22.9 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಎಲ್ .ಸಿ.ಆರ್ ವಿದ್ಯಾ ಸಂಸ್ಥೆ : ಶಾಲಾ ಸಂಸತ್ತು ಚುನಾವಣೆ

ಕಕ್ಯಪದವು: ಎಲ್ ಸಿ ಆರ್ ವಿದ್ಯಾ ಸಂಸ್ಥೆಯಲ್ಲಿ 2025 – 26 ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಸಂಸತ್ತಿನ ಪದಾಧಿಕಾರಿಗಳ ಆಯ್ಕೆ ಮಾಡಲು ಜೂ. 23ರಂದು ಚುನಾವಣೆಯನ್ನು ನಡೆಸಲಾಯಿತು.

ಎಲ್ಲಾ ವಿದ್ಯಾರ್ಥಿಗಳ ಮತದಾನ ಪ್ರಕ್ರಿಯೆಯು ಎಲೆಕ್ಟ್ರಾನಿಕ್ ವೋಟಿಂಗ್ ಮೆಷಿನ್ ಮಾದರಿ (EVM) ಯ ಮೂಲಕ ನೆರವೇರಿತು. ವಿದ್ಯಾರ್ಥಿಗಳಿಗೆ ಮತದಾನದ ಬಗ್ಗೆ ಅರಿವು ಮೂಡಿಸುವ ಉದ್ದೇಶದೊಂದಿಗೆ ಮತದಾನದ ಕಾರ್ಯ ಚಟುವಟಿಕೆಗಳನ್ನು ಆಧುನಿಕ ಮೊಬೈಲ್ ತಂತ್ರಜ್ಞಾನದ ಮೂಲಕ ಮಾಡಲಾಯಿತು. ವಿವಿಧ ಶಿಕ್ಷಕ ಸಿಬ್ಬಂದಿಗಳ ಸಹಕಾರದಿಂದ ಮತದಾನ ಪ್ರಕ್ರಿಯೆಯು ಶಿಸ್ತಿನಿಂದ ಮತ್ತು ಯಶಸ್ವಿಯಾಗಿ ಪೂರ್ಣಗೊಂಡಿತು. ಹಾಗೂ ಮತ ಎಣಿಕೆಯನ್ನು ಮಾಡಿ ಫಲಿತಾಂಶ ಘೋಷಣೆಯನ್ನು ಮಾಡಲಾಯಿತು.

ಶಾಲಾ ವಿದ್ಯಾರ್ಥಿ ಸಂಘದ ನಾಯಕಿಯಾಗಿ ಮನಸ್ವಿನಿ . ಕೆ, ಉಪನಾಯಕಿಯಾಗಿ ಅದಿತಿ ಎಂ. ಪ್ರಭು ಆಯ್ಕೆಯಾದರು. ಹಾಗೂ ಶಿಕ್ಷಣ, ಸಾಂಸ್ಕೃತಿಕ, ಕ್ರೀಡಾ, ಆರೋಗ್ಯ ಮಂತ್ರಿಗಳನ್ನು ಆಯ್ಕೆ ಮಾಡಲಾಯಿತು.
ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣವನ್ನು ಬೆಳೆಸಲು ಹಾಗೂ ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂಬುದಾಗಿ ಮುಖ್ಯ ಶಿಕ್ಷಕಿ ಶ್ರೀಮತಿ ವಿಜಯ ಕೆ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿ ವಿಜೇತರನ್ನು ಅಭಿನಂದಿಸಿದರು.

Related posts

ಎಸ್.ಡಿ.ಎಮ್. ಪ.ಪೂ. ಕಾಲೇಜಿನಲ್ಲಿ, ಸ್ಪರ್ಧಾತ್ಮಕ ತರಗತಿಗಳ ಉದ್ಘಾಟನೆ

Suddi Udaya

ವೇಣೂರಿನ ಧೀಮಹಿಯಲ್ಲಿ ಭರತನಾಟ್ಯ ತರಗತಿಗಳ ಉದ್ಘಾಟನೆ

Suddi Udaya

ದಾರುಲ್ ಮುಸ್ತಫಾ ಮೋರಲ್ ಅಕಾಡೆಮಿ ಇದರ 8 ನೇ ವಾರ್ಷಿಕ ಹಾಗೂ 3 ನೇ ಸನದುದಾನ ಮಹಾ ಸಮ್ಮೇಳನ

Suddi Udaya

ಎಸ್‌ಡಿಎಂ ಪ.ಪೂ ಕಾಲೇಜಿನಲ್ಲಿ ಜಿಲ್ಲಾಮಟ್ಟದ ಬಾಲಕಿಯರ ಕಬಡ್ಡಿ ಪಂದ್ಯಾಟ

Suddi Udaya

ಆಟೋ ಚಾಲಕ- ಮಾಲಕ ಸಂಘದ ಮಾಜಿ ಅಧ್ಯಕ್ಷ ಶಿವಯ್ಯ ಪೂಜಾರಿ ನಿಧನ

Suddi Udaya

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ವೀಲ್ ಚೇರ್ ವಿತರಣೆ

Suddi Udaya
error: Content is protected !!