22.9 C
ಪುತ್ತೂರು, ಬೆಳ್ತಂಗಡಿ
March 7, 2026
ಅಪರಾಧ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿಸರ್ಕಾರಿ ಇಲಾಖಾ ಸುದ್ದಿ

ಇಂದಬೆಟ್ಟು: ಅತಿಕ್ರಮಣ ತೆರವುಗೊಳಿಸಲು ತಹಶೀಲ್ದಾರ್ ಮಾಡಿದ ಪ್ರಕ್ರಿಯೆಯನ್ನು ರದ್ದುಗೊಳಿಸಿದ ಹೈಕೋರ್ಟು

ಇಂದಬೆಟ್ಟು: ಇಂದಬೆಟ್ಟು ಗ್ರಾಮದ ಪೇರದ್ದಪಲ್ಕೆ ಹಾನಿಬೆಟ್ಟು ಸರ್ವೇ ನಂಬರ್೨೩೪/*/ ರಲ್ಲಿರುವ ಸ್ಥಳವನ್ನು ಸಾರ್ವಜನಿಕ ಉದ್ದೇಶಕ್ಕೆ ಪಂಚಾಯತದಿಂದ ಮೀಸಲಿರಿಸಲು ಸೂಕ್ತ ಸ್ಥಳವೆಂದು ಸಾಮಾನ್ಯ ಸಭೆಯಲ್ಲಿ ನಿರ್ಧರಿಸಿ, ತಹಶೀಲ್ದಾರರಿಗೆ ನೀಡಿದ ಮನವಿಯಂತೆ ಬೆಳ್ತಂಗಡಿ ತಹಶೀಲ್ದಾರ್‌ರವರು ಆದೇಶ ಸಂಖ್ಯೆ ಓಅಖಅಖ ೧೮೧/೨೦೨೩.೨೪ ರಂತೆ ಅತಿಕ್ರಮಣವನ್ನು ತೆರವುಗೊಳಿಸಿ ಸರ್ಕಾರದ ಸ್ವಾಧೀನಕ್ಕೆ ಕಂದಾಯ ಇಲಾಖೆ ಜೂ.೪ರಂದು ಪಡೆದುಕೊಂಡಿದ್ದರು.

ಇದೀಗ ತಹಶೀಲ್ದಾರ್ ಅತಿಕ್ರಮಣ ತೆರವಿಗೆ ಮಾಡಿದ ಸಂಪೂರ್ಣ ಪ್ರಕ್ರಿಯೆನ್ನು ಹೈಕೋರ್ಟ್ ರದ್ದುಗೊಳಿಸಿದೆ. ಸಾಜು ಚಾಕೋ ಎಂ. ಅವರಿಗೆ ಜಾಗ ಮಾರಾಟ ಮಾಡಿದವರು ಸದ್ರಿ ಸರಕಾರಿ ಸ್ಥಳಕ್ಕೆ ಬೇಲಿ ಹಾಕಿ ಸುಮಾರ ೫೦ ವರ್ಷಗಳಿಂದ ಸ್ವಾಧೀನ ಹೊಂದಿ ಅದರಲ್ಲಿದ್ದ ೪೫ ವರ್ಷದ ರಬ್ಬರ್ ಗಿಡಗಳನ್ನು ಕಡಿದು ಅದರಲ್ಲಿ ತೆಂಗು ಹಾಗೂ ಇತರ ಕೃಷಿಯನ್ನು ಮಾಡಿಕೊಂಡು ಬರುತ್ತಿದ್ದರು.

ಸದ್ರಿ ಸ್ಥಳವು ಚಾಕೋ ಅವರ ಕ್ರಮವರಿಸಿದ ಸ್ಥಳಗಳ ಹಕ್ಕಿನ ಸ್ಥಳಗಳಾಗಿದ್ದು, ಅವುಗಳನ್ನು ಈಗಲೂ ಸ್ವಾಧೀನ ಹೊಂದಿದ್ದಾರೆ. ಅವರಿಗೆ ಸರಿಯಾದ ಅವಕಾಶ ನೀಡದೆ ಜೂ.೬ರಂದು ಅತಿಕ್ರಮ ತೆರವಿಗೆ ಕ್ರಮ ಜರುಗಿಸುವುದಾಗಿ ತಹಶೀಲ್ದಾರರು ಜೂ.೪ರಂದು ನೋಟಿಸ್ ಜಾರಿಗೊಳಿಸಿ ಅದರಂತೆ ಕಾನೂನು ಕಾರ್ಯಚರಣೆ ನಡೆಸಿದರು ಎಂದು ಸಾಜು ಎಂ.ಚಾಕೋರವರು ಕರ್ನಾಟಕ ಉಚ್ಚಾ ನ್ಯಾಯಲಯದಲ್ಲಿ ಮೇಲ್ಮನವಿ ಸಲ್ಲಿಸಿ, ಅತಿಕ್ರಮ ತೆರವುಗೊಳಿಸುವ ತಹಶೀಲ್ದಾರ್ ಕ್ರಮವನ್ನು ರದ್ದುಗೊಳಿಸುವಂತೆ ಕೋರಿದ್ದರು. ಸದ್ರಿ ಪ್ರಕರಣ ಸಹಾಯಕ ಕಮೀಷನರ್‌ರ ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿ ಇದ್ದು, ಚಾಕೋರವರು ಆಕ್ಷೇಪಣೆಯನ್ನು ಸಲ್ಲಿಸಿದ್ದಾರೆ.

