24.8 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ನಾರಾವಿ ಸಂತ ಅಂತೋನಿ ಪ.ಪೂ. ಕಾಲೇಜಿನಲ್ಲಿ ವನಮಹೋತ್ಸವ ಕಾರ್ಯಕ್ರಮ

ನಾರಾವಿ:”ವಿಶ್ವ ಪರಿಸರ ದಿನಾಚರಣೆಯೆಂದರೆ ಕೇವಲ ಗಿಡ ನೆಡುವ ಕಾರ್ಯಕ್ರಮವಲ್ಲ. ಈಗಿರುವ ಅರಣ್ಯ ಸಂಪತ್ತನ್ನು ಸಂರಕ್ಷಿಸುವುದೇ ಪರಿಸರ ದಿನದ ನಿಜವಾದ ಉದ್ದೇಶ. ಪರಿಸರವನ್ನು ಉಳಿಸದಿದ್ದರೆ ಮುಂದೊಂದು ದಿನ ಪರಿತಪಿಸಬೇಕಾದೀತು. ಪ್ಲಾಸ್ಟಿಕ್ ಮುಕ್ತ ಪರಿಸರ ಆರೋಗ್ಯಕ್ಕೆ ಸುಖಕರ”ಎಂದು ಸಂತ ಅಂತೋನಿ ಪದವಿ ಕಾಲೇಜಿನ ಕನ್ನಡ ಉಪನ್ಯಾಸಕ ದಿನೇಶ್ ಬಿ ಕೆ ಬಳoಜ ಅಭಿಪ್ರಾಯ ಪಟ್ಟರು.

ಅವರು ಸಂತ ಅಂತೋನಿ ಪದವಿಪೂರ್ವ ಕಾಲೇಜು ನಾರಾವಿ ಇಲ್ಲಿ ಪರಿಸರ ದಿನದ ಅಂಗವಾಗಿ ಏರ್ಪಡಿಸಿದ್ದ ವನಮಹೋತ್ಸವ ಕಾರ್ಯಕ್ರಮ ದಲ್ಲಿ ಮಾತನಾಡುತ್ತಿದ್ದರು.

ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯರಾದ ವಂ. ಡಾ. ಆಲ್ವಿನ್ ಸೆರಾವೋ”ಗಿಡಮರಗಳಿಗೂ ಜೀವವಿರುತ್ತದೆ. ಅವುಗಳೂ ಉಸಿರಾಡುತ್ತದೆ. ನಾವು ಸ್ವಚ್ಛವಾಗಿ ಉಸಿರಾಡಬೇಕಾದರೆ ನಮ್ಮ ಪರಿಸರವು ಸ್ವಚ್ಛವಾಗಿರಬೇಕು.

ಪರಿಸರ ಸಂರಕ್ಷಣೆಯಲ್ಲಿ ವಿದ್ಯಾರ್ಥಿಗಳ ಪಾತ್ರ ಮಹತ್ವದ್ದು”ಎಂದು ತಿಳಿಸಿದರು. ಗಿಡಕ್ಕೆ ನೀರು ಹಾಕುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ವೇದಿಕೆಯಲ್ಲಿ ಉಪ ಪ್ರಾoಶುಪಾಲರಾದ ಸಂತೋಷ್ ಸಲ್ದಾನ, ದೈಹಿಕ ಶಿಕ್ಷಣ ನಿರ್ದೇಶಕರಾದ ಪ್ರದೀಪ್ ಬಿ, ಹಾಗೂ ಕಾಲೇಜಿನ ವಿದ್ಯಾರ್ಥಿ ಪರಿಷತ್ ನ ನಾಯಕಿ ಕು.ಗ್ಲೆನಿಷಾ ಮಿರಾoದ ಉಪಸ್ಥಿತರಿದ್ದರು. ವಿದ್ಯಾರ್ಥಿಗನಿ ಹೆಂಝಿಲ್ ಕಾರ್ಯಕ್ರಮ ನಿರೂಪಿಸಿದರು.

Related posts

ಉಜಿರೆ ಎಸ್.ಡಿ.ಎಮ್ ಬಿ. ವೋಕ್ ಡಿಜಿಟಲ್ ಮೀಡಿಯಾ ಮತ್ತು ಫಿಲ್ಮ್ ಮೇಕಿಂಗ್ ವಿಭಾಗದ ಲೂಮೋಸ್ ವಿದ್ಯಾರ್ಥಿ ಸಂಘದ ಶೈಕ್ಷಣಿಕ ವರ್ಷದ ಚಟುವಟಿಕೆಗಳಿಗೆ ಚಾಲನೆ

Suddi Udaya

ತುಮಕೂರು ಕುಚ್ಚಂಗಿ ಕೆರೆಯ ಬಳಿ ಮೂವರ ಶವ ಸುಟ್ಟು ಹೋದ ರೀತಿಯಲ್ಲಿ ಪತ್ತೆ: ಮೂವರು ಬೆಳ್ತಂಗಡಿ ತಾಲೂಕಿನಿಂದ ನಾಪತ್ತೆಯಾದವರದ್ದು ಇರಬಹುದೆಂಬ ಶಂಕೆ

Suddi Udaya

ಮುಂಡಾಜೆ ಪಿಯು ಕಾಲೇಜಿನ ಎನ್‌ಎಸ್‌ಎಸ್ ವಿದ್ಯಾರ್ಥಿಗಳಿಂದ ರಸ್ತೆ ದುರಸ್ತಿ

Suddi Udaya

ದಿಡುಪೆ ಮಸ್ಜಿದುಲ್ ಹಿದಾಯ ಆಡಳಿತ ಸಮಿತಿಯ ನೂತನ ಅಧ್ಯಕ್ಷರಾಗಿ ಡಿ.ಬಿ ಇಸ್ಮಾಯಿಲ್ ಮುಸ್ಲಿಯಾರ್ ಪುನರಾಯ್ಕೆ

Suddi Udaya

ಗ್ರಾಮೀಣ ಭಾಗದ ಮನ್‌‌ಶರ್ ಕಾಲೇಜ್ ನ ರಾಜ್ಯ ಮಟ್ಟದ ಸಾಧನೆ ಪ್ರಶಂಶನೀಯ; ವಿಧಾನ ಸಭಾಪತಿ ಯು. ಟಿ. ಖಾದರ್

Suddi Udaya

ಕಾಶಿಪಟ್ಣ ಕೇಳ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಸ್ವಾಗತ ಗೋಪುರ ಲೋಕಾರ್ಪಣೆ ರೂ. 25ಲಕ್ಷ ಅನುದಾನ ನೀಡಿ ಸಹಕರಿಸಿದ ಶಾಸಕ ಹರೀಶ್ ಪೂಂಜರವರಿಗೆ ಸನ್ಮಾನ

Suddi Udaya
error: Content is protected !!