25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಶಾಸಕ ಹರೀಶ್ ಪೂಂಜರವರನ್ನು ಭೇಟಿ ಮಾಡಿದ ಸ್ಪಂದನ ಆಟೋ ಚಾಲಕ- ಮಾಲಕ ಸಂಘದ ಸದಸ್ಯರು: ರಸ್ತೆ ದುರಸ್ತಿ ಬಗ್ಗೆ ಮನವಿ, ಶಾಸಕರಿಂದ ಶೀಘ್ರ ಸರಿಪಡಿಸುವ ಭರವಸೆ

ಪುಂಜಾಲಕಟ್ಟೆ: ಸ್ಪಂದನ ಆಟೋ ಚಾಲಕ ಮಾಲಕ ಸಂಘದಿಂದ ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜರವರನ್ನು ಭೇಟಿ ಮಾಡಿ ರಸ್ತೆ ದುರಸ್ತಿ ಹಾಗೂ ಸಂಘದ ಇತರ ಬೇಡಿಕೆಗೆ ಸ್ಪಂದಿಸಬೇಕೆಂದು ಮನವಿ ಮಾಡಿದರು.

ಆಟೋ ಚಾಲಕ ಮಾಲಕ ಸಂಘದ ಬೇಡಿಕೆಗೆ ಸ್ಪಂದಿಸಿದ ಶಾಸಕರು ಪುಂಜಾಲಕಟ್ಟೆ ಪುರಿಯ‌ ರಸ್ತೆಗೆ ತಾತ್ಕಾಲಿಕ ಪರಿಹಾರ ಹಾಗೂ ಜನವರಿಯಲ್ಲಿ ಮರು ಡಾಂಬರೀಕರಣ ಮಾಡಿಸುತ್ತೇನೆಂದು ಭರವಸೆ ನೀಡಿದರು ಹಾಗೂ ಪೆರ್ಡೇ ಕ್ರಾಸ್ ನಿಂದ ಉರ್ಲಾವರೆಗಿನ ಕಾಂಕ್ರೀಟ್ ರಸ್ತೆಯ ಕೆಲಸ ಒಂದು ವಾರದಲ್ಲಿ ಆರಂಭವಾಗಲಿದೆ ಎಂದರು.

ಈ ಸಂದರ್ಭದಲ್ಲಿ ಕೆಪಿಎಸ್ ಪುಂಜಾಲಕಟ್ಟೆ ಅಧ್ಯಕ್ಷ ದಿವಾಕರ್ ಶೆಟ್ಟಿ ಕಂಗಿತ್ತಿಲು, ಸ್ಪಂದನ ಆಟೋ ಚಾಲಕರ ಮಾಲಕರ ಸಂಘದ ಗೌರವ ಅಧ್ಯಕ್ಷರಾದ ಗ್ರೇಗೊರಿ ಮಿರಂದ, ಅಧ್ಯಕ್ಷರಾದ ರಘುವೀರ್ ಬಾಳಿಗ, ಕಾರ್ಯದರ್ಶಿ ಯೋಗೀಶ್ ಧರ್ಬೇ, ಜೊತೆ ಕಾರ್ಯದರ್ಶಿ ಕಿರಣ್ ಶೆಟ್ಟಿ, ಕೋಶಾಧಿಕಾರಿ ಜಯರಾಮ್ ಗರ್ಡಾಡಿ, ಮಾಲಾಡಿ ಪಂಚಾಯತ್ ಸದಸ್ಯರಾದ ಬೆನೆಡಿಕ್ಟ್ ಮಿರಂದ ಮತ್ತು ಸಂಘದ ಸದಸ್ಯರು ಉಪಸ್ಥಿತರಿದ್ದರು.

Related posts

ಬಳಂಜ: ಅಟ್ಲಾಜೆ ಸರ್ವೋದಯ ಫ್ರೆಂಡ್ಸ್ ಕ್ಬಬ್ ನಿಂದ ಆಟೋಟ ಸ್ಪರ್ದೆ, ಸಾಧಕರಿಗೆ ಸನ್ಮಾನ, ನೂತನ ಮನೆಗೆ ಚಾಲನೆ

Suddi Udaya

ಬೆಳ್ತಂಗಡಿ ಚರ್ಚ್ ಗಳಲ್ಲಿ ಗುಡ್ ಫ್ರೈಡೆ ಆಚರಣೆ

Suddi Udaya

ಕಾಶಿಪಟ್ಣ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ

Suddi Udaya

ಕೊಯ್ಯೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನಿಂದ ಪ್ರಶಸ್ತಿ

Suddi Udaya

ಇತ್ತೀಚೆಗೆ ನಿಧನರಾದ ವೆಂಕಪ್ಪ ಗೌಡರವರ ಮನೆಗೆ ಮೆಸ್ಕಾಂ ಅಧ್ಯಕ್ಷ ಹರೀಶ್ ಕುಮಾರ್ ಭೇಟಿ

Suddi Udaya

ನಾಲ್ಕೂರು: ಜಯಂತಿ ಮಜ್ಜೇನಿಗುರಿ ಅಸೌಖ್ಯದಿಂದ ನಿಧನ

Suddi Udaya
error: Content is protected !!