25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಜೂ. 29 : ಉಜಿರೆಯಲ್ಲಿ ರೈನಾಥನ್ ಸ್ಪರ್ಧೆ, ಸಂತೋಷದಾಯಕ ಮಳೆಗಾಲದ ಓಟ: ಮಾದಕ ವ್ಯವಸನದ ಬಗ್ಗೆ ಜನಜಾಗೃತಿ ಮೂಡಿಸುವ ಉದ್ದೇಶವೇ ರೈನಥಾನ್-2025

ಉಜಿರೆ: ಮಾದಕ ವ್ಯಸನದ ಬಗ್ಗೆ ಜನಜಾಗೃತಿ ಮೂಡಿಸುವ ಸದುದ್ದೇಶವನ್ನು ಉಜಿರೆಯಲ್ಲಿ ಮೊದಲ ಬಾರಿಗೆ ರೈನಾಥನ್ ನಡೆಸಲಾಗುತ್ತಿದ್ದು ಈಗಾಗಲೇ ಸುಮಾರು ಒಂದೂವರೆ ಸಾವಿರಕ್ಕೂ ಹೆಚ್ಚು ಸ್ಪರ್ಧಾಳುಗಳು ಸ್ಪರ್ದೆಗೆ ನೊಂದಾವಣೆ ಮಾಡಿಕೊಂಡಿದ್ದಾರೆ ಎಂದು ರೈನಥಾನ್ ಆಯೋಜನ ಸಮಿತಿ ಅಧ್ಯಕ್ಷ ಪ್ರವೀಣ್ ಗೋರೆ ತಿಳಿಸಿದರು.

ಅವರು ಉಜಿರೆ ವ್ಯಾಯಮ ಜಿಮ್ ಮತ್ತು ಕ್ರಾಸ್ ಪಿಟ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಬೆಳ್ತಂಗಡಿ ರೋಟರಿ ಕ್ಲಬ್ ಕಾರ್ಯದರ್ಶಿ ಸಂದೇಶ್ ರಾವ್ ಮಾತನಾಡಿ ಉತ್ತಮ ಸಮಾಜದ ನಿರ್ಮಾಣದ ಕಡೆಗೆ ರೈನಥಾನ್ ಆಯೋಜಿಸಿದ್ದು,ಉಜಿರೆಯ ಸುತ್ತಮುತ್ತಲಿನ 5 ಗ್ರಾಮಗಳಲ್ಲಿ ಓಟ ನಡೆಯಲಿದೆ. ಮಳೆಯನ್ನು ಅನುಭವಿಸಿ, ಸಂತೋಷಪಡುತ್ತಾ ಓಟ ಮುಂದುವರೆಸುವುದು ಎಂದರು‌.

ವ್ಯಾಯಮ ಫಿಟ್ನೆಸ್ ಮತ್ತು ಕ್ರಾಸ್ ಫಿಟ್ ಉಜಿರೆ ಇದರ ನೇತೃತ್ವದಲ್ಲಿ ಹಲವಾರು ಸಂಘ ಸಂಸ್ಥೆಗಳ ಸಹಕಾರದೊಂದಿಗೆ ರೈನಥಾನ್ ನಡೆಯಲಿದ್ದು ನೊಂದಾವಣೆ ಮಾಡಿದವರಿಗೆ ಮಾತ್ರ ಬಹುಮಾನ ನಿಗದಿಪಡಿಸಲಾಗಿದೆ. ನೊಂದವಣೆ ಮಾಡದೆ ಇರುವವರು ಕೂಡ ಸ್ಪರ್ದೇಯಲ್ಲಿ ಭಾಗವಹಿಸಬಹುದು.ಬೆಳಿಗ್ಗೆ ಕಾರ್ಯಕ್ರಮ ಪ್ರಾರಂಭಗೊಂಡು 11 ಗಂಟೆ ಸುಮಾರಿಗೆ ಮುಕ್ತಾಯಗೊಳ್ಳಿದೆ.

