22.9 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ವೇಣೂರು: ಧೀಮಹಿ ಸನಾತನ ಪ್ರತಿಷ್ಠಾನದಿಂದ ಯಕ್ಷಗಾನ ಹಿಮ್ಮೇಳ  ತರಗತಿ ಆರಂಭ

ವೇಣೂರು: ವೇಣೂರಿನ ಮಹಾವೀರ ನಗರದಲ್ಲಿ ಇರುವ ಧೀಮಹಿ ಸನಾತನ ಪ್ರತಿಷ್ಠಾನದಿಂದ ನಡೆಸಲ್ಪಡುವ ಯಕ್ಷಗಾನ ಹಿಮ್ಮೇಳ  ತರಗತಿಯ ಉದ್ಘಾಟನೆಯನ್ನು ಮಾತೃಶ್ರೀ ಗೌರಮ್ಮನವರು ದೀಪ ಪ್ರಜ್ವಲಿಸುವ ಮೂಲಕ ಜೂ.22 ರಂದು ನೆರವೇರಿಸಿದರು.

ಧೀಮಹಿ ಸನಾತನ ಪ್ರತಿಷ್ಠಾನದ ಧ್ಯೇಯೋದ್ದೇಶಗಳನ್ನು ಪ್ರಸ್ತಾವಿಕ ನುಡಿಯಲ್ಲಿ ಸಂಚಾಲಕರಾದ ಯಜ್ಞನಾರಾಯಣ ಭಟ್ ವಿವರಿಸಿದರು. ಮುಖ್ಯ ಅತಿಥಿಗಳಾಗಿ ವೇಣೂರು ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಪಂಜಾಲಬೈಲು ಎನ್. ಪುರುಷೋತ್ತಮ ರಾವ್, ಭಾಸ್ಕರ ಪೈ ಹಾಗೂ ವೇಣೂರು ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಪಾಣೂರು ಅಶೋಕ ಅವರು ಶುಭ ಹಾರೈಸಿದರು.


ಯಕ್ಷಗಾನ ತರಗತಿಯ ಗುರುಗಳಾಗಿ ಖ್ಯಾತ ಹಿಮ್ಮೇಳವಾದಕ ಕೊಂಕಣಾಜೆ ಚಂದ್ರಶೇಖರ ಭಟ್ ಅವರು ಬೋಧನಾ ಕ್ರಮದ ಬಗ್ಗೆ ಪರಿಚಯಿಸಿದರು. ರವಿಶಂಕರ ಭಟ್ ಬೆದ್ರಡ್ಕ ವಂದಿಸಿದರು. ಜಗನ್ನಾಥ ದೇವಾಡಿಗ ಹಂದೇವು ಕಾರ್ಯಕ್ರಮ ನಿರೂಪಿಸಿದರು.

ವೇಣೂರು ಸುತ್ತಮುತ್ತಲಿನ ನೂರಕ್ಕೂ ಅಧಿಕ ಯಕ್ಷಭಿಮಾನಿಗಳು ನೆರೆದಿದ್ದರು. ಹಿಮ್ಮೇಳ ಕಲಿಯಲು ಆಸಕ್ತರು ಕೊಂಕಣಾಜೆ ಚಂದ್ರಶೇಖರ ಭಟ್ಟರನ್ನು 91 90081 36127 ಸಂಪರ್ಕಿಸಬಹುದು.

Related posts

ರಾಜ್ಯಮಟ್ಟದ ಯುವಸಂಸತ್ತು ಸ್ಪರ್ಧೆ: ಎಸ್.ಡಿ.ಎಂ. ಪ.ಪೂ ಕಾಲೇಜಿನ ವಿದ್ಯಾರ್ಥಿಗಳಿಗೆ ಪ್ರಶಸ್ತಿ

Suddi Udaya

ಶಿವಕುಮಾರ್ ಕೆ.ಎಸ್. ರವರು ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಯಾಗಿ ಭಡ್ತಿಗೊಂಡು ಮಂಗಳೂರಿಗೆ ವರ್ಗಾವಣೆ, ಬಿಳ್ಕೋಡುಗೆ ಸಮಾರಂಭ

Suddi Udaya

ಬುರುಡೆ ಚಿನ್ನಯ್ಯ ಮತ್ತೆ ಇಂದು ಬೆಳ್ತಂಗಡಿ ಕೋರ್ಟ್ ಗೆ ಹಾಜರು

Suddi Udaya

ಪಶ್ಚಿಮ ಘಟ್ಟದ ಎಲ್ಲ ಅರಣ್ಯ ಒತ್ತುವರಿ ಮತ್ತು ಅನಧಿಕೃತ ಹೋಮ್ ಸ್ಟೇ, ಬಡಾವಣೆ, ರೆಸಾರ್ಟ್ ಗಳನ್ನು ತೆರವುಗೊಳಿಸುವಂತೆ ಅರಣ್ಯ ಸಚಿವರಿಂದ ಖಡಕ್ ಸೂಚನೆ

Suddi Udaya

ಮರ್ಹೂಮ್ ಅಝ್ರಿನ್ ಸಿದ್ದೀಕ್ ಇವರ ಸ್ಮರಣಾರ್ಥ ಬೃಹತ್ ರಕ್ತದಾನ ಶಿಬಿರ

Suddi Udaya

ನಕಲಿ ಸಹಿ ಮಾಡಿ ಅಕ್ಷರ ದಾಸೋಹ ಮತ್ತು ಎಸ್.ಎಸ್.ಎ. ಖಾತೆಯ ಹಣ ಡ್ರಾ; ಮುಖ್ಯ ಶಿಕ್ಷಕಿಯ ವಿರುದ್ಧ ಎಸ್.ಡಿ.ಎಂ.ಸಿ ಅಧ್ಯಕ್ಷೆ ದೂರು: ಪೋಜ೯ರಿ ಸಹಿ ಮಾಡಿ ಶಾಲೆಯ ಖಾತೆಯಿಂದ ಯಾವತ್ತೂ ಹಣವನ್ನು ಡ್ರಾ ಮಾಡಿರುವುದಿಲ್ಲ : ಮುಖ್ಯ ಶಿಕ್ಷಕಿ ಸ್ಪಷ್ಟನೆ

Suddi Udaya
error: Content is protected !!