September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಜೆಸಿಐ ಕೊಕ್ಕಡ ಕಪಿಲ ಘಟಕದ ಆಶ್ರಯದಲ್ಲಿ ಸಿರಿತನದ ಹಾದಿ 2025- ಹಣಕಾಸು ಜಾಗೃತಿ ತರಬೇತಿ ಕಾರ್ಯಕ್ರಮ

ನಿಡ್ಲೆ: ಜೆಸಿಐ ಕೊಕ್ಕಡ ಕಪಿಲ ಘಟಕದ ಆಶ್ರಯದಲ್ಲಿ “ಸಿರಿತನದ ಹಾದಿ 2025” ಎಂಬ ಹೆಸರಿನಲ್ಲಿ ಪ್ರಬುದ್ಧ ಹಣಕಾಸು ಜಾಗೃತಿ ತರಬೇತಿ ಕಾರ್ಯಾಗಾರವು ಆನಂದ ರೆಸಾರ್ಟ್, ನಿಡ್ಲೆ ನಲ್ಲಿ ವಿಜೃಂಭಣೆಯಿಂದ ಜರುಗಿತು.

“ಹಣ ಸಂಪಾದನೆ ಎಲ್ಲರಿಗೂ ಸಾಧ್ಯ, ಆದರೆ ಅದನ್ನು ಬದ್ಧತೆಯಿಂದ ಉಳಿತಾಯ ಮಾಡುವುದು ಜಾಣ್ಮೆಯ ಕೆಲಸ” ಎಂಬ ಥೀಮ್‌ನೊಂದಿಗೆ ನಡೆದ ಈ ತರಬೇತಿಯಲ್ಲಿ ಹಣಕಾಸು ನಿಷ್ಠೆ, ಹೂಡಿಕೆ ಮಾರ್ಗಗಳು, ಷೇರು ಮಾರುಕಟ್ಟೆ ಸಂಭಾವ್ಯತೆ ಮತ್ತು ಆರ್ಥಿಕ ಶಿಸ್ತಿನ ಮಹತ್ವವನ್ನು ವಿವರಿಸಲಾಯಿತು.

ಕಾರ್ಯಕ್ರಮವನ್ನು ವಲಯ ನಿರ್ದೇಶಕರಾದ JFP ಅಜಿತ್ ಕುಮಾರ್ ರೈ ಉದ್ಘಾಟಿಸಿ ಮಾತನಾಡಿ “ಆರ್ಥಿಕ ಪ್ರಜ್ಞೆ ಪ್ರತಿಯೊಬ್ಬ ವ್ಯಕ್ತಿಯು ಜೀವನದಲ್ಲಿ ಬೇಕಾದ ಸಾಮರ್ಥ್ಯವಾಗಬೇಕು” ಎಂದು ಹುರಿದುಂಬಿಸಿದರು.
ಮುಖ್ಯ ತರಬೇತುದಾರರಾಗಿ ನಾಗರಾಜ್ ಜೆ.ಎಸ್. (Stock Market Advisor, ಪುತ್ತೂರು) ಮತ್ತು ಸಹ-ತರಬೇತುದಾರರಾಗಿ JFP ಜಸ್ವಂತ್ ಪಿರೇರಾ (Investment Consultant, ಕೊಕ್ಕಡ) ಮಾಹಿತಿ ಸಮೃದ್ಧ ಉಪನ್ಯಾಸ ನೀಡಿದರು. ಜೆಸಿ ಪ್ರಿಯಾ ಜೆ ಅಮೀನ್ ಉದ್ಘಾಟಕರ ಪರಿಚಯ ವಾಚಿಸಿದರು. ಜೆಸಿ ರಿತೇಶ್ ಪ್ರಸ್ತಾವಿಕ ಮಾತನ್ನಾಡಿದರು. ತರಬೇತುದಾರರ ಪರಿಚಯವನ್ನು ಜೆಜೆಸಿ ಅಧ್ಯಕ್ಷ ಶ್ರವಣ ನೀಡಿದ್ದು, ಸಹತರಬೇತುದಾರರ ಪರಿಚಯವನ್ನು ಜೆಸಿ ಪ್ರಜ್ವಲ್ ಲೋಬೋ ಮಾಡಿದರು. ಮಾರ್ಗದರ್ಶಕರಾದ HGF ಜೋಸೆಫ್ ಪಿರೇರಾ ಮತ್ತು HGF ಡೆಸೋಜಾ ತರಬೇತಿ ಕುರಿತು ಅನಿಸಿಕೆ ಹೇಳಿದರು. ಜೆಸಿ ವಿಕ್ಟರ್, ಜೆಸಿ ದೀಪಾ, ಜೆಸಿ ಜೇನಿವ, JC ಮನೋರ, ಶ್ರೀಮತಿ ಸುಜಾ, ಶ್ರೀಮತಿ ಶುಭ್ರ ಸವಿನ್, ಮನಸ್ವಿ, ಆದ್ಯ, ಉಪಸ್ಥಿತರಿದ್ದರು.