ರೈನಥಾನ್ ನಲ್ಲಿ 16 ವರ್ಷಕ್ಕಿಂತ ವಯೋಮಾನದವರು ಭಾಗವಹಿಸಲು ಮುಕ್ತ ಅವಕಾಶವಿದ್ದು, 50 ವರ್ಷಕ್ಕಿಂತ ಮೇಲ್ಪಟ್ಡವರಿಗೆ ವಿಶೇಷ ಬಹುಮಾನವಿದೆ.

ಪತ್ರಿಕಾಗೋಷ್ಠಿಯಲ್ಲಿ ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕ ಮೋಹನ್ ಕುಮಾರ್, ಉದ್ಯಮಿ ರಾಜೇಶ್ ಪೈ, ವ್ಯಾಯಮ ಫಿಟ್ನೆಸ್ ಮತ್ತು ಕ್ರಾಸ್ ಫಿಟ್ ಉಜಿರೆ ಇದರ ಮಾಲಕ ಶಿಶಿರ್ ರಘುಚಂದ್ರ, ಕಾಶಿ ಪ್ಯಾಲೇಶ್ ದಿ ಓಶಿಯನ್ ಪರ್ಲ್ ಮ್ಯಾನೇಜರ್ ಉದಯ್ ಶೆಟ್ಟಿ, ಅನೂಪ್ ಜೈನ್, ರೋಟರಿ ಕ್ಲಬ್ ನಿಯೋಜಿತ ಅಧ್ಯಕ್ಷ ಪ್ರಕಾಶ್ ಪ್ರಭು, ರಾಜಾರಾಂ ಏಜೆನ್ಸೀಸ್ ಬೆಳ್ತಂಗಡಿ ಇದರ ಮಾಲಕ ರಾಘ್ನೇಶ್,ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಪ್ರಸಾದ್ ಶೆಟ್ಟಿ , ರೈನಥಾನ್ ಸಮಿತಿ ಸದಸ್ಯ ಆದರ್ಶ್ ಕಾರಂತ್ ಉಪಸ್ಥಿತರಿದ್ದರು.

ಹಿರಿಯ ನ್ಯಾಯವಾದಿ ಬಿ‌ಕೆ ಧನಂಜಯ್ ರಾವ್ ಸ್ವಾಗತಿಸಿದರು.

Related posts

ಧರ್ಮಸ್ಥಳ ವಸ್ತು ಸಂಗ್ರಹಾಲಯಕ್ಕೆ ಬರಲಿದೆ ಹಾಯಿದೋಣಿ: ಜೂ.9ರಂದು ಕುಂದಾಪುರದಿಂದ ಮೆರವಣಿಗೆಯ ಮೂಲಕ ಧಮ೯ಸ್ಥಳಕ್ಕೆ

Suddi Udaya

ಮುಂಡಾಜೆ ಸಹಕಾರ ಸಂಘದ ಚಾರ್ಮಾಡಿ ಪೂರ್ಣಾವಧಿ ಶಾಖೆಯ ಉದ್ಘಾಟನೆ ಸಮಾರಂಭ

Suddi Udaya

ಸುಲ್ಕೇರಿ: ಶ್ರೀ ಕ್ಷೇತ್ರ ಧ.ಗ್ರಾ. ಯೋಜನೆ ವತಿಯಿಂದ ಆರೋಗ್ಯ ವಿಮೆಯ ಮಂಜೂರಾತಿ ಪತ್ರ ವಿತರಣೆ

Suddi Udaya

ಪಟ್ರಮೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವಾರ್ಷಿಕ ಜಾತ್ರೆ: ಕಲಶಾಭಿಷೇಕ, ದರ್ಶನ ಬಲಿ

Suddi Udaya

ನಾವೂರು: ಮೋನಮ್ಮ ನಿಧನ

Suddi Udaya

ಜಿಲ್ಲಾ ಚುನಾವಣಾ ಅಧಿಕಾರಿ ಮುಲೈ ಮುಗಿಲನ್ ಎಂಪಿ ರವರಿಂದ ಪ್ರಮಾಣ ಪತ್ರ ಸ್ವೀಕರಿಸಿದ ಬಿಜೆಪಿ ಅಭ್ಯರ್ಥಿ ಕ್ಯಾ| ಬ್ರಿಜೇಶ್ ಚೌಟ

Suddi Udaya
error: Content is protected !!