ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಟಿಪ್ಪರ್ ವಾಹನದ ಬಾಡಿಗೆ ಕೇಳಲು ಹೋದವನ ಮೇಲೆ ಹಲ್ಲೆ: ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲು

ಧರ್ಮಸ್ಥಳ : ಟಿಪ್ಪರ್ ವಾಹನದ ಬಾಡಿಗೆ ಹಣ ಕೇಳಲು ಹೋದವನ ಮೇಲೆ ಸೋಡಾ ಬಾಟಲ್ ಬಿಸಾಕಿ ಕೊಲೆಗೆ ಯತ್ನಿಸಿದ ಘಟನೆ ಚಾರ್ಮಾಡಿಯಲ್ಲಿ ನಡೆದಿದೆ. ಪ್ರಕರಣ ಸಂಬಂಧ ಇಬ್ಬರು ಆರೋಪಿಗಳ ವಿರುದ್ಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಳ್ತಂಗಡಿಯಲ್ಲಿ ಆರು ತಿಂಗಳ ಹಿಂದೆ ಕೆಲಸ ಮಾಡಿದ್ದ ಟಿಪ್ಪರ್ ವಾಹನದ ಬಾಡಿಗೆಯ 65 ಸಾವಿರ ರೂಪಾಯಿ ಹಣ ಬಾಡಿಗೆಗೆ ಕಳುಹಿಸಿದ್ದ ಮಧ್ಯವರ್ತಿ ಚಿಬಿದ್ರೆ ಗ್ರಾಮದ ಕಕ್ಕಿಂಜೆ ನಿವಾಸಿ ಮಹಮ್ಮದ್ ತೌಸಿಫ್ ಗೆ ಚಾರ್ಮಾಡಿ ಗ್ರಾಮದ ಬೀಟಿಗೆ ನಿವಾಸಿ ರಹೀಂ ನೀಡಲು ಬಾಕಿ ಇದ್ದು ಇದಕ್ಕಾಗಿ ಚಾರ್ಮಾಡಿ ಗ್ರಾಮದ ಬೀಟಿಗೆ ಜಂಕ್ಷನ್ ನಲ್ಲಿ ರಹೀಂ ಮತ್ತು ಮಹಮ್ಮದ್ ಫೈಯಾಜ್ ಇದ್ದ ಸ್ಥಳಕ್ಕೆ ಟಿಪ್ಪರ್ ಮಾಲಕ ಅರೀಫ್ ಜೊತೆ ಮಹಮ್ಮದ್ ತೌಸಿಫ್ ಜೂ.27 ರಂದು ಹಣ ಕೇಳಿದ್ದರು. ಈ ನಡುವೆ ರಹೀಂ ಮತ್ತು ಮಹಮ್ಮದ್ ಫೈಯಾಜ್ ಸೇರಿ ತೌಸಿಫ್ ಗೆ ಬೆದರಿಕೆ ಹಾಕಿ ಹಲ್ಲೆ ಮಾಡಿ ಬಳಿಕ ಮಹಮದ್ ತೌಸಿಫ್ ಗೆ ಪಕ್ಕದಲ್ಲಿದ್ದ ಸೋಡಾ ಬಾಟಲ್ ತೆಗೆದುಕೊಂಡು ರಹೀಂ ಬಿಸಾಕಿದ್ದಾನೆ. ಇದರಿಂದ ಮಹಮ್ಮದ್ ತೌಸಿಫ್ ಕಣ್ಣಿಗೆ ಗಂಭೀರ ಗಾಯವಾಗಿದೆ‌. ಇದರಿಂದ ತಕ್ಷಣ ಸ್ಥಳೀಯರೆಲ್ಲ ಸೇರಿ ಉಜಿರೆ ಖಾಸಗಿ ಆಸ್ಪತ್ರೆಗೆ ಸಾಗಿದ್ದರು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡುತ್ತಿದ್ದಾರೆ.

