25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ವೇಣೂರು ಲಯನ್ಸ್ ಕ್ಲಬ್ ಗೆ ಪ್ರಾಂತ್ಯ ಅಧ್ಯಕ್ಷರ ಭೇಟಿ

ವೇಣೂರು : ಲಯನ್ಸ್ ಕ್ಲಬ್ ಗೆ ಪ್ರಾಂತ್ಯ ಅಧ್ಯಕ್ಷ ಹಾಗೂ ವಲಯ ಅಧ್ಯಕ್ಷರ ಬೇಟಿ ಕಾರ್ಯಕ್ರಮ ಜರಗಿತು.

ಸೇವ ಕಾರ್ಯಕ್ರಮಗಳ ವರದಿಯನ್ನು ಕಾರ್ಯದರ್ಶಿ ಜಯರಾಮ್ ಹೆಗಡೆ ಮಂಡಿಸಿದರು. ಸ್ಥಳೀಯ ಗ್ರಾಮ ಪಂಚಾಯಿತಿನ ಉಗ್ರಾಣಿಯಾದ ಜಗದೀಶ ದೇವಾಡಿಗ ರವರನ್ನು ಅವರ ವಿಶೇಷ ಸೇವೆಯನ್ನು ಗುರುತಿಸಿ ಗೌರವಿಸಲಾಯಿತು.

ವೇದಿಕೆಯಲ್ಲಿ ಅನೇಕ ಸೇವಾ ಚಟುವಟಿಕೆಗಳು ವಿಶೇಷವಾಗಿ ವಿದ್ಯಾರ್ಥಿಗಳಿಗೆ ಸಹಾಯಧನ ಹಾಗೂ ಸಮವಸ್ತ್ರಗಳ ವಿತರಣೆ ಕಾರ್ಯಕ್ರಮ ಜರಗಿತು. ಮಾಜಿ ಅಧ್ಯಕ್ಷ ನಿತೇಶ್ ಎಚ್ ಪ್ರಾಂತ್ಯ ಅಧ್ಯಕ್ಷರ ಪರಿಚಯವನ್ನು ಸಭೆಗೆ ಮಾಡಿದರು. ತರುವಾಯ ಪ್ರಾಂತ್ಯ ಅಧ್ಯಕ್ಷ ಲಯನ್ ವೆಂಕಟೇಶ್ ಹೆಬ್ಬಾರ್ ಸಭೆಯನ್ನು ಉದ್ದೇಶಿಸಿ ಮಾತನಾಡಿ ಗ್ರಾಮೀಣ ಪ್ರದೇಶದ ಕ್ಲಬ್ ಗಳಲ್ಲಿ ಒಂದಾದ ವೇಣೂರು ಕ್ಲಬ್ ವಿಶೇಷವಾಗಿ ಎರಡು ಬಾರಿ ರಕ್ತದಾನ ಶಿಬಿರ ಹಾಗೂ ಸ್ಥಳೀಯ ಅಂಬುಲೆನ್ಸ್ ಗೆ ಸಹಾಯಧನ ವೈದ್ಯಕೀಯ ಶಿಬಿರಗಳನ್ನು ಹಾಗೂ ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ನೆರವೇರಿಸಿ ಪ್ರಾಂತ್ಯ ಮಾತ್ರವಲ್ಲ ಲಯನ್ಸ್ ಜಿಲ್ಲೆಯಲ್ಲಿ ಮಾದರಿ ಸಂಸ್ಥೆಯಾಗಿ ಮೂಡಿಬಂದಿದೆ. ವಿಶೇಷವಾಗಿ ಕ್ಲಬ್ ನ ಮಾಜಿ ಪ್ರಾಂತ್ಯಧ್ಯಕ್ಷ ಲಯನ್ ಪ್ರವೀಣ್ ಕುಮಾರ್ ಇಂದ್ರ ರವರು ತಮ್ಮ ಅಧಿಕಾರಾವಧಿಯಲ್ಲಿ ಕ್ಲಬ್ ಗೆ ಸ್ವಂತ ಕಟ್ಟಡ ಹಾಗೂ ನಿಯೋಜಿತ ಪ್ರಾಂತ್ಯ ಅಧ್ಯಕ್ಷ ಜಗದೀಶ್ ಚಂದ್ರ ಡಿಕೆ ಯವರ ಸೇವೆಯನ್ನು ಸ್ಮರಿಸಿದರು.

