September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಧರ್ಮಸ್ಥಳ ‘ಶೌರ್ಯ’ ವಿಪತ್ತು ನಿರ್ವಹಣಾ ಕಾರ್ಯಕ್ರಮದ 5ನೇ ವಾರ್ಷಿಕೋತ್ಸವದ ಪ್ರಯುಕ್ತ 91 ತಾಲೂಕು ಸಮಿತಿಗಳ ಸ್ವಯಂ ಸೇವಕರಿಗೆ ತುರ್ತು ಸ್ಪಂದನೆ ಮತ್ತು ಕೌಶಲ್ಯಾಭಿವೃದ್ಧಿ ತರಬೇತಿ

ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಧರ್ಮಸ್ಥಳ,ಜನಜಾಗೃತಿ ಪ್ರಾದೇಶಿಕ ವಿಭಾಗ ಬೆಳ್ತಂಗಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್‌ ಬೆಳ್ತಂಗಡಿ, ಗುರುವಾಯನಕೆರೆ ವತಿಯಿಂದ ಕರ್ನಾಟಕ ರಾಜ್ಯದಲ್ಲಿರುವ ‘ಶೌರ್ಯ’ ವಿಪತ್ತು ನಿರ್ವಹಣಾ ಕಾರ್ಯಕ್ರಮದ 5ನೇ ವಾರ್ಷಿಕೋತ್ಸವದ ಪ್ರಯುಕ್ತ 91 ತಾಲೂಕು ಸಮಿತಿಗಳ ಸ್ವಯಂಸೇವಕರಿಗೆ ಹಮ್ಮಿಕೊಳ್ಳಲಾಗುವ ತುರ್ತು ಸ್ಪಂದನೆ ಮತ್ತು ಕೌಶಲ್ಯಾಭಿವೃದ್ಧಿ ತರಬೇತಿಗೆ ಚಾಲನೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೇಂದ್ರ ಕಚೇರಿ ಧರ್ಮಸ್ಥಳದಲ್ಲಿ ಜೂ.27 ರಂದು ನೀಡಲಾಯಿತು.

ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಡೆಯವರು ಮಾತನಾಡಿ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಆಪತ್ತುಗಳು ಬಂದಾಗ ಎದುರಿಸಲು ನಮ್ಮ ಶೌರ್ಯ ತಂಡವು ಸೇವಾ ಮನೋಭಾವನೆಯಿಂದ ಸಜ್ಜಾಗಿದೆ. ಸಾಹಸ, ಧೈರ್ಯದಿಂದ ಶೌರ್ಯ ತಂಡ ಉತ್ತಮವಾಗಿ ಕೆಲಸವನ್ನು ಸಮಾಜದಲ್ಲಿ ಮಾಡುತ್ತಿದೆ ಎಂದರು.

ಟೀಮ್‌ ಕಮಾಂಡರ್, ಎನ್.ಡಿ.ಆರ್.ಎಫ್, ಗುಂಟೂರು, ಆಂಧ್ರಪ್ರದೇಶ ಇನ್‌ಸ್ಪೆಕ್ಟರ್ ಶಾಂತಿಲಾಲ್ ಜಟಿಯಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಶ್ರೀ ಕ್ಷೇತ್ರ ಧರ್ಮಸ್ಥಳದ ಸಂಘಟನೆಗಳು ಸಮಾಜಕ್ಕೆ ಶಕ್ತಿಯಾಗಿ ಕೆಲಸ ಮಾಡುತ್ತಿದೆ.ಶೌರ್ಯ ವಿಪತ್ತು ನಿರ್ವಹಣಾ ಘಟಕದಿಂದ ಜನಸೇವೆ ನಡೆಯುತ್ತಿದೆ ಎಂದರು.

ಎಸ್.ಕೆ.ಡಿ.ಆರ್.ಡಿ.ಪಿ.ಬಿ.ಸಿ.ಟ್ರಸ್ಟ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅನಿಲ್ ಕುಮಾರ್ ಎಸ್.ಎಸ್ ಮಾತನಾಡಿ ಶೌರ್ಯ ವಿಪತ್ತು ಕಾರ್ಯಕ್ರಮಕ್ಕೆ 5 ವರ್ಷ ತುಂಬುತ್ತಿದೆ.ವಿಪತ್ತು ಸಂಭವಿಸಿದಾಗ ತರಭೇತಿ ತಂಡ ಘಟನಾ ಸ್ಥಳಕ್ಜೆ ಬರುವಾಗ ಸಮಯ ಹೆಚ್ಚಾಗುತ್ತದೆ. ಈ ಬಗ್ಗೆ ಸಮಾಜದ ಉನ್ನತಿಗೆ ಶಾಶ್ವತ ಪರಿಹಾರ ನೀಡುವ ಸದುದ್ದೇಶದಿಂದ ಖಾವಂದರು ಸಂಕಲ್ಪ ಮಾಡಿ ಶೌರ್ಯ ವಿಪತ್ತು ನಿರ್ವಹಣಾ ತಂಡ ರಚನೆ ಮಾಡಿದ್ದಾರೆ ಎಂದರು.

