37.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಶ್ರೀ ಧ.ಮಂ ಪ.ಪೂ ಕಾಲೇಜಿನಲ್ಲಿ ” ಭಿತ್ತಿಪತ್ರಿಕೆ ಅನಾವರಣ “

ಉಜಿರೆ: ‘ ಭಿತ್ತಿ ಪತ್ರಿಕೆ ಆಕರ್ಷಕವಾಗಿ ಕಾಣಬೇಕಾದರೆ ಅದರಲ್ಲಿ ಸೃಜನಾತ್ಮಕತೆ ಇರಬೇಕು ಮತ್ತು ವೈಶಿಷ್ಟ್ಯಪೂರ್ಣವಾದ ಮಾಹಿತಿಯನ್ನು ಒಳಗೊಂಡಿರಬೇಕು. ವಿದ್ಯಾರ್ಥಿಗಳ ಕೌಶಲ್ಯ ಅರಿಯಲು ಇದೊಂದು ಸಾಧನವಾಗಿದೆ ‘ ಎಂದು ಉಜಿರೆಯ ಶ್ರೀ ಧ. ಮಂ. ಕಾಲೇಜು ( ಸ್ವಾಯತ್ತ ) ಇಲ್ಲಿನ ಬಿ.ವೋಕ್, ಪೂರೈಕೆ ಸರಪಳಿ ನಿರ್ವಹಣೆ ವಿಭಾಗದ ಮುಖ್ಯಸ್ಥ ಅಶ್ವಿತ್ ಹೆಚ್ ಆರ್ ಅವರು ಹೇಳಿದರು..

ಅವರು ಉಜಿರೆಯ ಶ್ರೀ ಧ. ಮಂ. ಪದವಿ ಪೂರ್ವಕಾಲೇಜಿನ ಎಲ್ಲ ವಿಭಾಗಗಳ ಹಾಗೂ ಕ್ಲಬ್ ಗಳ ಭಿತ್ತಿಪತ್ರಿಕೆಗಳನ್ನು ಅನಾವರಣಗೊಳಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಅವರು ವಿದ್ಯಾರ್ಥಿಗಳಿಗೆ ಸ್ಪೂರ್ತಿದಾಯಕವಾದ, ಮಾಹಿತಿಪೂರ್ಣವಾದ ಸಂಗತಿಗಳನ್ನು ಮತ್ತು ಸಾಧಕರ ವಿಷಯಗಳನ್ನು ಪ್ರಸ್ತುತಪಡಿಸಿದರು.

ಕಾಲೇಜಿನ ಪ್ರಾಚಾರ್ಯರಾದ ಪ್ರಮೋದ್ ಕುಮಾರ್ ಬಿ. ಇವರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಉಳಿದವರಿಗಿಂತ ಭಿನ್ನವಾಗಿ ಮಾಡುವ ಸೃಜನಾತ್ಮಕ ಕಾರ್ಯಗಳು ಯಾವತ್ತೂ ಹೆಚ್ಚಿನ ಯಶಸ್ಸನ್ನು ಪಡೆಯುತ್ತವೆ ಎಂದು ಸಾಧಕರ ಉದಾಹರಣೆ ಸಹಿತ ತಿಳಿಸಿದರು.

ಉಪ ಪ್ರಾಂಶುಪಾಲರಾದ ಡಾ. ರಾಜೇಶ್ ಬಿ ಹಾಗೂ ಕಾರ್ಯಕಾರಿ ಸಮಿತಿ ಮುಖ್ಯಸ್ಥೆ ಶ್ರೀಮತಿ ಬೇಬಿ ಎನ್., ಸದಸ್ಯರಾದ ಸವಿತಾ ಎಸ್., ಮನೋಹರ್ ಶೆಟ್ಟಿ, ಸ್ಮಿತಾ ಬೇಡೇಕರ್, ಮಹಾವೀರ್ ಜೈನ್, ಸುಪ್ರೀತಾ ಪಡಿವಾಳ್ ಹಾಗೂ ಪ್ರಾಧ್ಯಾಪಕ ವೃಂದ ಉಪಸ್ಥಿತರಿದ್ದರು.

ವಿದ್ಯಾರ್ಥಿನಿ ಹಂಸಿನಿ ಭಿಡೆ ಕಾರ್ಯಕ್ರಮ ನಿರೂಪಿಸಿ, ಪರಿಚಯ ಮಾಡಿದರು. ನಿಜ ಕುಲಾಲ್ ಸ್ವಾಗತಿಸಿ , ಧನ್ಯವಾದ ಅರ್ಪಿಸಿದರು.

Related posts

ಮಚ್ಚಿನ: ಕುತ್ತಿನ ಸರಕಾರಿ ಶಾಲೆಯಲ್ಲಿ ಸ್ವಚ್ಛತಾ ಕಾರ್ಯಕ್ರಮ

Suddi Udaya

ತ್ರೋಬಾಲ್ ಪಂದ್ಯಾಟ: ಉರುವಾಲು ಶ್ರೀ ಭಾರತೀ ಆಂ.ಮಾ. ಪ್ರೌಢ ಶಾಲಾ ವಿದ್ಯಾರ್ಥಿಗಳ ತಂಡ ತಾಲೂಕು ಮಟ್ಟಕ್ಕೆ ಆಯ್ಕೆ

Suddi Udaya

ದೇವಸ್ಥಾನದ ಅಭಿವೃದ್ದಿಗೆ ಪ್ರಸಾದಂ ಯೋಜನೆಯಡಿಯಲ್ಲಿ ಅನುದಾನ ಒದಗಿಸುವಂತೆ ಕೇಂದ್ರ ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ರವರಿಗೆ ಶಾಸಕ ಹರೀಶ್ ಪೂಂಜ ಮನವಿ

Suddi Udaya

ಅಳದಂಗಡಿ: ನೊಚ್ಚ ಮನೆತನದ ಕುವರಿ ನಿಯತಿ ಅಮೇರಿಕಾದಲ್ಲಿ ಯಕ್ಷಗಾನ ನಾಟ್ಯ ಪ್ರದರ್ಶನ

Suddi Udaya

ಕೊಯ್ಯೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಾಧನೆಗೆ ಪ್ರೋತ್ಸಾಹಕ ಪ್ರಶಸ್ತಿಯ ಗೌರವ

Suddi Udaya

ಬೆಳ್ತಂಗಡಿ: 51ನೇ ವರ್ಷದ ಶ್ರೀ ಅಯ್ಯಪ್ಪ ಸ್ವಾಮಿಯ ದೀಪೋತ್ಸವ ಉದ್ಘಾಟನೆ

Suddi Udaya
error: Content is protected !!