ನಿಯೋಜಿತ ಅಧ್ಯಕ್ಷ ಸುಧೀರ್ ಭಂಡಾರಿ, ಕಾರ್ಯದರ್ಶಿ ಜಯರಾಮ್ ಹೆಗ್ಡೆ, ಕೋಶಾಧಿಕಾರಿ ಸತೀಶ್ ಚಿಗುರು ಹಾಗೂ ನಿಯೋಜಿತ ಪ್ರಾಂತ್ಯ ಅಧ್ಯಕ್ಷರಾದ ಜಗದೀಶ್ ಚಂದ್ರ ಡಿಕೆ ಹಾಗೂ 2025-26 ನೇ ಸಾಲಿನ ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು.

ತರುವಾಯ ಪ್ರಾಂತ್ಯ ಅಧ್ಯಕ್ಷ ದಂಪತಿಗಳಿಗೆ ಹಾಗೂ ವಲಯ ಅಧ್ಯಕ್ಷರಿಗೆ ಗೌರವಿಸಲಾಯಿತು. ವಲಯ ಅಧ್ಯಕ್ಷ ಉಮೇಶ್ ಶೆಟ್ಟಿ ಹಾಗೂ ರೋಷನ್ ಡಿಸೋಜ, ಪ್ರಾಂತ್ಯ ರಾಯಭಾರಿ ವಸಂತ್ ಶೆಟ್ಟಿ ಶ್ರದ್ಧಾ ಶುಭ ಸಂಶನೆಗೈದರು. ವೇದಿಕೆಯಲ್ಲಿ ಪ್ರಾಂತ್ಯದ ಪ್ರಥಮ ಮಹಿಳೆ ಪ್ರತಿಭಾ ಹೆಬ್ಬಾರ್, ಝೋನ್ ಎನ್ ವೈ ಜೆಸ್ಸಿ ಮೆನೇಜಸ್ ಕಾರ್ಯದರ್ಶಿ ಜಯರಾಮ್ ಹೆಗಡೆ, ಕೋಶಾಧಿಕಾರಿ ಧನಂಜಯ್ ಭಂಡಾರಿ , ದೇವದಾಸ ಶೆಟ್ಟಿ ಹಿಬರೋಡಿ, ಬಿ ಶಿವಪ್ರಸಾದ್ ರವಿಶೆಟ್ಟಿ ಸುಲ್ಕೇರಿ ಮೊದಲಾದವರು ಉಪಸ್ಥಿತರಿದ್ದರು. ಸಭಾಧ್ಯಕ್ಷರಾದ ಹರೀಶ್ ಕುಮಾರ್ ಸ್ವಾಗತಿಸಿದರು. ಜಗದೀಶ್ ಚಂದ್ರ ಡಿಕೆ ಕಾರ್ಯಕ್ರಮವನ್ನು ನಿರೂಪಿಸಿದರು. ಪ್ರಾಂತ್ಯದ ವಿವಿಧ ಕ್ಲಬ್ ಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

Related posts

ಎ.ಕೃಷ್ಣಪ್ಪ ಪೂಜಾರಿಯವರಿಗೆ ’ಶ್ರೇಷ್ಠ ಶಿಕ್ಷಕ ಸೌರಭ ಪ್ರಶಸ್ತಿ

Suddi Udaya

ತಣ್ಣೀರುಪಂತ: ದೀಪಾವಳಿ ಪ್ರಯುಕ್ತ ದೀಪ ಸಂಜೀವಿನಿ, ಹಳ್ಳಿ ಸಂತೆ

Suddi Udaya

ಧರ್ಮಸ್ಥಳ: ಶ್ರೀ ಧ. ಮಂ. ಆಂ.ಮಾ. ಶಾಲೆಯಲ್ಲಿ ಜೀವನ ಕೌಶಲ್ಯ ಕಾರ್ಯಾಗಾರ

Suddi Udaya

ಅರಸಿನಮಕ್ಕಿ ಹತ್ಯಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಪಿ ತ್ಯಾಂಪಣ್ಣ ಶೆಟ್ಟಿಗಾರ್ ರವರಿಗೆ ಗೌರವಾರ್ಪಣೆ

Suddi Udaya

ಜಿಲ್ಲಾಮಟ್ಟದ ಕರಾಟೆ ಪಂದ್ಯಾಟ: ಬೆಳ್ತಂಗಡಿ ಶ್ರೀ ಧ. ಮಂ. ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಿಗೆ ಪ್ರಶಸ್ತಿ

Suddi Udaya

ಕಬಡ್ಡಿ ಪಂದ್ಯಾಟ: ಬೆಳಾಲು ಶ್ರೀ.ಧ.ಮಂ. ಅನುದಾನಿತ ಪ್ರೌಢಶಾಲಾ ವಿದ್ಯಾರ್ಥಿಗಳ ತಂಡ ಪ್ರಥಮ ಸ್ಥಾನ

Suddi Udaya
error: Content is protected !!