September 6, 2026
ಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಕೊಯ್ಯೂರು ಸರಕಾರಿ ಪ್ರೌಢಶಾಲೆಯಲ್ಲಿ ವಿಶ್ವಯೋಗ ದಿನಾಚರಣೆ

ಕೊಯ್ಯೂರು: ಸರಕಾರಿ ಪ್ರೌಢಶಾಲೆಯಲ್ಲಿ ವಿಶ್ವಯೋಗ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮವನ್ನು ದೀಪಬೆಳಗಿಸುವುದರ ಮೂಲಕ ಶಾಲೆಯ ಹಿರಿಯ ವಿದ್ಯಾರ್ಥಿ ಮತ್ತು ಸಾಪ್ಟ್ ವೇರ್ ಇಂಜೀನೀಯರ್ ಚೇತನ್ ಭಟ್ ಸಾದೂರು ಉದ್ಘಾಟಿಸಿದರು.

ಬಳಿಕ ಮಾತಾಡಿ ಯುವಜನತೆಗೆ ಉದ್ಯಮ ಮತ್ತು ಉದ್ಯೋಗದಲ್ಲಿ ಮಾನಸಿಕ ಸ್ಥಿರತೆಯನ್ನು ಕಾಪಾಡಿಕೊಳ್ಳಲು ಯೋಗ ಬಹಳಷ್ಟು ಅನುಕೂಲವಾಗಿದೆ. ಹಾಗಾಗಿ ವಿದ್ಯಾರ್ಥಿಗಳು ಬಾಲ್ಯದಲ್ಲಿ ಯೋಗದ ಬಗ್ಗೆ ಆಸಕ್ತಿ ವಹಿಸಿಕೊಂಡು ಅಭ್ಯಾಸಿಸಿದರೆ ಮುಂದೆ ತಮ್ಮ ವೃತ್ತಿಜೀವನದಲ್ಲಿ ಖಂಡಿತಾ ಸಹಾಯವಾಗುತ್ತದೆ ಎಂದರು. ಸಂಪನ್ಮೂಲವ್ಯಕ್ತಿಯಾಗಿ ಶ್ರೀ ಧ್ರಮಸ್ಥಳ ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಮಹಾವಿದ್ಯಾಲಯ ಉಜಿರೆ ಇಲ್ಲಿಯ ವಿದ್ಯಾರ್ಥಿ ಡಾ ಶ್ರೀನಿವಾಸ್ ಕೆ , ಆಗಮಿಸಿ ಕರ್ಮಯೋಗ , ಭಕ್ತಿಯೋಗ ಜ್ಞಾನಯೋಗದ ಬಗ್ಗೆ ತಿಳಿಸಿ ಇದನ್ನು ವಿದ್ಯಾರ್ಥಿದೆಶೆಯಲ್ಲಿಯೇ ಅಭ್ಯಾಸಿಸದರೆ ವಿದ್ಯಾರ್ಥಿಯು ಯಶಸಸ್ನ್ನು ಸಾಧಿಸುವುದರೊಂದಿಗೆ ವಿಶೇಷ ಸಾಧನೆಯನ್ನು ಮಾಡುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದರು ಮತ್ತು ಅಷ್ಟಾಂಗ ಯೋಗಗಳ ಅಭ್ಯಾಸವನ್ನು ಮಾಡುವ ಬಗ್ಗೆ ತಿಳಿಸಿಕೊಟ್ಟರು.

