23.5 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಬೆಳಾಲು ಪ್ರೌಢ ಶಾಲೆ ವಿದ್ಯಾರ್ಥಿ ಸಂಸತ್ ಉದ್ಘಾಟನೆ

ಬೆಳಾಲು : ಬೆಳಾಲು ಶ್ರೀ ಧ.ಮಂ. ಅನುದಾನಿತ ಪ್ರೌಢ ಶಾಲೆಯಲ್ಲಿ ವಿದ್ಯಾರ್ಥಿ ಸಂಸತ್ ಉದ್ಘಾಟನಾ ಕಾರ್ಯಕ್ರಮ ನಡೆಯಿತು.

ಗೌರವ ರಾಜ್ಯಪಾಲ, ಶಾಲಾ ಮುಖ್ಯೋಪಾಧ್ಯಾಯ ಜಯರಾಮ ಮಯ್ಯ ಕಾರ್ಯಕ್ರಮ ಉದ್ಘಾಟಿಸಿ ಪ್ರಮಾಣ ವಚನ ಬೋಧಿಸಿದರು. ಬಳಿಕ ಅವರು ಮಾತನಾಡಿ, ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ತಿಳಿದುಕೊಳ್ಳಲು ಮತ್ತು ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಲು ವಿದ್ಯಾರ್ಥಿ ಸರ್ಕಾರ ಸಹಕಾರಿಯಾಗಿದೆ ಎಂದು ತಿಳಿಸಿದರು.

ವಿದ್ಯಾರ್ಥಿ ನಾಯಕ ಮೋಹನ್ ಕೃಷ್ಣ ವಾರ್ಷಿಕ ಯೋಜನೆ ಮಂಡಿಸಿದರು. ಶಿಕ್ಷಕ ಕಿರಣ್ ಕಾರ್ಯಕ್ರಮ ಸಂಘಟಿಸಿದರು. ಇತರ ಶಿಕ್ಷಕರು ಉಪಸ್ಥಿತರಿದ್ದರು. ಉಪನಾಯಕಿ ನೇತ್ರಾವತಿ ಸ್ವಾಗತಿಸಿ, ವಿರೋಧ ಪಕ್ಷದ ನಾಯಕಿ ರಕ್ಷಾ ಎನ್. ವಂದಿಸಿದರು‌. ಕಾರ್ಯದರ್ಶಿ ಮನೀಷ್ ಕಾರ್ಯಕ್ರಮ ನಿರೂಪಿಸಿದರು.

Related posts

ವಿಪರೀತ ಮಳೆಗೆ ಮಿತ್ತಬಾಗಿಲು ಶಾಂತಿಗುಡ್ಡೆಯಲ್ಲಿ ಗುಡ್ಡ ಕುಸಿತ

Suddi Udaya

ಧರ್ಮಸ್ಥಳ : ಕಾರು ಬೈಕ್ ನಡುವೆ ಅಪಘಾತ

Suddi Udaya

ಬೆಳ್ತಂಗಡಿ ಪಿ.ಎಲ್.ಡಿ ಬ್ಯಾಂಕಿನ ನಿವೃತ್ತ ಸಿಬ್ಬಂದಿ ನವೀನ್ ಕುಮಾರ್ ಕೆ.ಎನ್. ನಿಧನ

Suddi Udaya

ಮುಗೇರಡ್ಕ: ಸ್ಪಂದನ ಚಾರಿಟೇಬಲ್ ಟ್ರಸ್ಟ್ , ಬೆಂಗಳೂರು ಮತ್ತು ಜೈ ಶ್ರೀ ರಾಮ್ ಫ್ರೆಂಡ್ಸ್ ಕ್ಲಬ್ ಅಲೆಕ್ಕಿ ಇದರ ಆಶ್ರಯದಲ್ಲಿ ಮನೆ ಹಸ್ತಾಂತರ ಕಾರ್ಯಕ್ರಮ

Suddi Udaya

ಧರ್ಮಸ್ಥಳ: ಬೀಡಿನಲ್ಲಿ ಹೊಸ ಅಕ್ಕಿ ಊಟ

Suddi Udaya

ಇತ್ತೀಚೆಗೆ ನಿಧನರಾದ ವೆಂಕಪ್ಪ ಗೌಡರವರ ಮನೆಗೆ ಮೆಸ್ಕಾಂ ಅಧ್ಯಕ್ಷ ಹರೀಶ್ ಕುಮಾರ್ ಭೇಟಿ

Suddi Udaya
error: Content is protected !!