರಮವಾಗಿ ಮದ್ಯವನ್ನು ದಾಸ್ತಾನು ಇರಿಸಿ ಮಾರಾಟ ಮಾಡುತ್ತಿರುವುದಾಗಿ ದೊರೆತ ಖಚಿತ ಮಾಹಿತಿಯಂತೆ ಪೋಲಿಸರು ಗೆ ದಾಳಿ ನಡೆಸಿ ಅಂಗಡಿಯಲ್ಲಿದ್ದ ಒಂದು ಪ್ಲಾಸ್ಟಿಕ್‌ ಚೀಲದಲ್ಲಿ 90 ML ಸಾಮರ್ಥ್ಯದ 44 ಮದ್ಯ ತುಂಬಿದ ಸ್ಯಾಚೆಟ್‌ಗಳನ್ನು ಅಕ್ರಮವಾಗಿ ದಾಸ್ತಾನು ಇರಿಸಿಕೊಂಡಿರುವುದನ್ನು ಪತ್ತೆ ಹಚ್ಚಿದ್ದಾರೆ.

ಪತ್ತೆ ಹಚ್ಚಲಾದ ಮದ್ಯದ ಒಟ್ಟು ಪ್ರಮಾಣ 3.960 ಲೀಟರ್ ಆಗಿದ್ದು, ಅಂದಾಜು ಮೌಲ್ಯ ರೂ 1760/- ಆಗಿರುತ್ತದೆ. ಈ ಬಗ್ಗೆ ವೇಣೂರು ಪೋಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Related posts

ಸಿದ್ದಕಟ್ಟೆ ಮಹಿಳೆ ಕಳೆದುಕೊಂಡ ಹಣವಿದ್ದ ಬ್ಯಾಗ್ ನ್ನು ಹಿಂತಿರುಗಿಸಿದ ಗರ್ಡಾಡಿ ಯುವಕ ವರುಣ್ ಪೂಜಾರಿ: ಯುವಕನ ಕಾರ್ಯಕ್ಕೆ ಶಾಸಕ ಹರೀಶ್ ಪೂಂಜಾರಿಂದ ಅಭಿನಂದನೆ

Suddi Udaya

ನಾವೂರು: ಮೋನಮ್ಮ ನಿಧನ

Suddi Udaya

ಪಡಂಗಡಿ: ಹಿರಿಯ ನಾಗರಿಕ ಧರ್ಣಪ್ಪ ಶೆಟ್ಟಿ ಯವರಿಂದ ಮತ ಚಲಾವಣೆ

Suddi Udaya

ಕುವೆಟ್ಟು: ಮನೆಗೆ ನುಗ್ಗಿದ್ದ ಕಳ್ಳರು: ನಗದು ಸಹಿತ ರೂ. 3.87 ಲಕ್ಷ ಮೌಲ್ಯದ ಚಿನ್ನಾಭರಣ ಕಳವು

Suddi Udaya

ಸೌತಡ್ಕ ಸೇವಾಧಾಮದಲ್ಲಿ ಗಾಲಿಕುರ್ಚಿ ವಿತರಣಾ ಕಾರ್ಯಕ್ರಮ ಉದ್ಘಾಟನೆ

Suddi Udaya

ವಾಣಿ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘದ ಉದ್ಘಾಟನೆ

Suddi Udaya
error: Content is protected !!