ಶ್ರೀ ಧ್ರಮಸ್ಥಳ ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಮಹಾವಿದ್ಯಾಲಯ ಉಜಿರೆ ಇಲ್ಲಿಯ ವಿದ್ಯಾರ್ಥಿ ಡಾ.ಕುಮಾರಿ ಅಭಿಜ್ಞಾ ಮತ್ತು ಡಾ.ಚಂದನ್ ಕಳೆದ ಐದು ದಿನಗಳಿಂದ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಯೋಗಾಸನ ಮತ್ತು ಪ್ರಾಣಯಾಮದ ಬಗ್ಗೆ ತರಭೇತಿ ನೀಡಿರುತ್ತಾರೆ ಮತ್ತು ಈ ದಿನ ವಿದ್ಯಾರ್ಥಿಗಳಿಂದ ಯೋಗಾಸನದ ಪ್ರದರ್ಶನ ನಡಸಿಕೊಟ್ಟರು. ಸ.ಪ.ಪೂ .ಕಾಲೇಜು ಕೊಯ್ಯೂರು ಇಲ್ಲಿಯ ಪ್ರಾಚಾರ್ಯರಾದ ಶ್ರೀ ಮೋಹನ ಗೌಡ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು . ಶಾಲಾ ಮುಖ್ಯ ಶಿಕ್ಷಕರಾದ ಶ್ರೀ ರಾಧಾಕೃಷ್ಣ ತಚ್ಚಮೆ ಅಧ್ಯಕ್ಷತೆ ವಹಸಿದ್ದರು. ಶ್ರೀ ರಾಮ ಚಂದ್ರ ದೊಡಮನಿ ಸ್ವಾಗತಿಸಿದರು. ಶ್ರೀ ಸುಧಾಕರ ಶೆಟ್ಟಿ ವಂದಿಸಿದರು. ಶ್ರೀ ಪ್ರವೀಣ್ ಕುಮಾರ್ ಎಚ್ ನಿರೂಪಿಸಿದರು .ಶ್ರೀಮತಿ ಬೇಬಿ, ಗೀತಾ ಉಡುಪಿ, ದೀಪ್ತಿ ಹೆಗ್ಡೆ, ಶ್ರೀ ಮೋಹಾನಂದ ಸಹಕರಿಸಿದರು.

Related posts

ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ನಡೆದ 4ನೇ ವರ್ಷದ ಆನ್ ಲೈನ್ ರಸಪ್ರಶ್ನೆ ಸ್ಪರ್ಧೆ ವೇಣೂರು ಪ್ರೌಢ ಶಾಲಾ ಇಬ್ಬರು ವಿದ್ಯಾರ್ಥಿಗಳು ರಾಜ್ಯಮಟ್ಟದ ಆನ್ಲೈನ್ ರಸಪ್ರಶ್ನೆಗೆ ಆಯ್ಕೆ

Suddi Udaya

ಎಕ್ಸೆಲ್‌ ಟೆಕ್ನೋ ಸ್ಕೂಲ್‌ಗೆ ಶೇ.100 ಫಲಿತಾಂಶ

Suddi Udaya

ಉಜಿರೆ ಅನುಗ್ರಹ ಆಂಗ್ಲ ಮಾಧ್ಯಮ ಶಾಲೆಗೆ ಶೇ.100 ಫಲಿತಾಂಶ

Suddi Udaya

ಎಸ್‌ಡಿಎಂ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗಾಗಿ ಮೇಳೈಸಿದ ಕೆಸರುಗದ್ದೆ ಕ್ರೀಡಾಕೂಟ

Suddi Udaya

ಉಜಿರೆ ವಲಯ ವಾಲಿಬಾಲ್ ಪಂದ್ಯಾಟ: ಬೆಂದ್ರಾಳ ಸೈಂಟ್ ಸಾವಿಯೋ ಆಂ.ಮಾ. ಶಾಲೆ ಬಾಲಕ- ಬಾಲಕಿಯರ ವಿಭಾಗ ಪ್ರಥಮ

Suddi Udaya

ಬೆಳ್ತಂಗಡಿ ಶ್ರೀ ಧ.ಮಂ. ಆಂ.ಮಾ. ಶಾಲೆಯ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಷ್ಟ್ರೀಯ ಪ್ರಶಸ್ತಿ

Suddi Udaya
error: Content is protected !!