37.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬೆಳ್ತಂಗಡಿ: ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ

ಬೆಳ್ತಂಗಡಿ : ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಳ್ತಂಗಡಿ ಇಲ್ಲಿನ ಯುವ ರೆಡ್ ಕ್ರಾಸ್ ಘಟಕ, ರೋವರ್ ರೇಂಜರ್ಸ್ ಘಟಕ, ಎನ್ ಸಿ ಸಿ ಮತ್ತು ರಾಷ್ಟ್ರೀಯ ಸೇವಾ ಯೋಜನೆ ಘಟಕಗಳ ಸಹಯೋಗದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಸುರೇಶ್ ವಿ ನೆರವೇರಿಸಿ ಉತ್ತಮ ಶರೀರ, ಮನಸ್ಸು ನಿರ್ಮಾಣವಾಗಬೇಕಾದರೆ ಯೋಗ ಅತಿ ಮುಖ್ಯ. ಇಂದಿನ ಒತ್ತಡ ಪ್ರೇರಿತ ಜೀವನಕ್ಕೆ ಯೋಗ ಅತಿ ಅವಶ್ಯಕ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ ಸ್ನಾತಕೋತ್ತರ ವಿಭಾಗದ ಸಂಚಾಲಕರಾದ ಡಾ. ರವಿ ಎಂ ಎನ್ ಇವರು ಯೋಗ ದಿನಾಚರಣೆಯ ಮಹತ್ವವನ್ನು ತಿಳಿಸಿದರು. ಯೋಗ ದಿನಾಚರಣೆಯ ಸಂದೇಶವಾದ ಒಂದು ಭೂಮಿ ಒಂದು ಆರೋಗ್ಯಕ್ಕಾಗಿ ಯೋಗಾಸನ ಎಂಬುದನ್ನು ತಿಳಿಸಿ, ಯೋಗಾಸನದಿಂದ ಮನುಷ್ಯನಲ್ಲಿ ದೇಹ, ಮನಸ್ಸು ಮತ್ತು ಆತ್ಮಗಳ ಸಮತೋಲನವನ್ನು ಕಾಪಾಡಲು ಸಾಧ್ಯ ಎಂದು ತಿಳಿಸಿದರು.

ಕಾಲೇಜಿನ ಎಲ್ಲ ವಿದ್ಯಾರ್ಥಿಗಳಿಗೆ ಯೋಗ ಪ್ರಾತ್ಯಕ್ಷಿಕೆತೆಯನ್ನು ಮಾಡಿದರು. ದ್ವಿತೀಯ ಎಂಕಾಂ ನ ಕುಮಾರಿ ಅನನ್ಯ ಜೈನ್ ಕಾರ್ಯಕ್ರಮ ನಿರ್ವಹಿಸಿದರು. ವೇದಿಕೆಯಲ್ಲಿ ರೇಂಜರ್ ಅಧಿಕಾರಿ ಪ್ರೊ. ರಾಜೇಶ್ವರಿ ಹೆಚ್. ಎಸ್., ಗ್ರಂಥಪಾಲಕರಾದ ಜಗದೀಶ್, ಕನ್ನಡ ಪ್ರಾಧ್ಯಾಪಕರಾದ ಪ್ರೊ. ಸುಧಾರಾಣಿ, ಶ್ರೀಮತಿ ಸುನೀತಾ ಹಾಗೂ ಕಚೇರಿ ಅಧ್ಯಕ್ಷೆ ಶ್ರೀಮತಿ ದಿವ್ಯ ಮೋಹನ್ ಉಪಸ್ಥಿತರಿದ್ದರು. ಕಾಲೇಜಿನ ಉಪನ್ಯಾಸಕರ ಜೊತೆಗೆ ಕಚೇರಿ ಸಿಬ್ಬಂದಿಗಳಾದ ಶ್ರೀಮತಿ ಪ್ರಣಮ್ಯ ಜೈನ್ ಶ್ರೀಮತಿ ಸಂಧ್ಯಾ ಹಾಗೂ ಅರವಿಂದ್ ಯೋಗಾಸನದ ಪ್ರಾತ್ಯಕ್ಷಿತೆಯಲ್ಲಿ ಭಾಗವಹಿಸಿದರು.

Related posts

ಕ್ರಿಶ್ಚಿಯನ್ ಬ್ರದರ್ಸ್ ಕಳೆಂಜ ನೂತನ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ

Suddi Udaya

ಮದ್ದಡ್ಕ ಸಾರ್ವಜನಿಕ ಶ್ರೀ ಗಣೇಶೋತ್ಸವ ಸೇವಾ ಸಮಿತಿಯಿಂದ ಪೂರ್ವ ತಯಾರಿ ಸಭೆ

Suddi Udaya

ಕೊಕ್ಕಡ: ಹಳ್ಳಿಂಗೇರಿ ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಟ್ರಸ್ಟ್ ನ ನವೀಕೃತ ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂದಿರ ಲೋಕಾರ್ಪಣೆ ಹಾಗೂ 38ನೇ ವರ್ಷದ ಮಕರ ಸಂಕ್ರಮಣೋತ್ಸವ; ಧಾರ್ಮಿಕ ಸಭೆ

Suddi Udaya

ದಿಡುಪೆ -ಎಳನೀರು ರಸ್ತೆ ಅಭಿವೃದ್ಧಿ ಬೆಳ್ತಂಗಡಿ- ಮೂಡಿಗೆರೆ ಶಾಸಕರುಗಳಿಂದ ಪರಿಶೀಲನೆ: ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ವನ್ಯಜೀವಿ ವಿಭಾಗದ ಅಧಿಕಾರಿಗಳ ಉಪಸ್ಥಿತಿ

Suddi Udaya

ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಗರ್ಭಕಂಠದ ಕ್ಯಾನ್ಸರ್ ತಡೆಯುವ ಹೆಚ್.ಪಿ.ವಿ ವ್ಯಾಕ್ಷಿನೇಷನ್ ಲಸಿಕಾ ಶಿಬಿರ

Suddi Udaya

ಗೇರುಕಟ್ಟೆ: ಸುಣ್ಣಲಡ್ಡದಲ್ಲಿ ತಡರಾತ್ರಿ ಮನೆಗೆ ನುಗ್ಗಿ ನಗದು ಕಳ್ಳತನ: ಬೆಳ್ತಂಗಡಿ ಪೊಲೀಸರು, ಶ್ವಾನದಳ ಮತ್ತು ಬೆರಳಚ್ಚು ತಜ್ಞರಿಂದ ತನಿಖೆ

Suddi Udaya
error: Content is protected !!