ಈ ಘಟನೆ ಬಗ್ಗೆ ಧರ್ಮಸ್ಥಳ ಪೊಲೀಸರು ಆಸ್ಪತ್ರೆಗೆ ತೆರಳಿ ಗಾಯಗೊಂಡ ಮಹಮ್ಮದ್ ತೌಸಿಫ್ ವಿಚಾರಿಸಿ ಮಹಮ್ಮದ್ ತೌಸಿಫ್ ಸ್ನೇಹಿತ ನೀಡಿದ ದೂರು ಮೇರೆಗೆ 109,118(2),115(2),351(2),352 r/w 3(5) BNS ಅಡಿಯಲ್ಲಿ ಚಾರ್ಮಾಡಿ ಗ್ರಾಮದ ಬೀಟಿಗೆ ನಿವಾಸಿಗಳಾದ ರಹೀಂ ಮತ್ತು ಮಹಮ್ಮದ್ ಫೈಯಾಜ್ ವಿರುದ್ಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಜೂ.27 ರಂದು ರಾತ್ರಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ಮಂಗಳೂರು ಮಹಮ್ಮದ್ ತೌಸಿಫ್ ದಾಖಲಾದ ಆಸ್ಪತ್ರೆಗೆ ಆರೋಪಿಗಳಾದ ರಹೀಂ ಮತ್ತು ಮಹಮ್ಮದ್ ಫೈಯಾಜ್ ಕೂಡ ದಾಖಲಾಗಿ ನಮಗೆ ಮಹಮ್ಮದ್ ತೌಸಿಫ್ ಹಲ್ಲೆ ನಡೆಸಿದ್ದಾರೆಂದು ಧರ್ಮಸ್ಥಳ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಅದರಂತೆ ಧರ್ಮಸ್ಥಳ ಪೊಲೀಸರು ಜೂ. 28 ರಂದು ಬೆಳಗ್ಗೆ ಆಸ್ಪತ್ರೆಗೆ ತೆರಳಿ ಮಾಹಿತಿ ಕಲೆ ಹಾಕಿ ತನಿಖೆ ನಡೆಸುತ್ತಿದ್ದಾರೆ.

Related posts

ಪಡಂಗಡಿ: ನಿಶಾಂತ್ ಸೇವಾ ಬ್ರಿಗೇಡ್ ಹಾಗೂ ವೆನ್ಲಾಕ್ ಆಸ್ಪತ್ರೆಯ ರಕ್ತ ನಿಧಿ ಕೇಂದ್ರದ ವತಿಯಿಂದ ರಕ್ತದಾನ ಶಿಬಿರ

Suddi Udaya

ನಾಪತ್ತೆಯಾಗಿದ್ದ ಮಾಚಾರು ನಿವಾಸಿ ಆಟೋ ಚಾಲಕ ಸುಧಾಕರ್ ಮೃತದೇಹ ನೆಲ್ಲಿಕಾರ್ ಕಾಡಿನಲ್ಲಿ ನೇಣು ಹಾಕಿಕೊಂಡ ರೀತಿಯಲ್ಲಿ ಪತ್ತೆ

Suddi Udaya

ಜಾಗ ಮಾರಾಟದ ಅಗ್ರಿಮೆಂಟ್ ಮಾಡಿ ರೂ.45ಲಕ್ಷ ವಂಚನೆ; ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ‌ ದಾಖಲು

Suddi Udaya

ಶಿಬಾಜೆ : ಹಾವುಗಳ ಗುರುತಿಸುವಿಕೆ ಮುನ್ನೆಚ್ಚರಿಕೆ ಮತ್ತು ಪ್ರಥಮ ಚಿಕಿತ್ಸೆ ಮಾಹಿತಿ ಕಾರ್ಯಕ್ರಮ

Suddi Udaya

ಗುರುವಾಯನಕೆರೆ ಶ್ರೀ ಕ್ಷೇ.ಧ.ಗ್ರಾ. ಯೋಜನೆ ಬಿ ಸಿ ಟ್ರಸ್ಟ್ ವತಿಯಿಂದ ಟೈಲರಿಂಗ್ ತರಬೇತಿ ಕಾರ್ಯಕ್ರಮ

Suddi Udaya

ನೆಲ್ಯಾಡಿ ಸಂತ ಅಲ್ಫೋನ್ಸ ವಾರ್ಷಿಕ ಜಾತ್ರಾ ಮಹೋತ್ಸವ ಸಂಪನ್ನ

Suddi Udaya
error: Content is protected !!