25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಜು.3 ರಂದು ಬೆಳ್ತಂಗಡಿ ರೋಟರಿ ಕ್ಲಬ್ ನೂತನ ಪದಾಧಿಕಾರಿಗಳ ಪದಪ್ರದಾನ ಸಮಾರಂಭ: ಅಧ್ಯಕ್ಷ ಪೂರನ್ ವರ್ಮ ಮತ್ತು ತಂಡದ ಸಾಧನೆಗೆ ರೋಟರಿ ಕ್ಲಬ್ ಬೆಳ್ತಂಗಡಿಗೆ “ಡೈಮಂಡ್ ಕ್ಲಬ್ ಪ್ರಶಸ್ತಿ”ಯ ಗೌರವ: 2025-26 ನೇ ಸಾಲಿನ ಅಧ್ಯಕ್ಷರಾಗಿ ಪ್ರಕಾಶ್ ಪ್ರಭು, ಕಾರ್ಯದರ್ಶಿಯಾಗಿ ಡಾ.ಎಂ.ಎಂ ದಯಾಕರ್ ಆಯ್ಕೆ

ಬೆಳ್ತಂಗಡಿ:ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರ ಆರ್ಶಿವಾದ ಮತ್ತು ಬೆಳ್ತಂಗಡಿ ರೋಟರಿ ಕ್ಲಬ್ ನ ಎಲ್ಲಾ ಸದಸ್ಯರುಗಳ ಸಹಕಾರದಿಂದ ಈ ವರ್ಷ ಅತ್ಯುತ್ತಮ ಸೇವಾ ಕಾರ್ಯಗಳನ್ನು ನಿರ್ವಹಿಸಲು ಸಾಧ್ಯವಾಯಿತು.ರೋಟರಿ ಜಿಲ್ಲೆಯ ದೊಡ್ಡ ಕ್ಲಬ್ ಗಳ ವಿಭಾಗದಲ್ಲಿ ಡೈಮಂಡ್ ಪ್ಲಸ್ ಪ್ರಶಸ್ತಿ ಪಡೆದಿರುವುದು ಅತ್ಯಂತ ಸಂತೋಷ ತಂದಿದೆ ಎಂದು ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಪೂರನ್ ವರ್ಮ ತಿಳಿಸಿದರು.

ಅವರು ಜೂ.28 ರಂದು ಬೆಳ್ತಂಗಡಿ ರೋಟರಿ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ತಾಲೂಕಿನಲ್ಲಿನ ಬೇರೆ ಬೇರೆ ಅಗತ್ಯತೆಗಳನ್ನು ಅರಿತು ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಇಂತಹ ಕಾರ್ಯಕ್ರಮಗಳನ್ನು ಯೋಜನೆಗೆ ತರಲು ಸಹಕಾರ ನೀಡಿದ ಬೆಳ್ತಂಗಡಿಯ ಅನೇಕ ಸಂಘ ಸಂಸ್ಥೆಗಳು, ಬೆಂಗಳೂರಿನ ಸಿಎಸ್‌ಆ‌ರ್ ಪಾರ್ಟ್ನರ್ ಕಂಪೆನಿಗಳು ಮತ್ತು ಇಂದಿರಾನಗರ ಕ್ಲಬ್ ಗೆ ಧನ್ಯವಾದಗಳನ್ನು ತಿಳಿಸುತ್ತೇನೆ. ಬಂದಿರುವ ಈ ಎಲ್ಲಾ ಪ್ರಶಸ್ತಿಗಳು ಬೆಳ್ತಂಗಡಿ ರೋಟರಿ ಕ್ಲಬ್ ನ ಸರ್ವ ಸದಸ್ಯರ ಪರಿಶ್ರಮದ ಫಲವಾಗಿದೆ ಎಂದರು.

ನಿಯೋಜಿತ ಅಧ್ಯಕ್ಷ ಪ್ರಕಾಶ್ ತುಳಪುಳೆ ಮಾತನಾಡಿ ಕಳೆದ ವರ್ಷದ ಅಧ್ಯಕ್ಷ ಪೂರನ್ ವರ್ಮ ಮತ್ತು ತಂಡ ಅತ್ಯುತ್ತಮ ಸೇವಾ ಕಾರ್ಯಕ್ರಮಗಳನ್ನು ಆಯೋಜಿಸಿ ಅತೀ ದೊಡ್ಡ ಗೌರವವಾದ ಡೈಮಂಡ್ ಪ್ಲಸ್ ಅವಾರ್ಡ್ ಪಡೆದಿರುವುದು ಹೆಮ್ಮೆಯ ಸಂಗತಿಯಾಗಿದೆ. ಮುಂದಿನ ನನ್ನ ಅವದಿಯಲ್ಲಿ ಹಲವಾರು ಸೇವಾ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಪ್ರಯತ್ನ ಮಾಡಲಿದ್ದೇವೆ. ಜು. 3ರಂದು ಪದಪ್ರದಾನ ಸಮಾರಂಭ ನಡರಯಲಿದೆ ಎಂದರು.

ರೋಟರಿ ಕ್ಲಬ್ ಕಾರ್ಯದರ್ಶಿ ಸಂದೇಶ್ ರಾವ್, ನಿಯೋಜಿತ ಕಾರ್ಯದರ್ಶಿ ಡಾ.ಎಂ.ಎಂ ದಯಾಕರ್ ಉಪಸ್ಥಿತರಿದ್ದರು.

Related posts

ಹಿರಿಯ ವ್ಯಂಗ್ಯಚಿತ್ರ ಕಲಾವಿದ ಬಿ. ವಿಲ್ಸನ್‌ ರಿಂದ ಹುಬ್ಬಳ್ಳಿಯಲ್ಲಿ ವ್ಯಂಗ್ಯಚಿತ್ರ ತರಬೇತಿ

Suddi Udaya

ಡಿ.18: ಬೆಳ್ತಂಗಡಿ ರೋಟರಿ ಕ್ಲಬ್‌ಗೆ ಜಿಲ್ಲಾ ಗವರ್ನರ್ ಭೇಟಿ : ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಶಿಲಾನ್ಯಾಸ- ಸೇವಾ ಯೋಜನೆಗಳ ಹಸ್ತಾಂತರ

Suddi Udaya

ಮುಂಡಾಜೆ : ಕುರುಡ್ಯ ಎಂಬಲ್ಲಿ ಗುಡ್ಡಕ್ಕೆ ಬೆಂಕಿ

Suddi Udaya

ಬೆಳ್ತಂಗಡಿ ಬೋಧಕರ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾಗಿ ಕಿರಣ್ ಕುಮಾರ್ ಹಾಗೂ ಉಪಾಧ್ಯಕ್ಷರಾಗಿ ಗೋಪಾಲಕೃಷ್ಣ

Suddi Udaya

ಎಸ್.ಎಸ್.ಎಲ್.ಸಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿ ಅಭಿಷೇಕ್ ಗೆ ಬೆಳ್ತಂಗಡಿ ವಕೀಲರ ಸಂಘದಿಂದ ಸನ್ಮಾನ

Suddi Udaya

ವೇಣೂರು: ದಿ. ಸಂಜೀವ ಪಾಣೂರುರವರ ಶ್ರದ್ಧಾಂಜಲಿ ಸಭೆ

Suddi Udaya
error: Content is protected !!