32.9 C
ಪುತ್ತೂರು, ಬೆಳ್ತಂಗಡಿ
March 6, 2026
Uncategorized

ಅಳದಂಗಡಿಯಲ್ಲಿ ಸರಕಾರಿ ಸೌಲಭ್ಯ ವಂಚಿತರಾದ ವೃದ್ಧ ಮಹಿಳೆಯ ಶೆಡ್ ಗೆ ಬಂತು ಸೋಲಾರ್ ಲೈಟ್ – ಡಿ .ಸಿ. ಕರೆ ಮಾಡಿ ಅಜ್ಜಿಯ ಬಗ್ಗೆ ಮಾಹಿತಿ ಸಂಗ್ರಹ: ‌ಸುದ್ದಿ ಉದಯ ಪತ್ರಿಕೆಯ ಸ್ಪೆಷಲ್ ರಿಪೋರ್ಟ್ ಗೆ ಸಾರ್ವಜನಿಕರ ವ್ಯಾಪಕ ಮೆಚ್ಚುಗೆ

ಬೆಳ್ತಂಗಡಿ : ಅಳದಂಗಡಿಯಲ್ಲಿ ಸರಕಾರಿ ಸೌಲಭ್ಯ ವಂಚಿತರಾದ ವೃದ್ಧ ಮಹಿಳೆಯ ಎಂಬ ಶಿರ್ಷಿಕೆಯಡಿಯಲ್ಲಿ ಸುದ್ದಿ ಉದಯ ವಾರ ಪತ್ರಿಕೆಯಲ್ಲಿ ವಿಶೇಷ ವರದಿ ಜೂ. 26ರಂದು ಪ್ರಕಟ ಮಾಡಿತ್ತು. ವರದಿಯ‌ ಬೆನ್ನಲ್ಲೇ ಗ್ರಾಮ ಮಟ್ಟದ ಅಧಿಕಾರಿಗಳು ಭೇಟಿ ನೀಡಿ ಅಜ್ಜಿಯ ವ್ಯಥೆಯ ಬಗ್ಗೆ ಮಾಹಿತಿ ಪಡೆದು ಕೊಂಡಿದ್ದರು. ಸಂಜೆ ವೇಳೆಗೆ ಅಜ್ಜಿಯ‌ ಶೆಡ್ ಮುಂದೆ ಸೋಲಾರ್ ಲೈಟ್ ಅಳವಡಿಸಲಾಗಿದೆ. ಜಿಲ್ಲಾಧಿಕಾರಿ ದರ್ಶನ್ ರವರು ವರದಿ ಗಮನಿಸಿ ಅಜ್ಜಿಗೆ ಸಹಾಯ ಮಾಡುತ್ತಿರುವ ಸ್ಥಳೀಯ ನಿವಾಸಿ ಸಂತೋಷ್ ಎಂಬುವರಿಗೆ ಇಂದು ಕರೆ ಮಾಡಿ ಡೀಕಮ್ಮ ಅಜ್ಜಿಯ ಮಾಹಿತಿ ಪಡೆದುಕೊಂಡರು. ನಾಳೆ ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನಿಕಂ ಅವರನ್ನು ಸ್ಥಳಕ್ಕೆ ಕಳುಹಿಸಿ ವರದಿ ನೀಡಲು ಸೂಚಿಸಿ ಅಗತ್ಯ ಮೂಲಭೂತ ಸೌಕರ್ಯ ಒದಗಿಸುವ ಬಗ್ಗೆ ಭರವಸೆ ನೀಡಿದ್ದಾರೆ ಎಂದು ಸಂತೋಷ್ ತಿಳಿಸಿದ್ದಾರೆ.

ಗ್ರಾಮ ಆಡಳಿತಾಧಿಕಾರಿ ವಿಜೇತ್.ಬಿ ಮತ್ತು ಗ್ರಾ.ಪಂ ಸದಸ್ಯ ಪ್ರವೀಣ್ ಜೂ.26 ರಂದು ಡೀಕಮ್ಮ ಅಜ್ಜಿಯ ಮನೆಗೆ ಭೇಟಿ ನೀಡಿದರು. ಯೋಗಕ್ಷೇಮ ವಿಚಾರಿಸಿ ಅಗತ್ಯ ದಾಖಲೆಗಳಾದ ಆಧಾರ್, ಮತದಾರರ ಗುರುತಿನ ಚೀಟಿ, ಪಡಿತರ ಚೀಟಿಗಳನ್ನು ಮಾಡಿಕೊಡದಾಗಿ ತಿಳಿಸಿದರು. ಮುಂದಿನ ಹಂತದಲ್ಲಿ ಸದ್ರಿಯವರ ಜಂಟಿ ಖಾತೆಯಲ್ಲಿರುವ ಪಟ್ಟಾಸಳದಲ್ಲಿ ಮನೆ ನಿರ್ಮಿಸುವ ಬಗ್ಗೆ ಸ್ಥಳೀಯ ಗ್ರಾಮ ಪಂಚಾಯತ್ ನೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದಾಗಿ ಎಂದು ಭರವಸೆ ನೀಡಿದರು.

