25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿಶಾಲಾ ಕಾಲೇಜು

ಬೆಳ್ತಂಗಡಿ ಗುರುದೇವ ಕಾಲೇಜಿನಲ್ಲಿ ಮಾದಕ ದ್ರವ್ಯ ವಿರೋಧಿ ದಿನಾಚರಣೆ

ಬೆಳ್ತಂಗಡಿ : ಬೆಳ್ತಂಗಡಿ ಶ್ರೀ ಗುರುದೇವ ಪದವಿ ಪೂರ್ವ ಕಾಲೇಜಿನಲ್ಲಿ ಅಂತರರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆ ನಡೆಯಿತು.

ಕಾರ್ಯಕ್ರಮ ಉದ್ದೇಶಿಸಿ ಕಾಲೇಜಿನ ಉಪ ಪ್ರಾಂಶುಪಾಲ ಬಿ. ಎ. ಸಮೀವುಲ್ಲಾ ಮಾತನಾಡಿ, ‘ ಬದುಕು ಉತ್ತಮವಾಗಿರಲು ದುಶ್ಚಟ ಮುಕ್ತರಾಗಿರಬೇಕು. ವಿದ್ಯಾರ್ಥಿ ಬದುಕಲ್ಲಿ ಕೇವಲ ವಿದ್ಯಾರ್ಜನೆಯೆಡೆಗೆ ಮಾತ್ರ ಗಮನವಿರಿಸಿ. ಯಾವುದೇ ಕಾರಣಕ್ಕೂ ಮಾದಕ ದ್ರವ್ಯದ ಸೆಳೆತಕ್ಕೆ ಬಲಿಯಾಗಬಾರದು ‘ ಎಂದರು.

ಕಾಲೇಜಿನ ಪ್ರಾಂಶುಪಾಲ ಸುಕೇಶ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು.

ಕಾಲೇಜಿನ ಕಾರ್ಯಕ್ರಮದ ಬಳಿಕ ಕಾಲೇಜಿನ ಎನ್ ಎಸ್ ಎಸ್ ವಿದ್ಯಾರ್ಥಿಗಳು ಬೆಳ್ತಂಗಡಿ ತಾಲ್ಲೂಕು ವ್ಯಾಪ್ತಿಯ ಪೊಲೀಸ್ ಠಾಣೆಗಳ ವತಿಯಿಂದ ನಡೆದ ಮಾದಕ ವಸ್ತು ವಿರೋಧಿ ಜಾಥಾ ದಲ್ಲಿ ಭಾಗವಹಿಸಿದರು.

ಈ ಸಂದರ್ಭದಲ್ಲಿ ಕಾಲೇಜಿನ ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿಗಳಾದ ಚಂದನಾ, ಸುಷ್ಮಾ ಹಾಗೂ ದೈಹಿಕ ಶಿಕ್ಷಣ ನಿರ್ದೇಶಕ ರವಿರಾಮ್ ಶೆಟ್ಟಿ ಇದ್ದರು.

Related posts

ಗೇರುಕಟ್ಟೆ ಪರಪ್ಪು ಎಸ್.ಎಸ್.ಎಫ್ ಯೂನಿಟ್ ನ ಸದಸ್ಯರು ಸಾಹಿತ್ಯೋತ್ಸವದಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆ

Suddi Udaya

ಉಜಿರೆ : ಗ್ರಾಮ ಪಂಚಾಯತ್ ಗ್ರಾಮ ಸಭೆ

Suddi Udaya

ಚಾರ್ಮಾಡಿ ಘಾಟಿಯಲ್ಲಿ ಪದೇ ಪದೇ ಸಂಭವಿಸುತ್ತಿರುವ ಕಾಳ್ಗಿಚ್ಚು ತಡೆಯಲು ಕೊನೆಗೂ ಅರಣ್ಯ ಇಲಾಖೆಯಿಂದ ಸಿಬ್ಬಂದಿ ನಿಯೋಜನೆ

Suddi Udaya

ಲಾಯಿಲ ಮತಗಟ್ಟೆಗೆ ವಿಧಾನ ಪರಿಷತ್ ಶಾಸಕ ಹರೀಶ್ ಕುಮಾರ್ ಭೇಟಿ

Suddi Udaya

ಗಾಯಕಿ ನಂದಶ್ರೀ ಸಂಗೀತ ಪರೀಕ್ಷೆಯಲ್ಲಿ ಅದ್ಭುತ ಸಾಧನೆ

Suddi Udaya

ಭೀಮಾ ಕೋರೆಗಾಂವ್ ವಿಜಯೋತ್ಸವದ ದಿನಾಚರಣೆ ಪ್ರಯುಕ್ತ ಸ್ವಾಭಿಮಾನಿ ದಿಗ್ವಿಜಯ ಹಾಗೂ ಬಿವಿಎಫ್ ಪದಗ್ರಹಣ

Suddi Udaya
error: Content is protected !!