25.8 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಉಜಿರೆ ಅನುಗ್ರಹ ಶಾಲಾ ಪಾಲಕ ಪೋಷಕರ ಸಭೆ ಹಾಗೂ ಪ್ರತಿಭಾ ಪುರಸ್ಕಾರ

ಉಜಿರೆ: ಅನುಗ್ರಹ ಶಿಕ್ಷಣ ಸಂಸ್ಥೆಯ ಪಾಲಕ ಪೋಷಕರ ಸಭೆಯು ಶಾಲಾ ಸಂಚಾಲಕರಾದ ವಂ ಫಾ ಅಬೆಲ್ ಲೋಬೊ ಅವರ ಅಧ್ಯಕ್ಷತೆಯಲ್ಲಿ ಶಾಲಾ ಸಭಾಭವನದಲ್ಲಿ ನಡೆಯಿತು.

ಶಾಲಾ ಸಂಚಾಲಕರು ವೇದಿಕೆಯಲ್ಲಿರುವ ಅತಿಥಿಗಳ ಜೊತೆಗೂಡಿ ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಂಘದ ವಾರ್ಷಿಕ ವರದಿಯನ್ನು ಸಹ ಶಿಕ್ಷಕ ರವಿಕುಮಾರ್ ಮಂಡಿಸಿದರು. ಶಾಲೆಯ ಪ್ರಾಂಶುಪಾಲರಾದ ವಂ ಫಾ ವಿಜಯ್ ಲೋಬೊ ಪ್ರಾಥಮಿಕವಾಗಿ ಮಾತನಾಡಿ ಶಾಲೆಯ ಶೈಕ್ಷಣಿಕ ಪ್ರಗತಿಗೆ ಸರ್ವರ ಸಹಕಾರ ಕೋರಿದರು.

ನಂತರ ಕಳೆದ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಪಬ್ಲಿಕ್ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನ ಪ್ರಾಂಶುಪಾಲರಾದ ವಂ ಫಾ ಆಂಟೆನಿ ಪ್ರಕಾಶ್ ಮೊಂತೆರೊ ಅವರು ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ವಿದ್ಯಾರ್ಥಿಯ ಬೌದ್ಧಿಕ ಮಾನಸಿಕ ಆಧ್ಯಾತ್ಮಿಕ ಬೆಳವಣಿಗೆಗೆ ಪೋಷಕರ ಪಾತ್ರ ಬಹಳ ಮುಖ್ಯವಾದದ್ದು, ಪೋಷಕರಿಗೆ ಶಿಸ್ತು ಸಂಯಮಗಳಿರಬೇಕು ಆಗ ಮಕ್ಕಳು ಸಮಾಜದ ಉತ್ತಮ ವ್ಯಕ್ತಿಯಾಗಿ ಹೊರಹೊಮ್ಮಲು ಸಾಧ್ಯಎಂಬ ವಿಷಯದ ಬಗ್ಗೆ ಮಾರ್ಗದರ್ಶನ ನೀಡಿದರು.

ಶಿಕ್ಷಕ ರಕ್ಷಕ ಸಂಘದ ಹಾಲಿ ಉಪಾಧ್ಯಕ್ಷ ಉಮೇಶ್ ಶೆಟ್ಟಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಶಿಕ್ಷಕ ರಕ್ಷಕ ಸಂಘಕ್ಕೆ ನೂತನ ಸದಸ್ಯರನ್ನು ಆಯ್ಕೆ ಮಾಡಿ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷ ಸ್ಥಾನದಿಂದ ಶಾಲಾ ಸಂಚಾಲಕರು ಮಾತನಾಡಿ ಎಲ್ಲರಿಗೂ ಶುಭವನ್ನು ಕೋರಿದರು. ವೇದಿಕೆಯಲ್ಲಿ ಚರ್ಚ್ ಆಡಳಿತ ಮಂಡಳಿ ಸದಸ್ಯರಾದ ಸ್ಟಾನಿ ಪಿಂಟೋ , ರೋಶನ್ ಡಿಸೋಜ, ಶಿನು, ಉಮೇಶ್ ಶೆಟ್ಟಿ ಉಪಸ್ಥಿತರಿದ್ದರು. ಗಣೇಶ್ ಇವರ ನಿರೂಪಣೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಸಂತ ಹೆಗ್ಡೆ ಸ್ವಾಗತಿಸಿ, ಶ್ರೀಮತಿ ಐರಿನ್ ರೊಡ್ರಿಗಸ್ ವಂದಿಸಿದರು.

Related posts

ಪಂಜಾಬ್ ನಲ್ಲಿ ಅಕಾಂಕ್ಷ ಆತ್ಮಹತ್ಯೆ ಪ್ರಕರಣ: ಧರ್ಮಸ್ಥಳದ ಬೋಳಿಯಾರು ಮನೆಗೆ ತಲುಪಿದ ಮೃತದೇಹ

Suddi Udaya

ಉಜಿರೆ ಎಸ್.ಡಿ.ಎಂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ‘ಸ್ವಚ್ಛತಾ ಹಿ ಸೇವಾ’ ಸಪ್ತಾಹ ಕಾರ್ಯಕ್ರಮ

Suddi Udaya

ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದ ಮಗು ತೋಟದ ಕೆರೆಗೆ ಬಿದ್ದು ಮೃತ್ಯು

Suddi Udaya

ಕರಾಟೆ ಸ್ಪರ್ಧೆ : ಶ್ರೀ ಧ.ಮಂ. ಪಾಲಿಟೆಕ್ನಿಕ್ ಕಾಲೇಜು ವಿದ್ಯಾರ್ಥಿಗೆ ಚಿನ್ನದ ಪದಕ

Suddi Udaya

ಉಡುಪಿ ಜಿಲ್ಲಾ ಸಮಾವೇಶ 2024 ಮತ್ತು 26ನೇ ಉಚಿತ ವೈದ್ಯಕೀಯ ತಪಾಸಣೆ ಮಾಹಿತಿ ಹಾಗೂ ಜಾಗೃತಿ ಶಿಬಿರ

Suddi Udaya

ಬೆಳ್ತಂಗಡಿ: ಚಿನ್ನಯ್ಯನಿಗೆ ಜಿಲ್ಲಾ ಕೋರ್ಟ್ ನಲ್ಲಿ ಜಾಮೀನು ಮಂಜೂರು

Suddi Udaya
error: Content is protected !!