23.3 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಅಳದಂಗಡಿಯಲ್ಲಿ ಸರಕಾರಿ ಸೌಲಭ್ಯ ವಂಚಿತರಾದ ವೃದ್ಧ ಮಹಿಳೆ: ಗ್ರಾ.ಪಂ ಅಧಿಕಾರಿಗಳು ಭೇಟಿ ನೀಡಿ ಮೂಲ ಸೌಕರ್ಯ ಒದಗಿಸುವ ಭರವಸೆ : ” ಸುದ್ದಿ ಉದಯ” ಸ್ಪೆಷಲ್ ರಿಪೋರ್ಟ್ ಇಫೇಕ್ಟ್

ಬೆಳ್ತಂಗಡಿ : ಮೂಲ ಸೌಕರ್ಯ ಇಲ್ಲದೆ ಕಳೆದ 10-15 ವರ್ಷಗಳಿಂದ ಯಾವುದೇ ದಾಖಲೆಗಳಿಲ್ಲದೆ ಸರಕಾರಿ ಜಾಗದಲ್ಲಿ ಸಿಮೆಂಟ್ ಬ್ಲಾಕ್ ಮತ್ತು ಸೀಟ್ ನಿಂದ ನಿರ್ಮಿಸಿದ ಕುಠೀರದಲ್ಲಿ ಹಬೆ ಬರುವ ನೆಲದಲ್ಲಿ ಒಂಬಟ್ಟಿಯಾಗಿ ವಾಸಿಸುತ್ತಿದ್ದ ಡೀಕಮ್ಮ(70) ಅವರ ಬದುಕಿನ ವ್ಯಥೆಯ ಕಥತನವನ್ನು ಸುದ್ದಿ ಉದಯ ವಾರ ಪತ್ರಿಕೆ ಜೂ.26 ರಂದು “ಅಳದಂಗಡಿಯಲ್ಲಿ ಸರಕಾರಿ ಸೌಲಭ್ಯ ವಂಚಿತರಾದ ವೃದ್ಧ ಮಹಿಳೆ” ಎಂಬ ಶೀರ್ಷಿಕೆಯಡಿಯಲ್ಲಿ ವಿಶೇಷ ವರದಿ ಪ್ರಕಟಿಸಿತ್ತು.

ವರದಿ ಪ್ರಕಟಗೊಂಡ ಬೆನ್ನಲ್ಲೇ ಅಳದಂಗಡಿ ಗ್ರಾಮ ಪಂಚಾಯತ್ ಗ್ರಾಮ ಆಡಳಿತಾಧಿಕಾರಿ ವಿಜೇತ್.ಬಿ ಮತ್ತು ಗ್ರಾ.ಪಂ ಸದಸ್ಯ ಪ್ರವೀಣ್ ಜೂ.26 ರಂದು 12:30 ಗಂಟೆಗೆ ಮನೆಗೆ ಭೇಟಿ ನೀಡಿ ಅಗತ್ಯ ದಾಖಲೆಗಳಾದ ಆಧಾರ್, ಮತದಾರರ ಗುರುತಿನ ಚೀಟಿ, ಪಡಿತರ ಚೀಟಿಗಳನ್ನು ಮಾಡಿಕೊಡುವುದಾಗಿ ತಿಳಿಸಿದರು. ನಂತರದ ಹಂತದಲ್ಲಿ ಸದ್ರಿಯವರ ಜಂಟಿ ಖಾತೆಯಲ್ಲಿರುವ ಪಟ್ಟಾ ಸ್ಥಳದಲ್ಲಿ ಮನೆ ನಿರ್ಮಿಸುವ ಬಗ್ಗೆ ಸ್ಥಳೀಯ ಗ್ರಾಮ ಪಂಚಾಯತ್ ನೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದಾಗಿ ತಿಳಿಸಿದರು.

ಅಳದಂಗಡಿ ಗ್ರಾಮ ಪಂಚಾಯತ್ ಗ್ರಾಮ ಆಡಳಿತಾಧಿಕಾರಿ ವಿಜೇತ್ ಬಿ , ಗ್ರಾಮ ಪಂಚಾಯತ್ ಸದಸ್ಯರ ಪ್ರವೀಣ್, ಸ್ಥಳೀಯ ಸಂತೋಷ್ ಉಪಸ್ಥಿತರಿದ್ದರು.

Related posts

ಜೆಸಿಐ ಬೆಳ್ತಂಗಡಿ ಮಂಜುಶ್ರೀಯ 2023ನೇ ವರ್ಷದ ಚಟುವಟಿಕೆಗಳು ಸಂಪನ್ನ

Suddi Udaya

ಗುರುವಾಯನಕೆರೆ ರತ್ನಗಿರಿ ಸನ್ಯಾಸಿ ಗುಳಿಗ ದೈವದ ಸನ್ನಿಧಿಯಲ್ಲಿ ಕಳಶ ತಂಬಿಲ ಪರ್ವ

Suddi Udaya

ಬೆಳಾಲಿನ ಶಿಲ್ಪಿ ಶಶಿಧರ ಆಚಾರ್ಯ ರಿಗೆ ದಿ| ಬೋಳೂರು ಹರಿಶ್ಚಂದ್ರ ಆಚಾರ್ಯ ಪುರಸ್ಕಾರ

Suddi Udaya

ಕನ್ಯಾಡಿ ಶ್ರೀರಾಮ ಕ್ಷೇತ್ರಕ್ಕೆ ಸಚಿವ ಮಾಂಕಾಳ್ ಎಸ್. ವೈದ್ಯ ಭೇಟಿ

Suddi Udaya

ಉಜಿರೆ ಗ್ರಾಮ ಪಂಚಾಯತಿಯಲ್ಲಿ ನರೇಗಾ ಯೋಜನೆಯ ಮಾಹಿತಿ ಕಾರ್ಯಗಾರ

Suddi Udaya

ಎಸ್‌ಡಿಪಿಐ ಬೆಳ್ತಂಗಡಿ ಕ್ಷೇತ್ರ ಸಮಿತಿ ವತಿಯಿಂದ ನಾಯಕರ ಶೃಂಗಸಭೆ ಕಾರ್ಯಕ್ರಮ

Suddi Udaya
error: Content is protected !!