23.5 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿ

ದಲಿತ ಮುಖಂಡ ಚಂದು ಎಲ್ ರವರ ಪ್ರಥಮ ವರ್ಷದ ಪುಣ್ಯ ಸ್ಮರಣಾ ಕಾರ್ಯಕ್ರಮ

ಬೆಳ್ತಂಗಡಿ : ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ(ರಿ) ಇದರ ಸಂಘಟನಾ ಸಂಚಾಲಕರಾಗಿದ್ದ
ಚಂದು ಎಲ್ ರವರ
ಪ್ರಥಮ ವರ್ಷದ ಪುಣ್ಯ ಸ್ಮರಣೆಯು ಜೂ22ರಂದು ಬೆಳ್ತಂಗಡಿಯ
ಶ್ರೀ ನಾರಾಯಣಗುರು ಸಭಾ ಭವನದಲ್ಲಿ ನೆರವೇರಿತು.

ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ(ರಿ) ಇದರ ತಾಲೂಕು ಪ್ರಧಾನ ಸಂಚಾಲಕ ರಮೇಶ್ ಆರ್ ಅಧ್ಯಕ್ಷತೆವಹಿಸಿದ್ದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ(ರಿ) ಇದರ ರಾಜ್ಯ ಸಂಘಟನಾ ಸಂಚಾಲಕರಾಗಿದ್ದ ಮಲ್ಲೇಶ್ ಅಂಬುಗ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಚಂದು ಎಲ್ ಅವರ ಒಡನಾಟದ ದಿನಗಳನ್ನು ಸ್ಮರಿಸಿಕೊಂಡು ಚಂದು ಅವರ ಅಭಿಮಾನಿಗಳಾಗಬೇಡಿ ಅನುಯಾಯಿಗಳಾಗಿ ಎಂದು ತಿಳಿಸಿದರು.
ಮಾಜಿ ಸಂಚಾಲಕ ಕೆ.ನೇಮಿರಾಜ್ ಕಿಲ್ಲೂರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ ದಿ.ಚಂದು ಎಲ್ ಅವರ ಸಂಘಟನಾ ಚತುರತೆ, ನೇರ ನಡೆನುಡಿಯ ನಿಷ್ಠುರ ವ್ಯಕ್ತಿತ್ವದ ಬಗ್ಗೆ ನೆನಪಿಸಿಕೊಂಡು ಅವರ ಸಂಘಟನಾ ಚತುರತೆ ಕಾರ್ಯಕರ್ತರಿಗೆ ಸ್ಫೂರ್ತಿಯಾಗಲಿ ಎಂದು ಆಶಿಸಿದರು.

ಮೈಸೂರು ವಿಭಾಗೀಯ ಸಂಚಾಲಕ ಬಿ.ಕೆ. ವಸಂತ್ ,
ತಾಲೂಕು ದಲಿತ ಮಹಿಳಾ ಒಕ್ಕೂಟದ ಮಾಜಿ ಸಂಚಾಲಕಿ ಕವಿತಾ ಕುಮಾರಿ
ಮಾಜಿ ಸಂಚಾಲಕ ವೆಂಕಣ್ಣ ಕೊಯ್ಯೂರು ಮಾತನಾಡಿ ಒಡನಾಟದ ದಿನಗಳನ್ನು ನೆನಪಿಸಿಕೊಂಡರು.
ಈ ಸಂದರ್ಭ ವೇದಿಕೆಯಲ್ಲಿ ಚಂದು ಎಲ್ ರವರ ಪತ್ನಿ ಅಪ್ಪಿಲತಾ ಉಪಸ್ಥಿತರಿದ್ದರು.