ಕಾರ್ಯಕ್ರಮದ ಯಶಸ್ಸಿಗೆ ನಿಕಟಪೂರ್ವ ಅಧ್ಯಕ್ಷ JC ಸಂತೋಷ್ ಜೈನ್, ಮಾರ್ಗದರ್ಶಕರಾದ HGF ಜೋಸೆಫ್ ಪಿರೇರಾ, HGF ಜೇಸಿಂತಾ ಡೆಸೋಜಾ, ಲೇಡಿ ಜೆಸಿ ಅಧ್ಯಕ್ಷೆ ಜೆಸಿ ರೇಷ್ಮಾ ಡಿ ಅಲ್ಮೇಡಾ, ಯೋಜನಾ ನಿರ್ದೇಶಕರು ಜೆಸಿ ರಿತೇಶ್ ಸ್ಟ್ರೆಲಾ ಮತ್ತು ಜೆಸಿ ಪ್ರಜ್ವಲ್ ಲೋಬೋ, ಪೂರ್ವಧ್ಯಕ್ಷರಾದ JFM ಶ್ರೀಧರ್ ರಾವ್, ಮಾಧ್ಯಮ ಸಂಯೋಜಕರಾದJC ಅಕ್ಷತ್ ರೈ,
ಜೆಸಿ ಪಿ ಟಿ ಸಬಾಸ್ಟಿನ್, ಜೆಸಿ ಜೋಯೆಲ್ ಪಿರೇರಾ, ಹಾಗೂ ಮಕ್ಕಳ ಜೆಸಿ ಅಧ್ಯಕ್ಷೆ JCLT ದಕ್ಷಾ ಜೈನ್ ಮತ್ತು ಎಲ್ಲಾ ಸದಸ್ಯರು ಮತ್ತು ಎಲ್ಲಾ ಪದಾಧಿಕಾರಿಗಳು ಸಹಕರಿಸಿದರು.

ಪೂರ್ವ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಜೆಸಿಐ ಕುಟುಂಬದ ಎಲ್ಲ ಸದಸ್ಯರು ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿ, ಕಾರ್ಯಕ್ರಮದ ಉದ್ದೇಶಕ್ಕೆ ಸಾಥ್ ನೀಡಿದರು. ತರಬೇತಿಯು ಭಾಗವಹಿಸಿದ ಪ್ರತಿಯೊಬ್ಬರಲ್ಲೂ ಆರ್ಥಿಕ ಪ್ರಜ್ಞೆ ಹಾಗೂ ಬುದ್ಧಿವಂತ ಹೂಡಿಕೆಗೆ ಸ್ಪೂರ್ತಿದಾಯಕವಾಯಿತು. ಕಾರ್ಯಕ್ರಮವನ್ನು ಘಟಕದ ಅಧ್ಯಕ್ಷ HGF ಶೋಭಾ ಪಿ ಸ್ವಾಗತಿದರು. ಜೆಸಿ ವಾಣಿಯನ್ನು ಜೆಸಿ ಆಯುಷ್ ಜೈನ್ ವಾಚಿಸಿ ಸಭೆಯನ್ನು ಕಾರ್ಯದರ್ಶಿ ಯಾದ ಚಂದನಾ ಜೈನ್ ವಂದಿಸಿದರು.

Related posts

ಕೊಲ್ಲೂರಿನಿಂದ-ನಾಡಿನ ಪ್ರಸಿದ್ದ ಶ್ರದ್ದಾಕೇಂದ್ರ ಧರ್ಮಸ್ಥಳಕ್ಕೆ ಧರ್ಮ ಸಂರಕ್ಷಣಾ ಯಾತ್ರೆ: ಉಜಿರೆಯಲ್ಲಿ ಧರ್ಮ ಸಂರಕ್ಷಣಾ ರಥಯಾತ್ರೆಗೆ ಅದ್ದೂರಿ ಚಾಲನೆ,

Suddi Udaya

ಬಿ ಕೆ ಹರಿಪ್ರಸಾದ್‌ರವರಿಗೆ ನೂತನ ಸಚಿವ ಸಂಪುಟದಲ್ಲಿ ಉಪಮುಖ್ಯಮಂತ್ರಿಗಳಾಗಿ ನೇಮಕ ಮಾಡುವಂತೆ ಸಜೀಪ ಮುನ್ನೂರು ಮೂರ್ತೆದಾರರ ಸೇವಾ ಸಹಕಾರ ಸಂಘದಿಂದ ಆಗ್ರಹ: ಸಂಜೀವ ಪೂಜಾರಿ

Suddi Udaya

ಕೊಕ್ಕಡ: ಕೆಎಸ್ಆರ್‌ಟಿಸಿ ಬಸ್–ಕಾರು ಮುಖಾಮುಖಿ ಡಿಕ್ಕಿ: ಮಹಿಳೆಗೆ ಗಾಯ

Suddi Udaya

ಸುಲ್ಕೇರಿ ಬ್ರಹ್ಮಶ್ರೀ ಗುರುನಾರಾಯಣ ಸೇವಾ ಸಮಿತಿಯಿಂದ ಬಿಲ್ಲವ ಸಮಾಜದ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ

Suddi Udaya

ಹೊಕ್ಕಾಡಿಗೋಳಿ: ವೀರ ವಿಕ್ರಮ ಜೋಡುಕರೆ ಬಯಲು ಕಂಬಳದ “ಕರೆ” ಮುಹೂರ್ತ

Suddi Udaya

ಬೆಳಾಲು ಮೈತ್ರಿ ಯುವಕ ಮಂಡಲ ವತಿಯಿಂದ 21 ನೇ ವರ್ಷದ ಮೊಸರು ಕುಡಿಕೆ ಉತ್ಸವ, ಸಮಾರೋಪ ಸಮಾರಂಭ

Suddi Udaya
error: Content is protected !!