
ಬಂಗಾಡಿ: ಬಂಗಾಡಿ ಜೈನ ಬಸದಿ ಎದುರು ಜೂ.25 ರಂದು ಅತಿಯಾದ ಮಳೆಯಿಂದಾಗಿ ಚರಂಡಿ ನಿರ್ವಹಣೆ ಇಲ್ಲದೆ ರಸ್ತೆಯಲ್ಲೇ ಮಳೆಯ ನೀರು ಹರಿದಿದೆ.

ಇಲ್ಲಿ ಇರುವ ಚರಂಡಿ ಅತೀ ಸಣ್ಣದು ಪ್ರತೀ ವರ್ಷ ಇಲ್ಲಿ ಮಳೆ ಬಂದರೆ ನೀರೆಲ್ಲಾ ಚರಂಡಿ ಇಲ್ಲದೆ ಮಾರ್ಗದಲ್ಲೇ ಹರಿಯುತ್ತದೆ. ಇದರಲ್ಲಿ ಬರುವ ನೀರು 10ಪಟ್ಟು ಹೆಚ್ಚು ಇದೆ. ಇಲ್ಲಿ ಸರಕಾರಿ ಪ್ರಾಥಮಿಕ ಶಾಲೆ, ಜೈನ ಬಸದಿ, ಸಿ.ಎ ಬ್ಯಾಂಕ್, ಕೆನರಾ ಬ್ಯಾಂಕ್ ಮತ್ತು ಖಾಸಗಿ ಕ್ಲಿನಿಕ್ ಇದೆ. ನೀರು ತುಂಬಿ ರಸ್ತೆಯಲ್ಲಿ ಸಂಚರಿಸಲು ಸಾರ್ವಜನಿಕರಿಗೆ , ಶಾಲಾ ಮಕ್ಕಳಿಗೆ ಕಷ್ಟವಾಗುತ್ತಿದೆ. ಪ್ರತೀ ವರ್ಷ ಮಳೆ ಬಂದರೆ ಇದೇ ಪರಿಸ್ಥಿತಿ. ಇದರ ಬಗ್ಗೆ ಲೋಕೋಪಯೋಗಿ ಇಲಾಖೆ ಮತ್ತು ಇತರ ಇಲಾಖೆಯ ಅಧಿಕಾರಿಗಳು ಗಮನ ಹರಿಸಬೇಕಾಗಿದೆ. ಎರಡೂ ಬದಿಯಲ್ಲಿ ಚರಂಡಿ ಇಲ್ಲದೆ ಈ ಪರಿಸ್ಥಿತಿ ಉಂಟಾಗಿದೆ. ಕಳೆದ ಹಲವು ವರ್ಷಗಳಿಂದ ಇದೇ ಅವಸ್ಥೆ ಉಂಟಾಗುತ್ತಿದ್ದು, ಇನ್ನಾದರೂ ಎಚ್ಚೆತ್ತು ಸರಿಪಡಿಸಬೇಕಾಗಿ ಸಾರ್ವಜನಿಕರು ಆಗ್ರಹಿಸಿದ್ದಾರೆ. ಮುಂದೆಯೂ ಇದೇ ಮುಂದುವರಿದರೆ ಸಾರ್ವಜನಿಕರು ಪ್ರತಿಭಟನೆ ಮಾಡಬೇಕಾಗಿದೆ ಎಂದು ಆಗ್ರಹಿಸಿದರು.