ಮಾಜಿ ಜಿ.ಪಂ ಸದಸ್ಯ , ದಸಂಸ ಮುಖಂಡ ಶೇಖರ್ ಕುಕ್ಕೇಡಿ , ಸಂಜೀವ ಆರ್ , ಚೆನ್ನಕೇಶವ , ಮುಖಂಡರಾದ ಸೇಸಪ್ಪ ನಲಿಕೆ , ನಲಿಕೆ ಸಮಾಜ ಸೇವಾ ಸಂಘದ ಅಧ್ಯಕ್ಷ ಪ್ರಭಾಕರ್ ಶಾಂತಿಕೋಡಿ , ಕೂಸ ಅಳದಂಗಡಿ, ನಾರಾಯಣ ಪುದುವೆಟ್ಟು, ಯುವ ಉದ್ಯಮಿ ಪ್ರಶಾಂತ್ , ಸಾಮಾಜಿಕ ಕಾರ್ಯಕರ್ತ ಶೇಖರ್ ಎಲ್ ಮತ್ತಿತರರು ಇದ್ದರು.
ಮುಖಂಡರಾದ ಶ್ರೀಧರ ಕಳೆಂಜ ಕಾರ್ಯಕ್ರಮ ನಿರೂಪಿಸಿದರು.

Related posts

ಎಸ್.ಐ.ಟಿ ಕಚೇರಿಗೆ ಸುಜಾತ ಭಟ್ ವಿಚಾರಣೆಗೆ ಹಾಜರು

Suddi Udaya

ಗೇರುಕಟ್ಟೆ: ಕೊರಂಜ ಸರಕಾರಿ ಶಾಲಾ ಪೋಷಕರ ಮತ್ತು ಹಿರಿಯ ವಿದ್ಯಾರ್ಥಿಗಳ ಸಭೆ: ಸಮಿತಿ ರಚನೆ

Suddi Udaya

ಸ್ವಾವಲಂಬಿ ಸಾರಥಿ ಯೋಜನೆಯ ಫಲಾನುಭವಿಯಾಗಿ ಆಯ್ಕೆಯಾದ ವಿಜಯ ಕುಮಾರ್ ರವರಿಗೆ ಶಾಸಕ ಹರೀಶ್ ಪೂಂಜರಿಂದ ವಾಹನ ಹಸ್ತಾಂತರ

Suddi Udaya

ಬೆಳ್ತಂಗಡಿ ಮಂಡಲ ಮಹಿಳಾ ಮೋರ್ಚಾದ ವತಿಯಿಂದ ಬೆಳ್ತಂಗಡಿ, ಧರ್ಮಸ್ಥಳ, ಗುರುವಾಯನಕೆರೆಯ ಅಂಗಡಿ ಮುಂಗಟ್ಟುಗಳಿಗೆ ಭೇಟಿ ನೀಡಿ ಮತಯಾಚನೆ

Suddi Udaya

ಉಜಿರೆ ಶ್ರೀ ಕಾಲಭೈರವೇಶ್ವರ ಒಕ್ಕಲಿಗ ಗೌಡರ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ಅರಸಿನಮಕ್ಕಿ ಶಾಖೆಯ ಉದ್ಘಾಟನಾ ಸಮಾರಂಭ: ನಂಬಿಕೆ ಮತ್ತು ವಿಶ್ವಾಸದಿಂದ ಸಹಕಾರಿ ಕ್ಷೇತ್ರ ಬೆಳೆಯುತ್ತದೆ:ಶ್ರೀ ಡಾ.ಧರ್ಮಪಾಲನಾಥ ಸ್ವಾಮೀಜಿ: ಗ್ರಾಮೀಣ ಭಾಗದ ಜನರ ಆರ್ಥಿಕ ಚೈತನ್ಯಕ್ಕಾಗಿ ಸಹಕಾರಿ ಸಂಘ ಸ್ಥಾಪನೆ: ಮಾಜಿ ಸಚಿವ ಗಂಗಾಧರ ಗೌಡ

Suddi Udaya

ದಿ‌.ಎನ್ ಪದ್ಮನಾಭ ಮಾಣಿಂಜರಿಗೆ ಶ್ರೀ ಗುರುದೇವ ಸಹಕಾರಿ ಸಂಘದಿಂದ ನುಡಿನಮನ

Suddi Udaya
error: Content is protected !!