25.7 C
ಪುತ್ತೂರು, ಬೆಳ್ತಂಗಡಿ
March 7, 2026
ಶಾಲಾ ಕಾಲೇಜು

ಕೊಯ್ಯೂರು ಸರ್ಕಾರಿ ಪದವಿಪೂರ್ವ ಕಾಲೇಜು :ಅಂತಾರಾಷ್ಟ್ರೀಯ ಯೋಗ ದಿನಾಚರಣೆ

ಕೊಯ್ಯೂರು
“ಮಾನಸಿಕ ಮತ್ತು ದೈಹಿಕ ದೃಢ ತೆಯನ್ನು ಕಾಯ್ದುಕೊಳ್ಳಲು ಯೋಗ ಅತ್ಯಂತ ಅವಶ್ಯಕವಾದುದು ” ಎಂಬುದಾಗಿ ಕೊಯ್ಯೂರು ಸರ್ಕಾರಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಶ್ರೀ ರಾಧಾಕೃಷ್ಣ ತಚ್ಛಮೆ ಅಭಿಪ್ರಾಯ ಪಟ್ಟರು. ಅವರು ಕೊಯ್ಯೂರು ಸರ್ಕಾರಿ ಪದವಿಪೂರ್ವ ಕಾಲೇಜ್ ನಲ್ಲಿ ಅಂತರಾಷ್ಟ್ರೀಯ ಯೋಗ ದಿನ ದ ಉದ್ಘಾಟನೆಗೈದು ಯೋಗವನ್ನು ವಿದ್ಯಾರ್ಥಿಗಳು ನಿತ್ಯ ಜೀವನ ದಲ್ಲಿ ನಿರಂತರ ವಾಗಿ ನಡೆಸಿದಾಗ ರೋಗಮುಕ್ತ ಸಮಾಜದ ನಿರ್ಮಾಣ ಮಾಡಲು ಸಾಧ್ಯ ವಾಗುತ್ತದೆ ಎಂದರು. ವೇದಿಕೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀ ಪ್ರವೀಣ್ ಕುಮಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಸಂಸ್ಥೆಯ ಪ್ರಾಂಶುಪಾಲರಾದ ಶ್ರೀ ಮೋಹನ ಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.


ಯೋಗ ತರಬೇತುದಾರರಾದ ಎಸ್ ಡಿ ಎಂ ಪ್ರಕೃತಿ ಮತ್ತು ಯೋಗವಿಜ್ಞಾನ ಕಾಲೇಜ್ ನ ಅಭಿಜ್ಞ ವಿ. ಎಂ. ವಿದ್ಯಾರ್ಥಿಗಳಿಗೆ ಯೋಗಾ ಭ್ಯಾಸವನ್ನು ನಡೆಸಿ ಕೊಟ್ಟರು .ಕಾಲೇಜ್ ನ ಎಲ್ಲಾ ವಿದ್ಯಾರ್ಥಿಗಳು ಯೋಗ ಪ್ರಾತ್ಯಕ್ಷಿಕೆಯಲ್ಲಿ ಭಾಗವಹಿಸಿದ್ದರು.
ವಿದ್ಯಾರ್ಥಿಗಳಾದ ವಿನಯ, ವಂಶಿಕ, ಐಶ್ವರ್ಯ, ಚಿರಸ್ವಿ, ಸೌಜನ್ಯ, ಫಾತಿಮತ್ ಸಹಲ, ವಿದ್ಯಾ ಪ್ರಾರ್ಥನೆ ಗೈದರು ಮತ್ತು ಯೋಗಗೀತೆಯನ್ನು ಹಾಡಿದರು. ವಾಣಿಜ್ಯ ಶಾಸ್ತ್ರ ಉಪನ್ಯಾಸಕರಾದ ಶ್ರೀಮತಿ ಭವ್ಯ ಸ್ವಾಗತಿಸಿ, ಶ್ರೀಮತಿ ಪವಿತ್ರ ವಂದಿಸಿದರು. ರಾಜ್ಯ ಶಾಸ್ತ್ರ ಉಪನ್ಯಾಸಕ ಶ್ರೀ ಸಂತೋಷ್ ಕುಮಾರ್ ಸಹಕರಿಸಿದರು.ಇತಿಹಾಸ ಉಪನ್ಯಾಸಕ ಶ್ರೀ ಲಕ್ಷ್ಮಣ ಗೌಡ ಕಾರ್ಯಕ್ರಮ ನಿರ್ವಹಿಸಿದರು.

Related posts

ರಾಷ್ಟ್ರಮಟ್ಟದ ರಸಪ್ರಶ್ನೆ ಸ್ಪರ್ಧೆಗೆ ಉಜಿರೆಯ ಆದಿತ್ಯ ಕೃಷ್ಣ ಕಾರಂತ್ ಆಯ್ಕೆ

Suddi Udaya

ವಾಣಿ ಕಾಲೇಜು: ಎನ್‌ಎಸ್‌ಎಸ್ ನಲ್ಲಿ ತೇಜಸ್ ಅವರಿಗೆ ಬೆಸ್ಟ್ ಪರ್ಫಾರ್ಮರ್ ಅವಾರ್ಡ್

Suddi Udaya

ಉಜಿರೆ : ಶ್ರೀ ಧ. ಮಂ. ಆಂ.ಮಾ. (ರಾಜ್ಯ ಪಠ್ಯಕ್ರಮ) ಶಾಲೆಯಲ್ಲಿ ‘ಆಟಿಡೊಂಜಿ ದಿನ’ ಕಾರ್ಯಕ್ರಮ

Suddi Udaya

ಪಟ್ಟೂರು ಶ್ರೀರಾಮ ವಿದ್ಯಾಸಂಸ್ಥೆಯಲ್ಲಿ ವಿವೇಕಾನಂದ ಜಯಂತಿ

Suddi Udaya

ಉಜಿರೆ ಶ್ರೀ. ಧ.ಮಂ ಆಂಗ್ಲ ಮಾಧ್ಯಮ (ಸಿ.ಬಿ.ಎಸ್‌.ಇ) ಶಾಲಾ ವಿದ್ಯಾರ್ಥಿ ಸಂಸತ್ತಿನ ಉದ್ಘಾಟನೆ

Suddi Udaya

ಮಚ್ಚಿನ ಸರಕಾರಿ ಪ್ರೌಢಶಾಲೆಯು ‘ಹಸಿರು ನೈರ್ಮಲ್ಯ ಅಭ್ಯುದಯ ರಾಜ್ಯಮಟ್ಟದ ಶಾಲಾ ಪ್ರಶಸ್ತಿ’ಗೆ ಆಯ್ಕೆ

Suddi Udaya
error: Content is protected !!