ಈ ಆಕ್ಷೇಪಣೆ ವಿಲೇವಾರಿಯಾಗದೆ ತಹಶೀಲ್ದಾರರು ಅತಿಕ್ರಮಣ ತೆರವಿಗೆ ಕೈಗೊಂಡಿರುವ ಕ್ರಮವು ಸಮ0ಜಸವಲ್ಲವೆಂದು ಮನಗಂಡ ಹೈಕೋರ್ಟ್ ತಹಶೀಲ್ದಾರ್ ರವರ ಅತಿಕ್ರಮಣ ತೆರವಿನ ಸಂಪೂರ್ಣ ಪ್ರಕ್ರಿಯೆಯನ್ನು ರದ್ದುಗೊಳಿಸಿದೆ. ಚಾಕೋ ಪರವಾಗಿ ನ್ಯಾಯಾಲಯದಲ್ಲಿ ನ್ಯಾಯವಾದಿ ಎಸ್. ರಾಜಶೇಖರ್ ಮತ್ತು ನ್ಯಾಯವಾದಿ ಪ್ರಸಾದ್ ಕೆ.ಎಸ್ ಬೆಳ್ತಂಗಡಿ ವಾದಿಸಿದ್ದರು.

Related posts

ಧರ್ಮಸ್ಥಳ ಮಹಾಶಕ್ತಿ ಕೇಂದ್ರದ ಕಳೆoಜ ಶಕ್ತಿಕೇಂದ್ರದಲ್ಲಿ ನಮೋ ಯುವಚೌಪಲ್

Suddi Udaya

Carotid body tumor ಎಂಬ ವಿಚಿತ್ರ ಖಾಯಿಲೆಯಿಂದ ಬಳಲುತ್ತಿರುವ ಮರೋಡಿಯ ಯುವಕ: ಶಸ್ತ್ರಚಿಕಿತ್ಸೆಗೆ ಬರೋಬ್ಬರಿ ರೂ. 8 ಲಕ್ಷದ ಅವಶ್ಯಕತೆ, ಬಡಕುಟುಂಬ ಸಹೃದಯ ದಾನಿಗಳ ಸಹಕಾರವನ್ನು ಎದುರು ನೋಡುತ್ತಿದೆ

Suddi Udaya

ಕಳೆಂಜ ನಂದಗೋಕುಲ ಗೋಶಾಲೆಯಲ್ಲಿ ದೀಪೋತ್ಸವ
ಸಾಮೂಹಿಕ ಗೋಪೂಜೆ – ಗೋ ನಂದಾರತಿ ಕಾರ್ಯಕ್ರಮ

Suddi Udaya

ಕುಕ್ಕೇಡಿ ಗ್ರಾಮ ಪಂಚಾಯತ್ ನಲ್ಲಿ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮ

Suddi Udaya

ಎ.23: ಪುಂಜಾಲಕಟ್ಟೆ ಸ್ವಸ್ತಿಕ್ ಫ್ರೆಂಡ್ಸ್‌ ಕ್ಲಬ್‌ನಲ್ಲಿ 15ನೇ ವರ್ಷದ ಸಾಮೂಹಿಕ ವಿವಾಹ ನಿಶ್ಚಿತಾರ್ಥ

Suddi Udaya

ವಾಣಿ ಪದವಿ ಪೂರ್ವ ಕಾಲೇಜಿನಲ್ಲಿ ವಿಂಶತಿ ಸಂಭ್ರಮ ಹಾಗೂ ಕಾಲೇಜಿನ ವಾರ್ಷಿಕೋತ್ಸವ

Suddi Udaya
error: Content is protected !!