ಸೋಲಾರ್ ಲೈಟ್ ಅಳವಡಿಸಲು ತಹಶೀಲ್ದಾರ್ ಪೃಥ್ವಿ ಸಾನಿಕಂ , ಅಳದಂಗಡಿ ಪಿಡಿಒ ಪೂರ್ಣಿಮಾ ಅವರು ಸೂಚಿಸಿದ ಮೇರೆಗೆ ಸ್ಥಳೀಯ ನಿವಾಸಿ ಸಂತೋಷ್ ತಂಡ ರಸ್ತೆಯಲ್ಲಿದ್ದ ಸೋಲಾರ್ ಲೈಟ್ ತೆಗೆದು ಅಜ್ಜಿಯ ಮನೆಯ ಹೊರಗಡೆ ಅಳವಡಿಸಿದ್ದಾರೆ‌. ಒಂದೆಡೆ ಜಿಲ್ಲಾ ಅಧಿಕಾರಿಗಳು ಕೂಡ ಕರೆ ಮಾಡಿ ಮಾಹಿತಿ ಪಡೆದು ಕೊಂಡಿದ್ದಾರೆ. ಗ್ರಾಮ ಆಡಳಿತ ಅಧಿಕಾರಿಗಳು ಭೇಟಿ ನೀಡಿ ಅಜ್ಜಿಯ ವ್ಯಥೆಯನ್ನು ಆಲಿಸಿದ್ದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಸುದ್ದಿ ಉದಯ ವಾರ ಪತ್ರಿಕೆಯ ಸ್ಪೆಷಲ್ ರಿಪೋರ್ಟ್ ಗೆ ಸಾರ್ವಜನಿಕರು ವ್ಯಾಪಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Related posts

ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಮಡಂತ್ಯಾರು ಶಾಖೆಯಲ್ಲಿ ಉಚಿತ ವೈದ್ಯಕೀಯ, ನೇತ್ರ ತಪಾಸಣಾ ಮತ್ತು ದಂತ ತಪಾಸಣೆ ಚಿಕಿತ್ಸಾ ಶಿಬಿರ

Suddi Udaya

ಸೆ.28: ಕೊಲ್ಲಿ ದೇವಸ್ಥಾನ ಜೀರ್ಣೋದ್ದಾರ ಸಮಿತಿಯಿಂದ ಭಕ್ತರ ಸಭೆ

Suddi Udaya

– ಐದು ವರ್ಷಗಳ ಸಾಧನೆಯ ಸಂಭ್ರಮದಲ್ಲಿರುವ ಪ್ರತಿಷ್ಠಿತ ಎಕ್ಸೆಲ್ ವಿದ್ಯಾಸಂಸ್ಥೆಗೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭೇಟಿ. -ವಿದ್ಯಾ ಗಣಪತಿ ದೇವರ ವಿಗ್ರಹ ಅನಾವರಣ,ಎಕ್ಸೆಲ್ ಪಂಚ ಪರ್ವ. -ಕಡಿಮೆ ಅವಧಿಯಲ್ಲಿ ಯಶಸ್ವಿನ ಶಿಖರವೇರಿದೆ ಎಕ್ಸೆಲ್ ವಿದ್ಯಾ ಸಂಸ್ಥೆ:ಡಿ.ಕೆ ಶಿವಕುಮಾರ್

Suddi Udaya

ಬೆಂಗಳೂರಿನಿಂದ ಮೈಸೂರು ನವರೆಗೆ ಬೃಹತ್ ಪಾದಯಾತ್ರೆಗೆ ಬೆಳ್ತಂಗಡಿ ಮಂಡಲ ಬಿಜೆಪಿ ಯುವಮೋರ್ಚಾ

Suddi Udaya

ಫೇಸ್‌ಬುಕ್ ಖಾತೆಯಲ್ಲಿ ಪೊಸ್ಟ್ ಹಾಕಿ ಮಾನಹಾನಿ ಆರೋಪ:ಯುವತಿ ದೂರು: ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲು

Suddi Udaya

ಧರ್ಮಸ್ಥಳ ದೇವಸ್ಥಾನದಲ್ಲಿ ಸ್ವಚ್ಛತಾ ಕಾರ್ಯ

Suddi Udaya
error: Content is protected !!