September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಕಣಿಯೂರು ಗ್ರಾಮ ಪಂಚಾಯತ್ ಮುಂದೆ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ

ಕಣಿಯೂರು: ಭಾರತೀಯ ಜನತಾ ಪಾರ್ಟಿ ಕಣಿಯೂರು ಮತ್ತು ಉರುವಾಲು ಶಕ್ತಿ ಕೇಂದ್ರ ದ ವತಿಯಿಂದ ಕರ್ನಾಟಕ ದ ಕಾಂಗ್ರೇಸ್ ಸರಕಾರದ ಜನವಿರೋಧಿ ನೀತಿ ಮತ್ತು ಎಲ್ಲಾ ರೀತಿಯ ಬೆಲೆ ಏರಿಕೆ ವಿರೋಧಿಸಿ ಕಣಿಯೂರು ಗ್ರಾಮ ಪಂಚಾಯತ್ ಮುಂಭಾಗದಲ್ಲಿ ಪ್ರತಿಭಟನೆ ನಡೆಯಿತು.

ಪ್ರತಿಭಟನೆಯಲ್ಲಿ ಸೇರಿದ್ದ ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದರು..

ಪ್ರತಿಭಟನೆಯಲ್ಲಿ ಬಿಜೆಪಿ ಹಿರಿಯ ಮುಖಂಡರಾದ ಶಾರದಾ ಆರ್ ರೈ, ವಿಜಯ ಕುಮಾರ್ ಕಳ್ಳಲಿಕೆ, ಬಿಜೆಪಿ ಕಣಿಯೂರು ಮಹಾಶಕ್ತಿ ಕೇಂದ್ರ ದ ಕಾರ್ಯದರ್ಶಿ ಮಹೇಶ್ ಜೇಂಖ್ಯಾರು, ಕಣಿಯೂರು ಗ್ರಾಮ ಪಂಚಾಯತ್ ಅಧ್ಯಕ್ಷ ಸೀತಾರಾಮ ಮಡಿವಾಳರವರು ಸರ್ಕಾರದ ಜನ ವಿರೋಧಿ ನೀತಿಯ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದರು.

ಪ್ರತಿಭಟನೆ ಬಳಿಕ ಪಿ ಡಿ ಒ ಮೂಲಕ ರಾಜ್ಯ ಪಾಲರಿಗೆ ಮನವಿ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ಬಿಜೆಪಿ ಕಣಿಯೂರು ಶಕ್ತಿ ಕೇಂದ್ರ ಪ್ರಮುಖ್ ಯತೀಶ್ ಶೆಟ್ಟಿ ಪನೆಕ್ಕರ, ಉರುವಾಲು ಶಕ್ತಿ ಕೇಂದ್ರ ಪ್ರಮುಖ್ ಕೃಷ್ಣ ಪ್ರಸಾದ್, ಮಹಿಳಾ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ಅಮಿತಾ ಕುಶಾಲಪ್ಪ ಗೌಡ, ಪದ್ಮುಂಜ ಸಿ ಎ ಬ್ಯಾಂಕ್ ಅಧ್ಯಕ್ಷ ರಕ್ಷಿತ್ ಪನೆಕ್ಕರ, ತಣ್ಣೀರುಪOತ ಸಿ ಎ ಬ್ಯಾಂಕ್ ಉಪಾಧ್ಯಕ್ಷ ಸುನಿಲ್ ಅನಾವು, ಕಣಿಯೋರು ಗ್ರಾಮ ಪಂಚಾಯ್ತ್ ಉಪಾಧ್ಯಕ್ಷೆ ಜಾನಕಿ ಪಿಂಡಿವನ, ಪಂಚಾಯತ್ ಮಾಜಿ ಅಧ್ಯಕ್ಷೆ ಗಾಯತ್ರಿ ಗೌಡ, ಪದ್ಮುಂಜ ಮಿಲ್ಕ್ ಸೊಸೈಟಿ ಅಧ್ಯಕ್ಷ ಪುರುಷೋತ್ತಮ್ ಗೌಡ ಸೇರಿದಂತೆ ಬಿಜೆಪಿ ಬೂತ್ ಸಮಿತಿ ಅಧ್ಯಕ್ಷ, ಕಾರ್ಯದರ್ಶಿ, ಪಂಚಾಯತ್ ಸದಸ್ಯರು ಸಹಕಾರಿ ಸಂಘ ಗಳ ನಿರ್ದೇಶಕರು ಸೇರಿದಂತೆ ಅನೇಕ ಕಾರ್ಯಕರ್ತರು ಪ್ರತಿಭಟನೆ ಯಲ್ಲಿ ಭಾಗವಹಿಸಿದರು.

Related posts

ಕೆಲ್ಲಗುತ್ತು ಶ್ರೀ ಸತ್ಯಸಾರಮುಪ್ಪಣ್ಯ ಮತ್ತು ಸ್ವಾಮಿ ಕೊರಗಜ್ಜ ದೈವದ ವಾರ್ಷಿಕ ನೇಮೋತ್ಸವ

Suddi Udaya

ಕರಾಯ ಸರಕಾರಿ ಪ್ರೌಢಶಾಲೆಯಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆ

Suddi Udaya

ವೇಣೂರು ಶ್ರೀ ಧ.ಮಂ. ಕೈಗಾರಿಕಾ ತರಬೇತಿ ಸಂಸ್ಥೆಯ ಕಿರಿಯ ತರಬೇತಿ ಅಧಿಕಾರಿ ಚಂದ್ರಕುಮಾರ್ ರವರಿಗೆ ಸೇವಾ ನಿವೃತ್ತಿ

Suddi Udaya

ಕೆ‌ಎಂಜೆ ವತಿಯಿಂದ “ಭಾರತದ ಬಹುತ್ವ- ಬಂಧುತ್ವದ” ಬಗ್ಗೆ ಕಾರ್ಯಕ್ರಮ, ಮೀಲಾದ್ ಸಂದೇಶ ಸಭೆ

Suddi Udaya

ಆದಿಚುಂಚನಗಿರಿ ಮಹಾಸಂಸ್ಥಾನ ಶಾಖಾ ಮಠದ ಶ್ರೀ ಡಾ‌.ಶ್ರೀ ಶ್ರೀ ಧರ್ಮಪಾಲನಾಥ ಸ್ವಾಮೀಜಿಯವರು ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ನಿಕಟಪೂರ್ವಾಧ್ಯಕ್ಷ ಚೈತ್ರೇಶ್ ಇಳಂತಿಲರವರ ‘ಅಕ್ಷೋಭ್ಯ’ ನೂತನ ಮನೆಗೆ ಭೇಟಿ

Suddi Udaya

ಬಳಂಜ: ಜನಮಂಗಳ ಕಾರ್ಯಕ್ರದಡಿ ಕಾಮೋಡ್ ಚೇರ್ ವಿತರಣೆ

Suddi Udaya
error: Content is protected !!