32.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರಕ್ಕೆ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್ ಗೌಡ ಹಾಗೂ ರಾಜ್ಯ ಯುವ ಕಾಂಗ್ರೆಸ್ ಉಸ್ತುವಾರಿ ನಿಗಮ್ ಭಂಡಾರಿ ಭೇಟಿ:

ಕೊಕ್ಕಡ: ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರಕ್ಕೆ ಕರ್ನಾಟಕ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್ ಗೌಡ ಹಾಗೂ ರಾಜ್ಯ ಯುವ ಕಾಂಗ್ರೆಸ್ ಉಸ್ತುವಾರಿ ನಿಗಮ್ ಭಂಡಾರಿ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ಈ ವೇಳೆ ದೇವಸ್ಥಾನದ ವ್ಯವಸ್ಥಾಪನ ಸಮಿತಿ ವತಿಯಿಂದ ಗೌರವಿಸಲಾಯಿತು. ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಸುಬ್ರಹ್ಮಣ್ಯ ಶಬರಾಯ, ವ್ಯವಸ್ಥಾಪನ ಸಮಿತಿಯ ಸದಸ್ಯರಾದ ವಿಶ್ವನಾಥ ಕೊಲ್ಲಜೆ ಉಪಸ್ಥಿತರಿದ್ದರು.

ನಂತರ ಕೊಕ್ಕಡ ಯುವ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿದರು. ಈ ವೇಳೆ ಅಧ್ಯಕ್ಷ ಮಂಜುನಾಥ್ ಗೌಡ ರವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಬೆಳ್ತಂಗಡಿ ಗ್ರಾಮೀಣ ಸಮಿತಿಯ ಅಧ್ಯಕ್ಷ ಕೆ.ಎಮ್ ನಾಗೇಶ್ ಕುಮಾರ್ ಗೌಡ, ಯುವ ಕಾಂಗ್ರೆಸ್ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಎಸ್ ಕೆ ಹಕೀಮ್ ಕೊಕ್ಕಡ, ಯುವ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿಗಳಾದ ಪವನ್ ಕೊಲ್ಲಜೆ, ಬ್ಲಾಕ್ ಕಾಂಗ್ರೆಸ್ ಬೆಳ್ತಂಗಡಿ ಗ್ರಾಮೀಣ ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾದ ಎಂ ಎಚ್ ಮೊಹಮ್ಮದ್ ಕಲಂದರ್ ಕೊಕ್ಕಡ, ಯುವ ಕಾಂಗ್ರೆಸ್ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಕಾರ್ಯದರ್ಶಿಗಳಾದ ವಾಜಿದ್ ಡಿಜಿಟಲ್ ಯೂಥ್ ಸದಸ್ಯರಾದ ಆಸಿಫ್ ಐಡಿಯಲ್ ಉಪಸ್ಥಿತರಿದ್ದರು.

ನಂತರ ಕೊಕ್ಕಡ ಎಂಡೋಪಾಲನ ಕೇಂದ್ರಕ್ಕೆ ಭೇಟಿ ನೀಡಿ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿಯವರ ಜನ್ಮ ದಿನಾಚರಣೆಯನ್ನು ಆಚರಣೆ ಮಾಡಲಾಯಿತು. ಎಂಡೋಪಾಲನ ಕೇಂದ್ರಕ್ಕೆ ಬೋರ್ವೆಲ್ ಅನ್ನು ರಾಜ್ಯ ಅಧ್ಯಕ್ಷರು ಕೊಡುಗೆಯಾಗಿ ನೀಡುವುದಾಗಿ ಘೋಷಿಸಿದರು.

Related posts

ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಉಪ ನಿರೀಕ್ಷಕರಾಗಿ (ಎಸ್.ಐ) ಭಡ್ತಿಗೊಂಡು, ವರ್ಗಾವಣೆಗೊಂಡ ದೇವಪ್ಪ ಎಂ. ರವರಿಗೆ ಬಿಳ್ಕೋಡುಗೆ

Suddi Udaya

ಬುರುಡೆ ಪ್ರಕರಣ: ನಾಲ್ಕು ಮಂದಿ ಎಸ್.ಐ.ಟಿ ವಿಚಾರಣೆಗೆ ಹಾಜರಾಗದ ಕಾರಣ ವಿನಾಯಿತಿ ಕೇಳಿದ ವಕೀಲರು

Suddi Udaya

ಶ್ರೀ ಕ್ಷೇತ್ರ ಧ.ಗ್ರಾ.ಯೋಜನೆಯ ವತಿಯಿಂದ ಔಟ್ ಸೈಡ್ ವಾಕರ್ ವಿತರಣೆ

Suddi Udaya

ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲಾ ವಿದ್ಯಾರ್ಥಿಗಳಿಗೆ ಬಹುಮಾನ

Suddi Udaya

ಬೆಳ್ತಂಗಡಿ: ಅಸೌಖ್ಯದಿಂದ ಯುವರಾಜ್ ಪೂಜಾರಿ ನಿಧನ

Suddi Udaya

ಅಜ್ಞಾತ ಸಂತ ಹರ್ಡೇಕರ್ ಮಂಜಪ್ಪ ಪುಸ್ತಕ ಬಿಡುಗಡೆ

Suddi Udaya
error: Content is protected !!