September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬೆಳ್ತಂಗಡಿ ಸರಕಾರಿ ಸಮುದಾಯ ಆಸ್ಪತ್ರೆಗೆ ಆರೋಗ್ಯ ರಕ್ಷಾ ಸಮಿತಿ ಭೇಟಿ: ಡೆಂಗ್ಯೂ ಹೆಚ್ಚಾಗುತ್ತಿರುವ ಬಗ್ಗೆ ಮುಂಜಾಗ್ರತಾ ಕ್ರಮ ಕೈಗೊಳ್ಳಲು ವೈದ್ಯಾಧಿಕಾರಿ ಜೊತೆ ಸಭೆ

ಬೆಳ್ತಂಗಡಿ ತಾಲೂಕು ಸರಕಾರಿ ಸಮುದಾಯ ಆಸ್ಪತ್ರೆಗೆ ತಾಲೂಕು ಆರೋಗ್ಯ ರಕ್ಷಾ ಸಮಿತಿಯವರು ಭೇಟಿ ನೀಡಿದರು.
ವಾರ್ಡ್ ಗಳಿಗೆ ಬೇಟಿ ನೀಡಿ ರೋಗಿಗಳ ಆರೋಗ್ಯ ವಿಚಾರಿಸಿದರು. ರಕ್ತ ಪರೀಕ್ಷಾ ಕೇಂದ್ರ, ಶವಾಗಾರ, ಡಯಾಲಿಸ್ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು.


ವೈದ್ಯಾಧಿಕಾರಿ ಡಾ.ರಮೇಶ್ ರವರನ್ನು ಬೇಟಿ ಮಾಡಿ ತಾಲೂಕಿನಾಧ್ಯಂತ ಹೆಚ್ಚುತ್ತಿರುವ ಡೆಂಗ್ಯೂ ಪ್ರಕರಣ ಹತೋಟಿಗೆ ತರಲು ಮುಂಜಾಗೃತಾ ಕ್ರಮವಹಿಸುವಂತೆ ತಿಳಿಸಿದರು. ತಾಲೂಕಿನಲ್ಲಿ 19 ಡೆಂಗ್ಯೂ ಪ್ರಕರಣ ಪತ್ತೆಯಾಗಿದೆ ಎಂದು ತಿಳಿಸಿದರು. ರೋಗಿಗಳಿಗೆ ನೀಡಲು ಔಷದ ಕೊರತೆಯ ಬಗ್ಗೆ ಮಾಹಿತಿ ಕೇಳಿದಾಗ ಯಾವುದೇ ಕೊರತೆ ಇಲ್ಲ ಹೆಚ್ಚುವರಿಯಾಗಿ ತರಿಸಿದ್ದೇವೆ ಎಂದು ತಿಳಿಸಿದರು.ಇತ್ತೀಚೆಗೆ ಆಸ್ಪತ್ರೆಯಲ್ಲಿ ರೋಗಿಯೊಬ್ಬರನ್ನು ವೈದ್ಯರು ನಿರ್ಲಕ್ಷ್ಯ ವಹಿಸಿದ ಬಗ್ಗೆ ವಿವರಣೆ ಪಡೆದುಕೊಂಡರು.

ಭೇಟಿಯಲ್ಲಿ ಜಿಲ್ಲಾ ಆರೋಗ್ಯ ರಕ್ಷಾ ಸಮಿತಿಯ ಸದಸ್ಯರಾದ ಅಬ್ದುಲ್ ಕರೀಮ್, ಬೆಳ್ತಂಗಡಿ ತಾಲೂಕು ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿಯ ಸದಸ್ಯರಾದ ಸೆಬಾಸ್ಟಿಯನ್ ಪಿ.ಟಿ. ಕಳೆಂಜ, ನವೀನ್ ಗೌಡ ಸವಣಾಲು, ವೀರೇಂದ್ರ ಕುಮಾರ್ ಅಳದಂಗಡಿ, ರಶೀದ್ ಕಕ್ಕಿಂಜೆ, ವೆಂಕಣ್ಣ ಕೊಯ್ಯೂರು, ಸ್ಟೀವನ್ ಮೋನಿಸ್ ನಿಟ್ಟಡೆ, ಶ್ರೀಮತಿ ಸವಿತಾ ಸುಲ್ಕೇರಿ, ಹಾಗೂ ಯುವ ಕಾಂಗ್ರೆಸ್ ನ ವಿನಯ್ ಕುಮಾರ್ ಹಾಜರಿದ್ದರು.

Related posts

ಉಜಿರೆ : ರುಡ್ ಸೆಟ್ ಸಂಸ್ಥೆಯಲ್ಲಿ 78ನೇ ಸ್ವಾತಂತ್ರೋತ್ಸವ ಆಚರಣೆ

Suddi Udaya

ಉಜಿರೆ: ಹೊಳೆಯಂತಾದ ಉಜಿರೆ ಹಳೆಪೇಟೆ ರಸ್ತೆ, ಹಲವೆಡೆ ಅಂಗಡಿಗೆ ನುಗ್ಗಿದ ನೀರು, ಶಾಶ್ವತ ಪರಿಹಾರಕ್ಕೆ ಆಗ್ರಹ

Suddi Udaya

ಬೆಳ್ತಂಗಡಿ ಸ.ಪ್ರ.ದ. ಕಾಲೇಜಿನಲ್ಲಿ ವಾಣಿಜ್ಯ ಸಂಘ ಮತ್ತು ಪ್ಲೇಸ್ಮೆಂಟ್ ಸೆಲ್ ಸಹಯೋಗದಲ್ಲಿ “ಲೈಫ್ ಆನ್ ರಿಗ್” ವಿಶೇಷ ಉಪನ್ಯಾಸ

Suddi Udaya

ಉಜಿರೆ ಬದ್ರಿಯಾ ಜುಮ್ಮಾ ಮಸ್ಜಿದ್ ನಲ್ಲಿ ಸ್ವಾತಂತ್ರ್ಯೋತ್ಸವ ದಿನಾಚರಣೆ

Suddi Udaya

ಮಾ.2: ಭಾರತ್ ಬ್ಯಾಂಕ್ ಮುಂಬೈ ಇದರ ಬೆಳ್ತಂಗಡಿ ಕಚೇರಿ ಆರಂಭ: ಕೇಂದ್ರ ಬ್ಯಾಂಕಿನ ಅಧ್ಯಕ್ಷ-ಉಪಾಧ್ಯಕ್ಷರಿಂದ ಅಧಿಕೃತ ಉದ್ಘಾಟನೆ

Suddi Udaya

ರಾಜ್ಯಮಟ್ಟದ ಸ್ಪೆಲ್ ಬೀ ಸ್ಪರ್ಧೆ: ಹೋಲಿ ರಿಡೀಮರ್ ಆಂ.ಮಾ. ಶಾಲೆಯ ವಿದ್ಯಾರ್ಥಿಗಳು ರಾಷ್ಟ್ರ ಮಟ್ಟಕ್ಕೆ ಆಯ್ಕೆ

Suddi Udaya
error: Content is protected !!