ಜಿಲ್ಲಾ ವಿಪತ್ತು ನಿರ್ವಹಣಾ ಕೋಶ, ದ.ಕ. ಜಿಲ್ಲೆ ವಿಪತ್ತು ನಿರ್ವಹಣಾ ಅಧಿಕಾರಿ ವಿಜಯ್ ಪೂಜಾರ್,ಎನ್‌ಡಿ.ಆರ್.ಎಫ್ ವಿನೋಧ್ ಆರ್ಯ,ಯೋಜನಾಧಿಕಾರಿಗಳಾದ ಯಶೋಧರ ಕೆ,ಅಶೋಕ ಬಿ ಉಪಸ್ಥಿತರಿದ್ದರು.

ವಿಪತ್ತು ಸಾಧಕರಿಗೆ ಪ್ರಶಸ್ತಿಯ ಗೌರವ: ಶೌರ್ಯ ವಿಪತ್ತು ಸಾಧಕ ಪ್ರಶಸ್ತಿಯನ್ನು ರವೀಂದ್ರ ಉಜಿರೆ, ಅವಿನಾಶ್ , ದಿನೇಶ್ ಶೆಟ್ಟಿ ನಾರಾವಿ, ವಿಶ್ವನಾಥ್ ತೆಂಕಕಾರಂದೂರು, ಸಾಧಕ ಸಂಯೋಜಕಿ ಪ್ರಶಸ್ತಿಯನ್ನು ಕು.ವಸಂತಿ, ಸವಿತಾ ಪಿರೇರಾ ಪಡೆದರು. ಸಾಧಕ ಘಟಕ ಪ್ರಶಸ್ತಿಯನ್ನು ಶಿಶಿಲ- ಅರಸಿನಮಕ್ಕಿ, ಮಡಂತ್ಯಾರು ಘಟಕ ಪಡೆಯಿತು.

ಪ್ರಾದೇಶಿಕ ನಿರ್ದೇಶಕರು ವಿವೇಕ್ ವಿ. ಪ್ಯಾಸ್ ಸ್ವಾಗತಿಸಿದರು.ಬೆಳ್ತಂಗಡಿ ಮತ್ತು ಗುರುವಾಯನಕೆರೆ ಯೋಜನಾ ವ್ಯಾಪ್ತಿಯ ಸ್ವಯಂಸೇವಕರು ಸಹಕರಿಸಿದರು.

Related posts

ಉದ್ಯಮಿ ಸುರೇಶ್ ದೇವಾಡಿಗರವರು ತೋಟತ್ತಾಡಿ ಶ್ರೀ ಉಳ್ಳಾಲ್ತಿ ಭಜನಾ ಮಂದಿರದ ಭಜನಾ ತಂಡದವರಿಗೆ ನೀಡಿದ ಸಮವಸ್ತ್ರದ ಬಿಡುಗಡೆ

Suddi Udaya

ವೇಣೂರು: ಭ| ಬಾಹುಬಲಿಸ್ವಾಮಿ ಮೂರ್ತಿಗೆ ಕೊನೆಯ ಮಹಾಮಸ್ತಕಾಭಿಷೇಕ

Suddi Udaya

ಶ್ರೀ ಕ್ಷೇತ್ರ ಸೌತಡ್ಕ ಮಹಾಗಣಪತಿ ದೇವಾಲಯದ ಗೋಶಾಲೆಯಲ್ಲಿ ಗೋಪೂಜೆ

Suddi Udaya

ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಹಿಳಾ ಐ.ಟಿ.ಐ.ಯಲ್ಲಿ ವಿಶ್ವ ಮಹಿಳಾ ದಿನಾಚರಣೆ

Suddi Udaya

ಕಳೆಂಜ ಸದಾಶಿವೇಶ್ವರ ದೇವಸ್ಥಾನ ಕಳೆಂಜದ ಸಭಾಭವನಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ರೂ. 2 ಲಕ್ಷ ಅನುದಾನ

Suddi Udaya

ಕಬ್ಬಡಿ ಆಟಗಾರ ಪ್ರೀತಮ್ ಶೆಟ್ಟಿ ಹೃದಯಾಘಾತದಿಂದ ನಿಧನ

Suddi Udaya
error: Content is protected !!