ಪೆರ್ಲ: ಯಕ್ಷ ದ್ರುವ ಪಟ್ಲ ಫೌಂಡೇಶನ್ ಮಂಗಳೂರು ಇದರ ಬೆಳ್ತಂಗಡಿ ತಾಲೂಕು ಘಟಕದ ವತಿಯಿಂದ ಸರ್ಕಾರಿ ಪ್ರೌಢ ಶಾಲೆ ಪೆರ್ಲ ಬೈಪಾಡಿ ಇಲ್ಲಿ ಜೂ. 27 ರಂದು ವಿದ್ಯಾರ್ಥಿಗಳಿಗೆ ಯಕ್ಷಗಾನ ನಾಟ್ಯ ತರಬೇತಿಯ ಉದ್ಘಾಟನಾ ಕಾರ್ಯಕ್ರಮ ನೆರವೇರಿತು.

ಸಮಾರಂಭದ ಅಧ್ಯಕ್ಷತೆಯನ್ನು ಶಾಲಾ ಮುಖ್ಯೋಪಾಧ್ಯಾಯ ಬಾಲಕೃಷ್ಣ ಕೆ. ವಹಿಸಿದ್ದು , ಉದ್ಘಾಟನೆಯನ್ನು ತಾಲ್ಲೂಕು ಘಟಕದ ಅಧ್ಯಕ್ಷ ಸುರೇಶ್ ಶೆಟ್ಟಿ ಉದ್ಘಾಟಿಸಿ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಗೌರವ ಸಲಹೆಗಾರರಾದ ದೇವರಾಜರು ಉಪಸ್ಥಿತರಿದ್ದರು. ಕಲಿಕಾ ಗುರುಗಳಾದ ದೇವಿ ಪ್ರಸಾದ್ , ಶಿಕ್ಷಕರುಗಳಾದ, ಮಹೇಶ್ ಎ, ಅಬ್ದುಲ್ ನಜೀರ್, ಮೃತ್ಯುಂಜಯ, ಭಾಷಿಣಿ ಉಪಸ್ಥಿತರಿದ್ದರು.
ವಿಜಯ ಕುಮಾರ್ ಎಂ ಸ್ವಾಗತಿಸಿ, ವಿವೇಕಾನಂದ ಗೌಡ ವಂದಿಸಿದರು. ಗಣಿತ ಶಿಕ್ಷಕಿ ಶ್ರೀಮತಿ ಮೇಲೆ ನಿರೂಪಿಸಿದರು.











